ETV Bharat / sitara

ಆಸ್ಪತ್ರೆಯಿಂದ ನಟ ಶರಣ್ ಡಿಸ್ಚಾರ್ಜ್​​: ಅವತಾರ ಪುರುಷನ ಆರೋಗ್ಯ ಸ್ಥಿತಿ ಹೇಗಿದೆ? - ಆಸ್ಪತ್ರೆಯಿಂದ ನಟ ಶರಣ್ ಡಿಸ್ಚಾರ್ಜ್​​

ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್​ ಇಂದು ಡಿಸ್ಚಾರ್ಜ್​ ಆಗಿದ್ದಾರೆ. ನೋವು ಕಡಿಮೆಯಾಗದಿದ್ದರೆ ಆಪರೇಷನ್​ ಮಾಡುವುದಾಗಿ ವೈದ್ಯರು ತಿಳಿಸಿದ್ದಾರಂತೆ.

Kn_bng_03_sharan_discharged_video_ka10018
ಆಸ್ಪತ್ರೆಯಿಂದ ನಟ ಶರಣ್ ಡಿಸ್ಚಾರ್ಜ್​​ : ವೈದ್ಯರು ಹೇಳಿದ್ದೇನು ಗೊತ್ತಾ?
author img

By

Published : Sep 27, 2020, 4:31 PM IST

Updated : Sep 27, 2020, 6:19 PM IST

ಬೆಂಗಳೂರು : ನಿನ್ನೆ ಬೆಳಗ್ಗೆ ಹೊಟ್ಟೆ ನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್ ಇಂದು ಡಿಸ್ಚಾರ್ಜ್ ಆಗಿದ್ದಾರೆ.

ನಿನ್ನೆ ಶೂಟಿಂಗ್​​ಗೆ ತೆರಳಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ನಟ ಶರಣ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು‌ ಎಕ್ಸ್​​​ರೆ ಮಾಡಿ ನಂತರ ಕಿಡ್ನಿ ಸ್ಟೋನ್ ಇರುವುದು ಗೊತ್ತಾಗಿದೆ. ಹೀಗಾಗಿ ಒಂದು ದಿನದ ಮಟ್ಟಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಆಸ್ಪತ್ರೆಯಿಂದ ನಟ ಶರಣ್ ಡಿಸ್ಚಾರ್ಜ್​​: ಅವತಾರ ಪುರುಷನ ಆರೋಗ್ಯ ಸ್ಥಿತಿ ಹೇಗಿದೆ?

ವೈದ್ಯರ ಸಲಹೆಯಂತೆ ಇಂದು ಆಸ್ಪತ್ರೆಯಿಂದ ನಟ ಶರಣ್ ಬಿಡುಗಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶರಣ್ ಕುಟುಂಬಸ್ಥರು ಆಸ್ಪತ್ರೆ ಬಳಿ ಹಾಜರಿದ್ದರು.

ನೋವು ಕಡಿಮೆ ಆಗದಿದ್ರೆ ಸರ್ಜರಿ

ನಾನು ಆಸ್ಪತ್ರೆಯಲ್ಲಿದ್ದರೂ, ಮನಸ್ಸಿರೋದು ಸಿನಿಮಾ ಕಡೆಯೇ. ನಿನ್ನೆ ತಡೆಯೋಕೆ ಆಗದಷ್ಟು ನೋವು ಕಾಣಿಸಿಕೊಂಡಿತ್ತು. ನನ್ನ ಜೀವನದಲ್ಲಿ ಇಂತಹ ನೋವು ಅನುಭವಿಸಿರಲಿಲ್ಲ. ಹಿಂದಿನ ಎರಡು ದಿನ ನೋವು ಕಾಣಿಸಿಕೊಂಡಿದೆ. ಆದರೆ ಅದು ನನಗೆ ಗೊತ್ತಾಗಿರಲಿಲ್ಲ. ಮಸಲ್ ಕ್ಯಾಚ್ ಆಗಿರಬೇಕು ಅಂದುಕೊಂಡಿದ್ದೆ.

ಆದರೆ, ನಿನ್ನೆ ಕಾಣಿಸಿಕೊಂಡ ನೋವು ತೀವ್ರವಾಗಿತ್ತು. ಅವತಾರ ಪುರುಷ ಟೀಂನವರೇ ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದರು. ವೈದ್ಯರು ಪರೀಕ್ಷೆ ನಡೆಸಿ ಕಿಡ್ನಿ ಸ್ಟೋನ್ ಆಗಿದೆ ಅಂತಾ ತಿಳಿಸಿದ್ದಾರೆ. ಸಣ್ಣ ಪ್ರಮಾಣದಲ್ಲಿ ಸ್ಟೋನ್ ಆಗಿದೆ. ಸದ್ಯಕ್ಕೆ ಏನು ತೊಂದರೆ ಇಲ್ಲ. ಎರಡು ದಿನ ರೆಸ್ಟ್ ಮಾಡೋಕೆ ಹೇಳಿದ್ದಾರೆ. ಮೂರು ದಿನಗಳ ಬಳಿಕ ಕಡಿಮೆ ಆಗದಿದ್ದರೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ಹೇಳಿದ್ದಾರೆ ಎಂದು ನಟ ಶರಣ್ ತಿಳಿಸಿದ್ದಾರೆ.

Last Updated : Sep 27, 2020, 6:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.