ಕೊರೊನಾ ವೈರಸ್ನಿಂದ ಲಕ್ಷಾಂತರ ಜನ ತೊಂದರೆ ಅನುಭವಿಸುತ್ತಿದ್ದಾರೆ. ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಗದೆ ಸಾವಿರಾರು ಜನರು ಪರದಾಡುತ್ತಿದ್ದಾರೆ.
ಈಗ ಕಿರುತೆರೆ ನಟ ರಮೇಶ್ ಪಂಡಿತ್ ಮತ್ತು ಸುನೇತ್ರ ಪಂಡಿತ್ ಬಳಿಕ ಕೊರೊನಾ ಬಿಸಿ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರಿಗೂ ತಟ್ಟಿದೆ. ಕೊರೊನಾ ಬಗ್ಗೆ ಯಾರು ಬೇಜವಾಬ್ದಾರಿಯಿಂದ ವರ್ತಿಸಬೇಡಿ ಅಂತ ಸಾಧು ಕೋಕಿಲ ಆತಂಕ ವ್ಯಕ್ತಪಡಿಸಿದ್ದಾರೆ.
ಉಪೇಂದ್ರ ಮತ್ತು ಹರಿಪ್ರಿಯಾ ಅಭಿನಯದ ಲಗಾಮ್ ಚಿತ್ರದ ಮುಹೂರ್ತ ಸಂಧರ್ಭದಲ್ಲಿ ಕೊರೊನಾ ಬಗ್ಗೆ ಮಾತನಾಡಿದ ಸಾಧು ಕೋಕಿಲ ಅವರು, ತಮ್ಮ ಅಣ್ಣನ ಮಗನಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಹಾಗಾಗಿ, ಇದರ ಸಮಸ್ಯೆ ಏನು ಎಂಬುದನ್ನು ನಾನು ಹತ್ತಿರದಿಂದ ನೋಡಿದ್ದೇನೆ.
ನಮ್ಮ ಅಣ್ಣನ ಮಗನಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆದ್ರೆ, ಈಗ ನೆಗೆಟಿವ್ ಬಂದಿದೆ. ಆದರೂ ಅವನಿಗೆ ಉಸಿರಾಟ ತೊಂದರೆ ಆಗುತ್ತಿದೆ. ಒಬ್ಬ ಸೆಲೆಬ್ರಿಟಿಯಾಗಿ ನಾನು ಒಂದು ಆಕ್ಸಿಜನ್ ಪಡಿಯೋಕೆ ಪರದಾಡಿದ್ದೇನೆ. ದಯವಿಟ್ಟು ಎಲ್ಲರೂ ಹುಷಾರಾಗಿರಿ ಎಂದರು.
ಕೊರೊನಾ ವೈರಸ್ ಬಗ್ಗೆ ಟಿವಿಯಲ್ಲಿ ತೋರಿಸೋದು ಸುಳ್ಳು ಅಂದುಕೊಳ್ಳಬೇಡಿ. ಹಬ್ಬ, ಹರಿದಿನ, ಜಾತ್ರೆ ಎಲ್ಲಾ ಬಿಟ್ಟು ಹುಷಾರಾಗಿರಿ ಎಂದು ಸಾಧು ಕೋಕಿಲ ಜನರಿಗೆ ಕಿವಿಮಾತು ಹೇಳಿದ್ದಾರೆ.