ಕನ್ನಡ ಚಿತ್ರರಂಗದ ಹ್ಯಾಂಡ್ಸಮ್ ನಟ ಎಂದು ಕರೆಸಿಕೊಂಡಿರುವ ರಮೇಶ್ ಅರವಿಂದ್, ಅಂದಿನಿಂದ ಇಂದಿನವರೆಗೂ ಬೇಡಿಕೆಯಲ್ಲಿರುವ ಕಲಾವಿದ. ನಟನಾಗಿ, ನಿರೂಪಕನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಮೇಶ್ ಕರ್ನಾಟಕದಲ್ಲಿ ಮಾತ್ರವಲ್ಲ, ತಮಿಳುನಾಡಿನಲ್ಲಿ ಕೂಡಾ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: ಖ್ಯಾತ ಕ್ರಿಕೆಟಿಗ, ತೆಲುಗು ಸ್ಟಾರ್ ನಟಿಗೆ ನೋಟೀಸ್ ನೀಡಿದ ಕೇರಳ ಹೈ ಕೋರ್ಟ್
ಇತ್ತೀಚೆಗಷ್ಟೇ ಮಗಳು ನಿಹಾರಿಕಾ ಮದುವೆ ಮಾಡಿ ಅದೇ ಗುಂಗಿನಲ್ಲಿರುವ ರಮೇಶ್, ಮನುಷ್ಯನ ಮೂಡ್ ಬಗ್ಗೆ ಸೊಗಸಾಗಿ ತಮ್ಮದೇ ಮಾತುಗಳಲ್ಲಿ ಹೇಳಿದ್ದಾರೆ. ರಮೇಶ್, ತಮ್ಮ ಮಗಳು ನಿಹಾರಿಕಾ ಮದುವೆಯನ್ನು ಎಷ್ಟು ಅದ್ದೂರಿಯಾಗಿ ಮಾಡಿದ್ರು ಎನ್ನುವುದು ತಿಳಿದ ವಿಚಾರ. "ಯಾವುದೇ ಕಾರಣಕ್ಕೂ ನಿಮ್ಮ ಮೂಡ್ ಹಾಳುಮಾಡಿಕೊಳ್ಳದೆ ಮದುವೆಗೆ ಬರುವವರನ್ನು ಚೆನ್ನಾಗಿ ನೋಡಿಕೊಳ್ಳಬೇಕು" ಎಂದು ಮದುವೆ ಮಂಟಪಕ್ಕೆ ಹೋಗುವ ಮುನ್ನ, ಪತ್ನಿ ಅರ್ಚನಾ, ಮಗಳು ನಿಹಾರಿಕಾ, ಮಗ ಅರ್ಜುನ್ ರಮೇಶ್ ಹೇಳಿದ್ದರಂತೆ. "ಯಾವತ್ತೇ ಆಗಲಿ, ಎಂಥದ್ದೇ ಸನ್ನಿವೇಶ ಇರಲಿ, ನಮ್ಮ ಮೂಡ್ ಮತ್ತು ನಮ್ಮ ಮನಸ್ಸಿನ ಸ್ಥಿತಿಯನ್ನು ನಿರ್ಧರಿಸಬೇಕು" ಎಂದು ರಮೇಶ್ ಅರವಿಂದ್ ಅನೇಕ ಉದಾಹರಣೆಗಳನ್ನು ನೀಡುವ ಮೂಲಕ ವಿವರಿಸಿದ್ದಾರೆ. ಈ ವಿಡಿಯೋವನ್ನು ರಮೇಶ್ ಅರವಿಂದ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.