ETV Bharat / sitara

ಜನರ ಹಸಿವು ನೀಗಿಸುತ್ತಿರುವ ನೀನಾಸಂ ಸತೀಶ್ - ಆಹಾರ ವಿತರಣೆ

ಲೂಸಿಯಾ ಸಿನಿಮಾ ಖ್ಯಾತಿಯ ಸತೀಶ್ ನೀನಾಸಂ, ಗೆಳೆಯರಾದ ನಿತಿನ್ ಹಾಗೂ ಪ್ರಮೋದ್ ಜೊತೆಗೂಡಿ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.

actor satish distributing food for poor
ಜನರ ಹಸಿವು ನೀಗಿಸುತ್ತಿರುವ ಲೂಸಿಯಾ ಸತೀಶ್
author img

By

Published : May 25, 2021, 2:09 PM IST

Updated : May 25, 2021, 3:07 PM IST

ಕೋವಿಡ್​ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸೆಮಿ ಲಾಕ್​​​​ಡೌನ್ ಜಾರಿ ಮಾಡಿದೆ. ಪರಿಣಾಮ ಸಾವಿರಾರು ಕೂಲಿ ಕಾರ್ಮಿಕರು, ಭಿಕ್ಷುಕರು ಸೇರಿ ಹಲವರು ಒಂದೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಿನಿಮಾ ತಾರೆಯರಾದ ರಾಗಿಣಿ ದ್ವಿವೇದಿ, ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ, ಉಪೇಂದ್ರ ಸೇರಿದಂತೆ ಹಲವು ಸೆಲೆಬ್ರಿಟಿಗಳು ಹಸಿದವರ ಹೊಟ್ಟೆಯನ್ನು ತುಂಬಿಸುವ ಕೆಲಸ ಮಾಡುತ್ತಿದ್ದಾರೆ.

ಜನರ ಹಸಿವು ನೀಗಿಸುತ್ತಿರುವ ನೀನಾಸಂ ಸತೀಶ್ ತಂಡ

ಇದೀಗ ಲೂಸಿಯಾ ಸಿನಿಮಾ ಖ್ಯಾತಿಯ ಸತೀಶ್ ನೀನಾಸಂ, ಗೆಳೆಯರಾದ ನಿತಿನ್ ಹಾಗೂ ಪ್ರಮೋದ್ ಜೊತೆಗೂಡಿ ಗಾಂಧಿ ಬಜಾರ್ ಸುತ್ತಮುತ್ತಲಿನ ಕೂಲಿ ಕಾರ್ಮಿಕರು ಹಾಗೂ ಊಟಕ್ಕೆ ಕಷ್ಟ ಪಡುತ್ತಿರುವ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ‌.

ಇದನ್ನೂ ಓದಿ: ಟ್ರೋಲ್ ಆದ ದಿವ್ಯಾ ಸುರೇಶ್ ವಿಡಿಯೋ.. ಇದಕ್ಕೆ ದಿವ್ಯಾ ಕೊಟ್ಟ ಉತ್ತರ ಹೀಗಿತ್ತು!

ಇಂದು ಗಾಂಧಿ ಬಜಾರ್​ನಲ್ಲಿ ಜನರಿಗೆ ಊಟ ವಿತರಿಸಿದ್ದಾರೆ. ಹೀಗೆ ಬೇರೆ ಏರಿಯಾಗಳಲ್ಲಿರುವ ಕಾರ್ಮಿಕರಿಗೂ ಸಹ ಊಟವನ್ನು ಕೊಡುವ ಕೆಲಸವನ್ನು ಸತೀಶ್ ನೀನಾಸಂ ಹಾಗೂ ಅವ್ರ ತಂಡ ಮಾಡುತ್ತಿದೆ.

Last Updated : May 25, 2021, 3:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.