ETV Bharat / sitara

ಕಿಚ್ಚನ 'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆ ನಟ ರವಿಶಂಕರ್ ಗೌಡ ಏನು​ ಹೇಳಿದ್ರು ಗೊತ್ತಾ? - ವಿಕ್ರಾಂತ್ ರೋಣ

ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್​ ಕಟ್ ಹೇಳಿರುವ ವಿಕ್ರಾಂತ್ ರೋಣ ಸಿನಿಮಾಕ್ಕೆ ನಟ ರವಿಶಂಕರ್ ಗೌಡ ಡಬ್ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ನಟ ರವಿಶಂಕರ್ ಗೌಡ ಸೋಷಿಯಲ್ ಮೀಡಿಯಾದಲ್ಲಿ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Vikrant Rona movie
'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆ ನಟ ರವಿಶಂಕರ್ ಗೌಡ ಟ್ವೀಟ್
author img

By

Published : Jun 11, 2021, 1:30 PM IST

ಕನ್ನಡ ಚಿತ್ರರಂಗವಷ್ಟೇ ಅಲ್ಲದೇ ಇಡೀ ಭಾರತೀಯ ಸಿನಿಮಾ ರಂಗದಲ್ಲಿ ಸಖತ್​​ ಸೌಂಡ್ ಆಗುತ್ತಿರುವ ಸಿನಿಮಾ ವಿಕ್ರಾಂತ್ ರೋಣ. ಕಿಚ್ಚ ಸುದೀಪ್ ಸಖತ್ ಸ್ಟೈಲಿಷ್ ಜೊತೆಗೆ ಡಿಫ್ರೆಂಟ್ ಅವತಾರದಲ್ಲಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಚಿತ್ರ‌ ಇದು.

ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್​ ಕಟ್ ಹೇಳಿರುವ ವಿಕ್ರಾಂತ್ ರೋಣ ಸಿನಿಮಾಕ್ಕೆ ನಟ ರವಿಶಂಕರ್ ಗೌಡ ಡಬ್ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ರವಿಶಂಕರ್ ಗೌಡ ಸೋಷಿಯಲ್ ಮೀಡಿಯಾದಲ್ಲಿ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.

  • ನಿರ್ದೇಶಕ ಅನೂಪ್ ಬಂಡಾರಿಗೆ ಹಾಗೂ
    ನಿರ್ಮಾಪಕ ಜಾಕ್ ಮಂಜು ಸಾರ್ ಗೆ ಅಭಿನಂದಿಸಿ...🙏🙏🙏 https://t.co/9IBfQVpj1t

    — ರವಿಶಂಕರ ಗೌಡ (@RavishankarGow5) June 10, 2021 " class="align-text-top noRightClick twitterSection" data=" ">

ಅಬ್ಬಾ!! ಸಿನಿಮಾ ಪ್ರಾರಂಭವಾದಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾಧ್ಯವಿಲ್ಲ. ಕುತೂಹಲದ ಮಹಾಪೂರ, ಗೆಳೆಯ ದೀಪುವಿನ ಅಭಿನಯಕ್ಕೆ ಮನ ಸೋಲದವರಿಲ್ಲ. ಹೊಸ ಕಲಾವಿದರ ಅಚ್ಚುಕಟ್ಟಾದ ಅಭಿನಯಕ್ಕೆ ಅಭಿನಂದನೆಗಳು. ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಜಾಕ್ ಮಂಜು ಸಾರ್, ಈ‌ ಸಿನಿಮಾ‌ ರಿಲೀಸ್ ಆದ್ಮಲೇ ದೊಡ್ಡ ಮೈಲಿಗಲ್ಲು ಸೃಷ್ಟಿಸಲಿದೆ ಅಂತ ಭವಿಷ್ಯ ನುಡಿದಿದ್ದಾರೆ‌.

ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಶ್ರದ್ಧಾ ಶ್ರೀನಾಥ್ ಹೀಗೆ ದೊಡ್ಡ ದೊಡ್ಡ ಕಲಾವಿದರು ನಟಿಸಿದ್ದಾರೆ. ನಿರ್ಮಾಪಕ ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ 'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಇದು ಭಾರತೀಯ ಚಿತ್ರರಂಗದಲ್ಲಿ ಒಂದು ಮಹತ್ತರ ಸಿನಿಮಾ ಆಗಲಿದೆ ಎಂಬುದು ಅಭಿಮಾನಿಗಳ ನಂಬಿಕೆ.

ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಬಿಡುಗಡೆಗೊಳಿಸಲಾಗಿದ್ದು, ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು. ಚಿತ್ರವನ್ನ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಆಗಸ್ಟ್ 19ರಂದು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಇದನ್ನೂ ಓದಿ: ಆಫ್ರಿಕನ್ ಆನೆ ದತ್ತು ಪಡೆದು ದರ್ಶನ್‌ ಮನವಿ ಬೆಂಬಲಿಸಿದ ರಿಯಲ್ ಸ್ಟಾರ್ ಉಪ್ಪಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.