ETV Bharat / sitara

ಹೆಂಡತಿ ಮಕ್ಕಳ ಜೊತೆ ಹೋಂ ಕ್ವಾರಂಟೈನ್​ಗೆ ಒಳಗಾದ ನಟ ರವಿಶಂಕರ್ ಗೌಡ - Actor Ravishankar Gowda

ರವಿಶಂಕರ್ ಗೌಡ ವಾಸವಿರುವ ಹೊಸಕೆರೆಹಳ್ಳಿ ಪ್ರೆಸ್ಟೀಜ್ ಅಪಾರ್ಟ್​ಮೆಂಟ್​ನಲ್ಲಿ ನಿನ್ನೆ ಇಬ್ಬರಿಗೆ ಕೊರೊನಾ ವಕ್ಕರಿಸಿದೆ. ಈ ಹಿನ್ನೆಲೆ ಇವರು ತಮ್ಮ ಕುಟುಂಬ ಸಮೇತ ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

Actor Ravishankar Gowda
ನಟ ರವಿಶಂಕರ್ ಗೌಡ
author img

By

Published : Jun 25, 2020, 6:08 AM IST

ಹೆಂಡತಿ ಹಾಗೂ ಇಬ್ಬರು ಮಕ್ಕಳ ಜೊತೆ ನಟ ರವಿಶಂಕರ್ ಗೌಡ 14 ದಿನಗಳ ಕಾಲ ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ರವಿಶಂಕರ್ ಗೌಡ ವಾಸವಿರುವ ಹೊಸಕೆರೆಹಳ್ಳಿ ಪ್ರೆಸ್ಟೀಜ್ ಅಪಾರ್ಟ್​ಮೆಂಟ್​ನಲ್ಲಿ ನಿನ್ನೆ ಇಬ್ಬರಿಗೆ ಕೊರೊನಾ ವಕ್ಕರಿಸಿದೆ. ದುರಂತ ಅಂದರೆ ಅದರಲ್ಲಿ ಒಬ್ಬರು ರವಿಶಂಕರ್ ಗೌಡ ಎದುರು ಮನೆವಾಸಿ. ಆದ್ದರಿಂದ ಇವರು ವಾಸವಿರುವ ಫ್ಲೋರ್​ಅನ್ನು ಲಾಕ್ ಮಾಡಿರುವ ಕಾರಣ ಈ ಕುಟುಂಬ ಹದಿನಾಲ್ಕು ದಿನಗಳ ಕಾಲ ಹೋಂ ಕ್ವಾರಂಟೈನ್​ಗೆ ಒಳಗಾಗಿದೆ.

ರವಿಶಂಕರ್ ಎದುರು ಮನೆ ವ್ಯಕ್ತಿಗೆ ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಕಿಚ್ಚ ಸುದೀಪ್ ,ಗಣೇಶ್, ಸೃಜನ್ ಲೋಕೇಶ್ ಸೇರಿದಂತೆ ಹಲವರು ಇವರನ್ನು ತಮ್ಮ ಮನೆಗೆ ಬರುವಂತೆ ಹೇಳಿದ್ದರು. ಆದರೆ, ಯಾರ ಮನೆಗೂ ಹೋಗದೆ ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.