ಶಂಕರ್ ನಾಗ್ ಅಭಿಮಾನಿಯ ಅಭಿಮಾನದ ಕಥೆ ಹೊಂದಿರುವ 'ಫ್ಯಾನ್' ಚಿತ್ರವು ಸೆನ್ಸಾರ್ ಬೋರ್ಡ್ನಿಂದ ಗ್ರೀನ್ ಸಿಗ್ನಲ್ ಪಡೆದಿದ್ದು, ಆಗಸ್ಟ್ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನವನಟ ಆರ್ಯನ್, ಶಂಕರನಾಗ್ ಅಭಿಮಾನಿಯಾಗಿ 'ಫ್ಯಾನ್' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಕಿರುತೆರೆಯಲ್ಲಿ ಯಶಸ್ವಿ ಸೀರಿಯಲ್ಗಳನ್ನು ಮಾಡಿ ಸಕ್ಸಸ್ ಆಗಿರುವ ದರ್ಶಿತ್ ಭಟ್ ಅವರು ಫ್ಯಾನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 'ಫ್ಯಾನ್' ಚಿತ್ರವು ಕರಾಟೆ ಕಿಂಗ್, ನಟ, ನಿರ್ದೇಶಕ ಶಂಕರ್ ನಾಗ್ ಅವರ ಜೀವನ ಚರಿತ್ರೆಯಿಂದ ಪ್ರೇರಿತವಾದ ಸಿನಿಮಾ ಎನ್ನಲಾಗ್ತಿದೆ.
ದಕ್ಷಿಣ ಕನ್ನಡದ ಸೊಗಡಿನ ಚಿತ್ರಣ ಈ ಸಿನಿಮಾದಲ್ಲಿದ್ದು, ಚಿತ್ರದ ಹೆಸರೇ ಸೂಚಿಸುವಂತೆ ಇದು ಶಂಕರ್ ನಾಗ್ ಅಭಿಮಾನಿವೋರ್ವನ ಕಥೆಯಾಗಿದೆ. ಚಿತ್ರದಲ್ಲಿ ಶಂಕರ್ ನಾಗ್ ಅಭಿಮಾನಿಯಾಗಿ ನವ ನಟ ಆರ್ಯನ್ ಲೀಡ್ ರೋಲ್ ಪ್ಲೇ ಮಾಡಿದ್ದಾರೆ. ಇನ್ನು ನಾಯಕಿಯಾಗಿ ಅದ್ವಿತಿ ಶೆಟ್ಟಿ ನಟಿಸಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಹಾಗೂ ನಿರ್ದೇಶಕ ದರ್ಶನ್ ಒಂದೊಂದು ಹಾಡನ್ನು ಬರೆದಿದ್ದಾರೆ. ಅಲ್ಲದೆ ವಿಜಯ್ ಪ್ರಕಾಶ್, ಸಂಚಿತ್ ಹೆಗಡೆ, ಕಾರ್ತಿಕ್, ಅಂಕಿತ ಕುಂಡು ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ.
ಇನ್ನು 'ಫ್ಯಾನ್' ಚಿತ್ರವನ್ನು ಎಸ್ಎಲ್ಎನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಸವಿತಾ ಈಶ್ವರ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಆಗಸ್ಟ್ 23 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.