ETV Bharat / sitara

ಅಣ್ಣನ ಹೆಸರಲ್ಲಿ ಸ್ಥಾಪನೆಯಾಗಬೇಕು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ: ನಾಗತಿಹಳ್ಳಿ - undefined

ರಾಜಕುಮಾರ್ ಅವರ ಸಮಗ್ರ ಚಿತ್ರರಂಗದ ಸಂಚಾರದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆಯ ಅಗತ್ಯವಿದೆ. ರಾಜಕುಮಾರ್​, ಒಂದೇ ಒಂದು ಅಸಭ್ಯ, ಅಶ್ಲೀಲ ಚಿತ್ರಗಳಲ್ಲಿ ನಟಿಸಲಿಲ್ಲ. ಆದರೆ, ಪ್ರಸ್ತುತ ಚಿತ್ರರಂಗದಲ್ಲಿ ಮೌಲ್ಯ ಕುಸಿತವಾಗುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ರಾಜಕುಮಾರ್ ಜನ್ಮ ದಿನಾಚರಣೆ
author img

By

Published : Apr 25, 2019, 9:42 AM IST

Updated : Apr 25, 2019, 12:26 PM IST

ಬೆಂಗಳೂರು: ವರನಟ ಡಾ. ರಾಜಕುಮಾರ್ ಅವರು ಕನ್ನಡ ನಾಡಿನ ನೆಲ,ಜಲ ಹಾಗೂ ಭಾಷೆಯಲ್ಲಿ ಹಾಸು ಹೊಕ್ಕಾಗಿದ್ದಾರೆ ಎಂದು ನಿತ್ಯೋತ್ಸವ ಕವಿ ಕೆ. ಎಸ್ .ನಿಸಾರ್ ಅಹ್ಮದ್​​ ಬಣ್ಣಿಸಿದ್ದಾರೆ.

ಕನ್ನಡ ಚಲನಚಿತ್ರ ಅಕಾಡೆಮಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜಕುಮಾರ್ ಅವರ 91ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜಕುಮಾರ್ ಹಾಗೂ ಅವರ ಸ್ನೇಹ ಸಂಬಂಧದ ಬಗ್ಗೆ ಹಲವು ಘಟನೆಗಳನ್ನು ಮೆಲುಕು ಹಾಕಿದರು. ವರನಟನ ಸರಳತೆ ಹಾಗೂ ವಿಶಿಷ್ಟತೆ ವ್ಯಕ್ತಿತ್ವ ಎಂತಹವರನ್ನು ಅಚ್ಚರಿಗೊಳಿಸುವಂತದ್ದು. ಸಾತ್ವಿಕ ನೆಲೆಯಲ್ಲಿದ್ದ ಗೋಕಾಕ್ ಚಳುವಳಿ ಕ್ರಾಂತಿಕಾರಿಯಾಗಿ ರೂಪುಗೊಳ್ಳಲು ಅಣ್ಣಾವ್ರೇ ಕಾರಣ ಎಂದರು.

ರಾಜಕುಮಾರ್ ಅವರೊಂದಿಗೆ ಶಿವರಾಜ್ ಕುಮಾರ್ ಅವರ ಚಿತ್ರವೊಂದನ್ನು ನೋಡುವ ಅವಕಾಶವಿತ್ತು. ಆದರೆ, ಅದು ಈಡೇರಲಿಲ್ಲ. ಈ ಬಗ್ಗೆ ನನಗೆ ನೋವು ಉಂಟು ಎಂದು ಹೇಳಿದರು.

ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜಕುಮಾರ್ ಅವರ ಸಮಗ್ರ ಚಿತ್ರರಂಗದ ಸಂಚಾರದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆಯ ಅಗತ್ಯವಿದೆ. ಈ ಮೂಲಕ ಕನ್ನಡ ಚಿತ್ರರಂಗ ಬೆಳೆದು ಬಂದ ಹಾದಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ವರ್ಷವೊಂದಕ್ಕೆ 14 ಸಿನಿಮಾಗಳಲ್ಲಿ ನಟಿಸುವ ಮೂಲಕ ನಟನೆ ತಪಸ್ಸು ಎಂಬುದನ್ನು ಸಾಬೀತುಪಡಿಸಿದ ರಾಜಕುಮಾರ್​, ಒಂದೇ ಒಂದು ಅಸಭ್ಯ, ಅಶ್ಲೀಲ ಚಿತ್ರಗಳಲ್ಲಿ ನಟಿಸಲಿಲ್ಲ. ಆದರೆ, ಪ್ರಸ್ತುತ ಚಿತ್ರರಂಗದಲ್ಲಿ ಮೌಲ್ಯ ಕುಸಿತವಾಗುತ್ತಿದ್ದು, ಮನುಷ್ಯ ದ್ವೀಪವಾಗಿದ್ದಾನೆ. ರಾಜ್ ಇಂತಹ ಕಾಲಘಟ್ಟದಲ್ಲಿ ಇದ್ದರು ಎಂಬುದು ಇಂದಿಗೆ ಅಚ್ಚರಿಯನ್ನು ಉಂಟು ಮಾಡುತ್ತದೆ ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ರಾಜಕುಮಾರ್ ಅವರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗದವರು ಅತಿ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಾಗಿದ್ದರು.

Intro:ಬೆಂಗಳೂರು: ವರನಟ ಡಾ. ರಾಜಕುಮಾರ್ ಅವರು ಕನ್ನಡ ನಾಡಿನ ನೆಲ,ಜಲ ಹಾಗೂ ಭಾಷೆಯಲ್ಲಿ ಹಾಸು ಹೊಕ್ಕಾಗಿದ್ದಾರೆ ಎಂದು ನಿತ್ಯೋತ್ಸವ ಕವಿ ಕೆ. ಎಸ್ .ನಿಸಾರ್ ಅಹಮದ್ ಬಣ್ಣಿಸಿದ್ದಾರೆ.

Body:ಬೆಂಗಳೂರಿನಲ್ಲಿ ಕನ್ನಡ ಚಲನಚಿತ್ರ ಅಕಾಡೆಮಿ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜಕುಮಾರ್ ಅವರ 91ನೇ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಡಾ. ರಾಜಕುಮಾರ್ ಹಾಗೂ ಅವರ ಸ್ನೇಹ ಸಂಬಂಧದ ಬಗ್ಗೆ ಹಲವು ಘಟನೆಗಳನ್ನು ಮೆಲುಕು ಹಾಕಿದರು. ರಾಜಕುಮಾರ್ ಅವರ ಸರಳತೆ ಹಾಗೂ ವಿಶಿಷ್ಟತೆ ಎಂತಹವರನ್ನು ಅಚ್ಚರಿಗೊಳಿಸುವ ಅಂತಹ ವ್ಯಕ್ತಿತ್ವ ಅವರದ್ದು ಎಂದು ಬಣ್ಣಿಸಿದರು.
ಸಾತ್ವಿಕ ನೆಲೆಯಲ್ಲಿ ದಾ ಗೋಕಾಕ್ ಚಳುವಳಿ ಕ್ರಾಂತಿಕಾರಿ ಚಳುವಳಿ ಯಾಗಿ ರೂಪುಗೊಳ್ಳಲು ಡಾ. ರಾಜ್ ಕುಮಾರ್ ಅವರೇ ಕಾರಣ ಎಂದು ನೆನೆದರು.
ರಾಜಕುಮಾರ್ ಅವರೊಂದಿಗೆ ಶಿವರಾಜ್ ಕುಮಾರ್ ಅವರ ಚಿತ್ರವೊಂದನ್ನು ನೋಡುವ ಅವಕಾಶವಿತ್ತು. ಆದರೆ, ಅದು ಈಡೇರಲಿಲ್ಲ. ಈ ಬಗ್ಗೆ ನನಗೆ ನೋವು ಉಂಟು ಎಂದು ಹೇಳಿದರು.

Conclusion:ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜಕುಮಾರ್ ಅವರ ಸಮಗ್ರ ಚಿತ್ರರಂಗದ ಸಂಚಾರದ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆಯಾಗಬೇಕು ಅಗತ್ಯವಿದೆ ಎಂದು ಹೇಳಿದರು.
ಈ ಮೂಲಕ ಕನ್ನಡ ಚಿತ್ರರಂಗ ಬೆಳೆದು ಬಂದ ಹಾದಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ವರ್ಷವೊಂದಕ್ಕೆ 14 ಸಿನಿಮಾಗಳಲ್ಲಿ ನಟಿಸುವ ಮೂಲಕ ನಟನೆ ತಪಸ್ಸು ಎಂಬುದನ್ನು ಸಾಬೀತುಪಡಿಸಿದರು ಒಂದೇ ಒಂದು ಕೆಟ್ಟ ಅಸಭ್ಯ ಅಶ್ಲೀಲ ಚಿತ್ರಗಳಲ್ಲಿ ರಾಜ್ ನಟಿಸಲಿಲ್ಲ. ಆದರೆ, ಪ್ರಸ್ತುತ ದಿನೇ ದಿನೇ ಮೌಲ್ಯ ಕುಸಿತವಾಗುತ್ತಿದ್ದು, ಮನುಷ್ಯ ದ್ವೀಪವಾಗಿದ್ದಾನೆ. ರಾಜ್ ಇಂತಹ ಕಾಲಘಟ್ಟದಲ್ಲಿ ಇದ್ದರು ಎಂಬುದು ಇಂದಿಗೆ ಅಚ್ಚರಿಯನ್ನು ಉಂಟು ಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜಕುಮಾರ್ ಅವರ ಮಕ್ಕಳಾದ ಶಿವರಾಜ್ ಕುಮಾರ್ , ರಾಘವೇಂದ್ರ ರಾಜ್ ಕುಮಾರ್ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗದವರು ಅತಿ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
Last Updated : Apr 25, 2019, 12:26 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.