ETV Bharat / sitara

ಹೊಸಬರ ಪ್ರಯತ್ನಕ್ಕೆ ಬೆನ್ನು ತಟ್ಟಿದ ನಟ ರಕ್ಷಿತ್ ಶೆಟ್ಟಿ - undefined

ಕನ್ನಡದ 'ಆಪರೇಷನ್ ನಕ್ಷತ್ರ' ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಾಂಗ್​​ನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ
author img

By

Published : May 27, 2019, 5:53 PM IST

'ನಾ ಪರಿಚಯವಾಗದೇ ಈ ಒಲವಿಗೆ ಸಿಲುಕಿದೆ, ಹೇಗೆ ಹೇಳಲಿ ನನ್ನೀ ತಳಮಳ ಬಂಧಿಯಾಗಲೆ, ಆಸೆ ಮೂಡಿದೆ ಪ್ರೀತಿಯೊಂದಕೆ ಅತಿಥಿಯಾಗಲೇ...' ಎಂದು ಶುರುವಾಗುವ ಹಾಡು ಕೇಳಿ ಮೆಚ್ಚಿಕೊಂಡ ರಕ್ಷಿತ್ ಶೆಟ್ಟಿ, 'ಹೊಸಬರ ಹೊಸ ಪ್ರಯತ್ನ ಗೆಲ್ಲಬೇಕು. ಕನ್ನಡಕ್ಕೆ ಜಾಜ್ ಶೈಲಿಯ ಹಾಡು ಹೊಸತು. ಈ ರೀತಿಯ ಪ್ರಯೋಗ ಮಾಡಿರುವ ಸಂಗೀತ ನಿರ್ದೇಶಕರ ಕೆಲಸ ಇಷ್ಟವಾಯಿತು. ಸಾಹಿತ್ಯ ಮತ್ತು ಗಾಯಕ ಸಂಚಿತ್ ಹೆಗ್ಡೆ ಅವರು ಹೊಸ ಬಗೆಯಲ್ಲಿ ಹಾಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಚಿತ್ರ ಗೆಲುವು ನೀಡಲಿ. ಹೊಸಬರ ಪ್ರಯತ್ನಕ್ಕೆ ಶುಭವಾಗಲಿ' ಎಂದು ಶುಭ ಹಾರೈಸಿದ್ದಾರೆ.

ಪತ್ರಕರ್ತ ವಿಜಯ್ ಭರಮಸಾಗರ ಸಾಹಿತ್ಯ ಬರೆದಿರುವ ಈ ಹಾಡಿಗೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ ರಾಗ ಸಂಯೋಜಿಸಿದ್ದು, ಯುವ ಗಾಯಕ ಸಂಚಿತ್ ಹೆಗ್ಡೆ ಹಾಡಿದ್ದಾರೆ. ಮಧುಸೂಧನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಶಿವಸೀನ ಛಾಯಾಗ್ರಹಣ, ವೀರ್​​ಸಮರ್ಥ ಸಂಗೀತ, ಎರಡು ಗೀತೆಗಳಿಗೆ ಪತ್ರಕರ್ತ ವಿಜಯ್ ಭರಮಸಾಗರ ಅವರ ಸಾಹಿತ್ಯ, ಕಿಶೋರ್ ಮೇಗಳ ಮನೆ ಮಧುಸೂಧನ್ ಸಂಭಾಷಣೆ, ಕಿಟ್ಟು ಅರ್ಜುನ್ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸ, ಶರಣ್ ಗೆಣ್ಕಲ್ ಸಹ ನಿರ್ದೇಶನವಿದೆ.

rakshit shetty
ನಟ ರಕ್ಷಿತ್ ಶೆಟ್ಟಿಗೆ ಸನ್ಮಾನ

ಚಿತ್ರದಲ್ಲಿ ನಿರಂಜನ್ ಒಡೆಯರ್, ಅದಿತಿ ಪ್ರಭುದೇವ್, ಯಜ್ಞಾಶೆಟ್ಟಿ, ಲಿಖಿತ್ ಸೂರ್ಯ ನಾಯಕ, ನಾಯಕಿಯರಾದರೆ, ಉಳಿದಂತೆ ದೀಪಕ್‍ರಾಜ್ ಶೆಟ್ಟಿ, ಶ್ರೀನಿವಾಸ್ ಪ್ರಭು, ಗೋವಿಂದೇ ಗೌಡ,ವಿಜಯಲಕ್ಷ್ಮಿ,ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ ಟಿ.ಎಸ್. ಭರತ್ ಇನ್ನು ಮುಂತಾದವರ ತಾರಾ ಬಳಗವಿದೆ.

ಈ ಚಿತ್ರವನ್ನು ಫೈವ್ ಸ್ಟಾರ್ ಸಂಸ್ಥೆಯ ಲಾಂಛನದಲ್ಲಿ ನಂದಕುಮಾರ್ ಎನ್,ಅರವಿಂದ್ ಮೂರ್ತಿ ಟಿ.ಎಸ್.,ರಾಧಾಕೃಷ್ಣ ಹಾಗೂ ಕಿಶೋರ್ ಮೇಗಳ ಮನೆ ನಿರ್ಮಿಸುತ್ತಿದ್ದು, ಜೂನ್ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.