ETV Bharat / sitara

ಕುಟುಂಬದ ಖರ್ಚು ಹೆಚ್ಚಾದಾಗ ಡಾ. ರಾಜ್ ಏನ್ ಮಾಡಿದ್ರು?...ಅಪ್ಪನ ತ್ಯಾಗ ರಿವೀಲ್ ಮಾಡಿದ ರಾಘಣ್ಣ - ಸರಳ ವ್ಯಕ್ತಿತ್ವ

ಸರಳ ಜೀವಿಯಾಗಿದ್ದ ರಾಜಕುಮಾರ್ ಯಾರಿಗೂ ಹೊರೆಯಾದವರಲ್ಲ. ತಮ್ಮ ಕಷ್ಟಗಳನ್ನು ತಾವೇ ನುಂಗಿಕೊಂಡು ಜೀವನ ಸವೆಸಿದವರು. ನುಡಿದಂತೆ ನಡೆದು ಇತರರಿಗೆ ಮಾದರಿಯಾದವರು. ಈ ನಟನ ಕುರಿತಾದ ಇಂಟ್ರೆಸ್ಟಿಂಗ್ ವಿಚಾರ ಈಗ ಬಹಿರಂಗವಾಗಿದೆ.

ಚಿತ್ರಕೃಪೆ : ಝೀ ಟಿವಿ ಫೇಸ್​​ಬುಕ್​​
author img

By

Published : Apr 30, 2019, 8:14 PM IST

ವರನಟ ರಾಜಕುಮಾರ್​ ಬಗ್ಗೆ ಎಷ್ಟು ಹೇಳಿದ್ರು ಕಡಿಮೆ. ಅವರು ನಟಿಸಿದ ಪ್ರತಿ ಚಿತ್ರಗಳಲ್ಲಿಯೂ ಸಾಮಾಜಿಕ ಕಳಕಳಿ ಸಂದೇಶಗಳಿದ್ದವು. ದೊಡ್ಡ ನಟನಾಗಿದ್ದರೂ ಸರಳ ಜೀವಿಯಾಗಿದ್ದ ರಾಜಕುಮಾರ್, ಯಾರಿಗೂ ಹೊರೆಯಾದವರಲ್ಲ.

ಶತಮಾನದ ಸಂತ ಎಂದು ಬಣ್ಣಿಸಲ್ಪಡುವ ಅಣ್ಣಾವ್ರು ಎಷ್ಟೊಂದು ತ್ಯಾಗಮಯಿ, ಸಹೃದಯಿ ಹಾಗೂ ಸರಳ ವ್ಯಕ್ತಿತ್ವ ಹೊಂದಿದ್ದರು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತು. ಇದೀಗ ದೇವತಾ ಮನುಷ್ಯನ ಮತ್ತೊಂದು ಮುಖವನ್ನು ಅವರ ಪುತ್ರ ನಟ ರಾಘವೇಂದ್ರ ರಾಜಕುಮಾರ್ ರಿವೀಲ್ ಮಾಡಿದ್ದಾರೆ.

ರಾಜಕುಮಾರ್ ಅವರ ಮನೆತುಂಬ ಮಕ್ಕಳು. ತಮ್ಮ ಸಹೋದರ, ಸಹೋದರಿಯರು ಹಾಗೂ ಸಂಬಂಧಿಕರ ಮಕ್ಕಳು ಇವರ ಮನೆಯಲ್ಲೇ ಇರುತ್ತಿದ್ದರು. ಸಹಜವಾಗಿಯೇ ಕುಟುಂಬದ ಖರ್ಚು ಸ್ವಲ್ಪ ಹೆಚ್ಚಾಗುತ್ತಿತ್ತು. ಆದರೆ, ಅಣ್ಣಾವ್ರು ಪಡೆಯುತ್ತಿದ್ದ ಸಂಭಾವನೆ ಯಾವುದಕ್ಕೂ ಸಾಲುತ್ತಿರಲಿಲ್ಲ. ಬಂದ ಹಣದಲ್ಲಿಯೇ ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದವರು ಪತ್ನಿ ಪಾರ್ವತಿ ರಾಜ್​ಕುಮಾರ್. ಒಂದು ದಿನ ಈ ವಿಚಾರವನ್ನು ರಾಜಕುಮಾರ್ ಎದುರು ಪಾರ್ವತಮ್ಮ ಪ್ರಸ್ತಾಪಿಸುತ್ತಾರೆ. 'ಮನೆಯ ಖರ್ಚು ಹೊರೆಯಾಗುತ್ತಿದೆ. ನೀವು ಸಂಭಾವನೆ ಸ್ವಲ್ಪ ಜಾಸ್ತಿ ಮಾಡಿ' ಎಂದು ಕೇಳಿಕೊಂಡಿರಂತೆ.

ಪತ್ನಿಯ ಈ ಬೇಡಿಕೆಗೆ ರಾಜಕುಮಾರ್ ಅವರಿಂದ ಬಂದ ಉತ್ತರ ನಿಜಕ್ಕೂ ಎಲ್ಲರಲ್ಲೂ ಹೆಮ್ಮೆ ಮೂಡಿಸುತ್ತದೆ. 'ನಮ್ಮ ಸಂಸಾರದ ಹೊಣೆ ನಮಗೇ ಇರಲಿ. ಇದನ್ನು ಚಿತ್ರ ನಿರ್ಮಾಪಕರ ಮೇಲೆ ಹೇರುವುದು ಬೇಡ. ಬೇಕಾದ್ರೆ ನಾನು ಇನ್ನಷ್ಟು ಹೆಚ್ಚು ಕೆಲಸ ಮಾಡುತ್ತೇನೆ' ಎಂದಿದ್ದರಂತೆ ಈ ಬಂಗಾರದ ಮನುಷ್ಯ. ಪತ್ನಿ ಎದುರು ಆಡಿದ ಮಾತನ್ನು ಕಾರ್ಯರೂಪಕ್ಕೆ ತರುವ ಅವರು, ಹಗಲಿರುಳು ಬಿಡುವಿಲ್ಲದೆ ದುಡಿಯುತ್ತಾರೆ. ಇದರ ಪ್ರತಿಫಲವಾಗಿ ಒಂದೇ ವರ್ಷಕ್ಕೆ ಅಣ್ಣಾವ್ರ ಅಭಿನಯದ 18 ಚಿತ್ರಗಳು ತೆರೆಗೆ ಬರುತ್ತವೆ.

ಅಂದು ರಾಜಕುಮಾರ್ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿದ್ದರು. ಇವರು ಕೇಳಿದಷ್ಟು ಹಣ ನೀಡುವ ನಿರ್ಮಾಪಕರಿದ್ದರು. ಆದರೆ, ಸ್ವಾಭಿಮಾನಕ್ಕೆ ಇನ್ನೊಂದು ಹೆಸರಾಗಿದ್ದ ನಟಸಾರ್ವಭೌಮ ನಿರ್ಮಾಪಕರಿಗೆ ಎಂದಿಗೂ ಹೊರೆಯಾಗಲಿಲ್ಲ.

ಈ ವಿಚಾರವನ್ನು ಮೊನ್ನೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್ ಹಂಚಿಕೊಂಡ್ರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.