ರಾಧಿಕಾ ಅವರಂತ ನಟಿ ಬಂದ್ರೆ ಖಂಡಿತ ನಾನು ಮುಂದೆ " ತವರಿಗೆ ಬಾ ತಂಗಿ" ಹಾಗೂ 'ಅಣ್ಣ-ತಂಗಿ' ಯಂಥ ಸಿನಿಮಾ ಮಾಡುತ್ತೇನೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ದ್ರೋಣ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಶಿವಣ್ಣನಿಗೆ ಅಭಿಮಾನಿಗಳು ತವರಿಗೆ ಬಾ ತಂಗಿ ಹಾಗೂ ಅಣ್ಣತಂಗಿ ಅಂತಹ ಫ್ಯಾಮಿಲಿ ಸೆಂಟಿಮೆಂಟ್ ಚಿತ್ರ ಮಾಡಿ ಎಂದು ಡಿಮ್ಯಾಂಡ್ ಮಾಡಿದ್ರು.
ಇದಕ್ಕೆ ನಗುತ್ತಲೇ ಉತ್ತರಿಸಿದ ಸೆಂಚುರಿ ಸ್ಟಾರ್, ನನಗೂ ಅಂತಹ ಸಿನಿಮಾ ಮಾಡೋಕೆ ಇಷ್ಟ . ಅದ್ರೆ ಏನ್ಮಾಡೋದು, ರಾಧಿಕಾ ಅವರಂತಹ ನಟಿ ಸಿಗೋದು ಕಷ್ಟ. ಒಂದು ವೇಳೆ ಅಂತಹ ನಟಿ ಸಿಕ್ರೆ ಖಂಡಿತ ಸಿನಿಮಾ ಮಾಡ್ತಿನಿ. ಈಗ ಅಂತ ಸಿನಿಮಾಗಳನ್ನು ಬೇರೆ ವೇ ನಲ್ಲೇ ಮಾಡಬೇಕು. ಅದು ತುಂಬಾ ಕಷ್ಟ ಅದರೆ ಖಂಡಿತ ಮಾಡ್ತಿನಿ ಎಂದು ಶಿವಣ್ಣ ಹೇಳಿದರು.