ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ ಅಂತಹ ಹಿಟ್ ಸಿನಿಮಾಗಳ ಹೀರೋ ರಾಘಣ್ಣ ಅವರ 25 ನೇ ಸಿನಿಮಾದ ಹೆಸರು ‘ಆಡಿಸಿದಾತ’. ಇದು ಸಹ ಡಾ!! ರಾಜಕುಮಾರ್ ಅವರ ‘ಕಸ್ತೂರಿ ನಿವಾಸ’ ಸಿನಿಮಾಕ್ಕೆ ಕನೆಕ್ಟ್ ಆಗುತ್ತದೆ. 'ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ' (ಚಿ ಉದಯಶಂಕರ್ ರಚನೆ) ....ಜಿ ಕೆ ವೆಂಕಟೇಶ್ ಅವರು ವಿರಹ ಧ್ವನಿಯಲ್ಲಿ ಹೇಳಿದ ಹಾಡಿನ ಸಾಲಿನಲ್ಲಿ ಬರುವ ಪದ ‘ಆಡಿಸಿದಾತ’ ಚಿತ್ರದ ಟೈಟಲ್.
30 ವರ್ಷಗಳ ಸಿನಿಮಾ ಪಯಣದಲ್ಲಿ ರಾಘಣ್ಣ ಅವರ ಈ ಸಿನಿಮಾಕ್ಕೆ ಮಹತ್ವ ಒದಗಿಬಂದಿದೆ. ಶ್ರೀ ಭದ್ರಕಾಳಮ್ಮ ಹಾಗೂ ಶ್ರೀ ವೀರ ಭದ್ರೇಶ್ವರ ಸ್ವಾಮಿ ಪ್ರೊಡಕ್ಷನ್ ಅಡಿ ಬಿ.ಎಂ ಚೇತನ್ ಈ ಚಿತ್ರದ ನಿರ್ಮಾಪಕರು. ಥ್ರಿಲ್ಲರ್ ಕಥಾ ಹಂದರದ ಈ ಚಿತ್ರಕ್ಕೆ ಹರೀಶ್ ಭಾರದ್ವಾಜ್ ನಿರ್ದೇಶನವಿರಲಿದೆ. 30 ದಿವಸ ಬೆಂಗಳೂರು ಹಾಗೂ ಮೈಸೂರು ಸುತ್ತ ಚಿತ್ರೀಕರಣ ಮಾಡಲಿದೆ.
ಮಣಿಕಾಂತ್ ಖದ್ರಿ ಸಂಗೀತ, ಉದಯ ಬಲ್ಲಾಳ್ ಛಾಯಾಗ್ರಹಣ, ಮಫ್ತಿ ಹರೀಶ್ ಸಂಕಲನ, ಶ್ರೀ ಹರ್ಷ ಸಂಭಾಷಣೆ, ಸುನಿಲ್ ರಾಡಿಗರ್ (ಹಿಂದಿ ಸಿನಿಮಾ) ಸಾಹಸದ ಜೊತೆಗೆ ಡಾ.ವಿ. ನಾಗೇಂದ್ರ ಪ್ರಸಾದ್, ಫಣಿಶ್ ಭಾರದ್ವಾಜ್ ಗೀತೆಗಳನ್ನು ರಚಿಸಿದ್ದಾರೆ. ಚಿತ್ರದಲ್ಲಿ ರಾಘಣ್ಣನ ಜೊತೆಗೆ ಅಭಿ, ಶ್ರೀ ಹಾಗೂ ಇನ್ನೂ ಕೆಲವರು ತಾರಾಗಣದಲ್ಲಿದ್ದಾರೆ.
‘ಚಿರಂಜೀವಿ ಸುಧಾಕರ್’ ಸಿನಿಮಾದಿಂದ ವೃತ್ತಿ ಆರಂಭಿಸಿದ ಅಣ್ಣಾವ್ರ ಎರಡನೇ ಪುತ್ರ ರಾಘಣ್ಣ ನಟಿಸಿರುವ ತ್ರಯಂಬಕಮ್ ಚಿತ್ರ ಮುಂದಿನ ತಿಂಗಳು 19ಕ್ಕೆ ‘’ ಬಿಡುಗಡೆಗೆಯಾಗಲಿದೆ.