ETV Bharat / sitara

ಸ್ವಾಮಿ ವಿವೇಕಾನಂದರ ನುಡಿಗಳನ್ನು ತಮ್ಮ ಖಡಕ್​ ಕಂಠದಿಂದ ಹೇಳಿದ ಡೈಲಾಗ್​​ ಕಿಂಗ್​​​​ - Saikumar remains Swamy Vivekananda

ತಮ್ಮ ಖಡಕ್​ ಡೈಲಾಗ್​​​​ಗಳಿಂದಲೇ ಹೆಸರಾದ ದಕ್ಷಿಣ ಭಾರತದ ಖ್ಯಾತ ನಟ ಸಾಯಿಕುಮಾರ್ ಸ್ವಾಮಿ ವಿವೇಕಾನಂದ ಅವರನ್ನು ನೆನೆದಿದ್ದಾರೆ. ಚಿಕಾಗೋನಲ್ಲಿ ಅವರು ಆಡಿದ ಮಾತುಗಳನ್ನು ಆಯ್ದು ಸಾಯಿಕುಮಾರ್ ವಿಡಿಯೋವೊಂದನ್ನು ಮಾಡಿದ್ದಾರೆ.

swamy vivekananda speech
ಡೈಲಾಗ್​​ ಕಿಂಗ್​​​​
author img

By

Published : Sep 12, 2020, 2:23 PM IST

Updated : Sep 12, 2020, 3:17 PM IST

ಡೈಲಾಗ್ ಕಿಂಗ್ ಸಾಯಿಕುಮಾರ್ ನಟ ಮಾತ್ರವಲ್ಲ ನಮ್ಮ ಸಂಸ್ಕೃತಿ, ದೇಶದ ಅಭಿಮಾನಕ್ಕೆ ತಮ್ಮ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇದೀಗ ಅವರು ಸ್ವಾಮಿ ವಿವೇಕಾನಂದ ಅವರನ್ನು ನೆನೆದು ಅವರ ನುಡಿಗಳನ್ನು ಹೇಳಿರುವ ವಿಡಿಯೋವೊಂದು ರಿವೀಲ್ ಆಗಿದೆ.

ಸಾಯಿಕುಮಾರ್​ ಧ್ವನಿಯಲ್ಲಿ ಸ್ವಾಮಿ ವಿವೇಕಾನಂದರ ನುಡಿಗಳು

ಸುಮಾರು 127 ವರ್ಷಗಳ ಹಿಂದೆ, ಅಂದರೆ 1893 ಸೆಪ್ಟೆಂಬರ್ 11 ರಂದು ಸ್ವಾಮಿ ವಿವೇಕಾನಂದ ಅವರು ಅಮೆರಿಕದ ಚಿಕಾಗೋನಲ್ಲಿ ಆಡಿದ ಮಾತುಗಳು ವಿಶ್ವ ಮಟ್ಟದಲ್ಲಿ ದಾಖಲೆ ಆಗಿದೆ. ಸ್ವಾಮಿ ವಿವೇಕಾನಂದ ಅವರ ಭಾಷಣದ ಸಾರಾಂಶವನ್ನು ಅವರ ಪದಗಳಿಂದಲೇ ಆಯ್ದು ಬಹು ಭಾಷಾ ಸುಪ್ರಸಿದ್ದ ನಟ ಸಾಯಿಕುಮಾರ್ ವೀಡಿಯೋ ತುಣುಕೊಂದನ್ನು ತಯಾರಿಸಿದ್ದಾರೆ. ಸಾಯಿ ಕುಮಾರ್ ಆಂಗ್ಲ ಭಾಷೆಯಲ್ಲಿ ತಮ್ಮ ಖಡಕ್ ಕಂಠದಿಂದ ಆಡಿರುವ ಮಾತುಗಳು ಈಗ ಹಲವರ ಮೆಚ್ಚುಗೆ ಗಳಿಸಿದೆ.

swamy vivekananda speech
ಸಾಯಿ ಕುಮಾರ್

'ಪೊಲೀಸ್ ಸ್ಟೋರಿ'ಗೂ ಮುನ್ನ ಸಾಯಿಕುಮಾರ್​​​​ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡಾ 1995 ರಲ್ಲಿ ನಟಿಸಿದ 'ಪೊಲೀಸ್ ಸ್ಟೋರಿ' ಚಿತ್ರ ಅವರಿಗೆ ಬಹಳ ಹೆಸರು ನೀಡಿತು. ಖಡಕ್ ಸಂಭಾಷಣೆಯೇ ಅವರ ಪ್ರಮುಖ ಅಸ್ತ್ರ. ಅದನ್ನೇ ಅವರ ಸಹೋದರ ರವಿಶಂಕರ್ ಕೂಡಾ 'ಕೆಂಪೇಗೌಡ' ಚಿತ್ರದಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.

Last Updated : Sep 12, 2020, 3:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.