ETV Bharat / sitara

ತಾವು ಮೆಚ್ಚಿದ ಆ ಶಿಕ್ಷಕನಿಗೆ ಪತ್ರ ಬರೆದ ನಟ ರಮೇಶ್ ಭಟ್... ಏನಿದೆ ಆ ಲೆಟರ್​​ನಲ್ಲಿ?

author img

By

Published : Apr 3, 2020, 9:46 AM IST

ಸದ್ಯದ ಲಾಕ್ ಡೌನ್ ಸಂದರ್ಭದಲ್ಲಿ ನಟ ರಮೇಶ್ ಭಟ್ ಕೆಲವು ಒಳ್ಳೆಯ ಕೆಲಸಗಳನ್ನು ಕೈಗೊಂಡಿದ್ದಾರೆ. ಅದರಲ್ಲಿ ಮೊದಲಿಗೆ ತಾವು ಇಷ್ಟ ಪಟ್ಟ ಕೆಲಸಗಳಿಗೆ ಮೆಚ್ಚುಗೆ ಸೂಚಿಸುವುದು. ರಮೇಶ್​ ಭಟ್​, ಆನೇಕಲ್ ತಾಲೂಕಿನ ಅಂಜನ ವಿದ್ಯಾ ಕೇಂದ್ರದ ಶಿಕ್ಷಕ ಶ್ರೀ ಚನ್ನರಾಜುಗೆ ಒಂದು ಮೆಚ್ಚುಗೆಯ ಪತ್ರ ಬರೆದಿದ್ದಾರೆ.

Actor Ramesh Bhatt
ನಟ ರಮೇಶ್ ಭಟ್

ಬೆಂಗಳೂರು : ಕನ್ನಡದ ಜನಪ್ರಿಯ ಪೋಷಕ ನಟ, ಶಂಕರ್ ನಾಗ್ ಅವರ ಆಪ್ತ ಸ್ನೇಹಿತ ರಮೇಶ್ ಭಟ್, ವಯಸ್ಸು 73 ಆದರೂ ಬಹಳ ಅಪರೂಪದ ವ್ಯಕ್ತಿತ್ವ.

ಸದ್ಯದ ಲಾಕ್ ಡೌನ್ ಸಂದರ್ಭದಲ್ಲಿ ಕೆಲವು ಒಳ್ಳೆಯ ಕೆಲಸಗಳನ್ನು ಕೈಗೊಂಡಿದ್ದಾರೆ. ಅದರಲ್ಲಿ ಮೊದಲಿಗೆ ತಾವು ಇಷ್ಟ ಪಟ್ಟ ಕೆಲಸಗಳಿಗೆ ಮೆಚ್ಚುಗೆ ಸೂಚಿಸುವುದು. ರಮೇಶ್​ ಭಟ್​, ಆನೇಕಲ್ ತಾಲೂಕಿನ ಅಂಜನ ವಿದ್ಯಾ ಕೇಂದ್ರದ ಶಿಕ್ಷಕ ಶ್ರೀ ಚನ್ನರಾಜುಗೆ ಒಂದು ಮೆಚ್ಚುಗೆಯ ಪತ್ರ ಬರೆದಿದ್ದಾರೆ.

ಅಂಜನ ವಿದ್ಯಾ ಶಾಲೆಯಲ್ಲಿ ಒಂದು ದೇವಸ್ಥಾನವಿದೆ. ಶಾಲೆಗೆ ಬರುವ ಮಕ್ಕಳು ಪ್ರತಿ ದಿನ ಸ್ನಾನ ಮಾಡಿಕೊಂಡು ಬಂದು ಈ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಾರೆ. ಇದನ್ನು ಗಮನಿಸಿದ ರಮೇಶ್ ಭಟ್, ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಬೆಳಸುತ್ತಿರುವ ಆ ಶಾಲೆಗೆ ಒಂದು ಪತ್ರ ಬರೆದಿದ್ದಾರೆ. ಆ ಪತ್ರ ಹೀಗಿದೆ.

ಶಾಲೆಯಲ್ಲಿ ಆಚ್ಛಾದ ಪಾಠಗಳನ್ನು ಹೇಳುವುದು ವಾಡಿಕೆ. ಆದರೆ ನೀವು ಬದುಕಿಗೆ ಬೇಕಾದ ಸಂಸ್ಕಾರವನ್ನು ನೀಡುತ್ತಿದ್ದೀರ. ಇದು ಸಮಾಜಕ್ಕೆ ಸಜ್ಜನರನ್ನು ನೀಡುವ ಮಹತ್ಕಾರ್ಯ, ಸ್ನಾನ ಮಾಡಿದ ಶಾಲಾ ವಿಧ್ಯರ್ಥಿಗಳಿಗೆ ಪೂಜೆ ಮಾಡುವ ವಿಚಾರ ಅಂತರಂಗ ಹಾಗೂ ಬಹಿರಂಗ ಶುದ್ದಿಗೆ ಸರಳ ಉಪಾಯ ಎಂದು ರಮೇಶ್ ಭಟ್ ಅವರು ಶ್ಲಾಘಿಸಿದ್ದಾರೆ.

Actor Ramesh Bhatt wrote a letter to the school he admired
ರಮೇಶ್ ಭಟ್ ಬರೆದ ಪತ್ರ

ಅಂದಹಾಗೆ ರಮೇಶ್ ಭಟ್, ಕೊರೊನಾ ಭೀತಿ ಉಂಟಾಗುದಕ್ಕಿಂತ ಮುಂಚೆ ‘ಸಾರಾ ವಜ್ರ’ ಚಿತ್ರದ ಚಿತ್ರೀಕರಣಕ್ಕೆ ಮಂಗಳೂರಿಗೆ ಒಂದು ದಿನ ಹೋಗಿ ಬಂದಿದ್ದರು. ಆಗ ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ.

ಸದ್ಯ ಕೊರೊನಾ ಹಿನ್ನೆಲೆ ಮನೆಯಲ್ಲಿರುವ ರಮೇಶ್ ಭಟ್​, ಸಿನಿಮಾ ನೋಡುವುದರ ಜೊತೆಗೆ ಕಥೆ ಪುಸ್ತಕ ಓದುವುದಕ್ಕೂ ಸಮಯ ಮೀಸಲಿಟ್ಟಿದ್ದಾರೆ. ಅದರಲ್ಲಿ ಅವರಿಗೆ ಬಹಳ ಇಷ್ಟವಾದದ್ದು ‘ನಮ್ಮಜ್ಜ’ ಕಥೆ. ಅದನ್ನು ತೆರೆಯ ಮೇಲೆ ತಂದರೆ ಬಹಳ ಸೊಗಸಾಗಿ ಇರುತ್ತದೆ ಎಂದು ಮನಸಿನಲ್ಲಿ ಲೆಕ್ಕ ಹಾಕುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.