ಹಿರಿಯ ನಟ ಶಿವರಾಮ್ 'ದೇವರು ಬೇಕಾಗಿದ್ದಾರೆ' ಎಂಬ ಸಿನಿಮಾದಲ್ಲಿ ನಟಿಸಿದ್ದು, ಆ ಚಿತ್ರದ ಟ್ರೆಲರ್ ಬಿಡುಗಡೆಯಾಗಿದೆ.
ಸಾಮಾನ್ಯವಾಗಿ ಕೆಲವು ಜಾಹೀರಾತುಗಳಲ್ಲಿ ಅಥವಾ ಕಂಪನಿಗಳ ಗೇಟ್ ಮುಂದೆ ಕೆಲಸದವರು ಬೇಕಾಗಿದ್ದಾರೆ ಎನ್ನುವುದನ್ನು ನೋಡಿದ್ದೀವಿ. ಇದೀಗ ಕನ್ನಡ ಚಿತ್ರರಂಗದಲ್ಲಿ 'ದೇವರು ಬೇಕಾಗಿದ್ದಾರೆ' ಎಂಬ ಹೆಸರಿನ ಹೊಸ ಪ್ರಯೋಗದ ಉತ್ತಮ ಕಥಾಹಂದರವುಳ್ಳ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.
ಚಿತ್ರದಲ್ಲಿ ಹಿರಿಯ ನಟ ಶಿವರಾಮ್, ಮಾಸ್ಟರ್ ಅನೂಪ್, ಪ್ರಸಾದ್, ಸತ್ಯನಾಥ್, ನಾಗೇಶ್ ಕಾರ್ತಿಕ್ ಸೇರಿದಂತೆ ಅನೇಕರಿದ್ದಾರೆ. ಇನ್ನೂ ಈ ಚಿತ್ರವನ್ನು ಕೆಂಜಾ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗುವನ್ನು ಊರಿನ ಮಖ್ಯಸ್ಥ ರಂಗಣ್ಣ ಸಾಕುವರು. ಆತನಿಗೆ ಬುದ್ಧಿ ಬಂದಾಗ ತನ್ನ ತಂದೆ -ತಾಯಿ ದೇವರ ಬಳಿ ಇದ್ದಾರೆಂದು ತಿಳಿದು ದೇವರನ್ನು ಹುಡುಕುತ್ತಾ ಹೋಗುವುದೇ ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ.
"ದೇವರು ಬೇಕಾಗಿದ್ದಾರೆ" ಚಿತ್ರವನ್ನು ಕೈವಾರ, ಗುಡಿಬಂಡೆ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಇನ್ನು ನಿರ್ದೇಶಕರಿಗೆ ಇದು ದ್ವಿತೀಯ ಸಿನಿಮಾವಾಗಿದ್ದು, ಈ ಹಿಂದೆ 'ಪ್ರೇಮ ಗೀಮ ಜಾನೆದೋ' ಎಂಬ ಲವ್ ಸ್ಟೋರಿ ಸಿನಿಮಾ ಮಾಡಿದ್ದರು. ಮೂವೀಸ್ ಅಡಿಯಲ್ಲಿ ಸಿನಿಮಾ ಮೂಡಿ ಬಂದಿದ್ದು. ಮುಂದಿನ ತಿಂಗಳು ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.