ರಾಘಣ್ಣನ 'ಅಮ್ಮನ ಮನೆ' ರಿಲೀಸ್ ಆಗಿದೆ. ‘ತ್ರಯಂಬಕಂ’ ರಿಲೀಸ್ ರೆಡಿಯಾಗಿದೆ. 'ಆಡಿಸಿದಾತ'ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಈ ನಡುವೆ ಮತ್ತೊಂದು ಚಿತ್ರದ ಘೋಷಣೆಗೆ ರಾಘಣ್ಣ ಉತ್ಸುಕರಾಗಿದ್ದಾರೆ.
ಹೌದು, ಇದೆ ಏಪ್ರಿಲ್ 12 ರಂದು ‘ಅಪ್ಪನ ಅಂಗಿ'…ಇದು ವಸ್ತ್ರವಲ್ಲ ಅಸ್ತ್ರ ಟ್ಯಾಗ್ಲೈನ್ನ ಚಿತ್ರ ಅನೌನ್ಸ್ ಆಗಲಿದೆ ಎಂದು ಸ್ವತಃ ರಾಘವೇಂದ್ರ ರಾಜಕುಮಾರ್ ಹೇಳಿಕೊಂಡ್ರು. ನಿನ್ನೆ ‘ತ್ರಯಂಬಕಂ’ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ವೀಕ್ಷಣೆಗೆ ಎಸ್.ಆರ್.ವಿ ಥಿಯೇಟರ್ ಬಂದಿದ್ದ ಅವರು, ಬಹಳ ಉತ್ಸಾಹದಿಂದ ‘ಅಪ್ಪನ ಅಂಗಿ’ ಬಗ್ಗೆ ಮಾತನಾಡಿದ್ರು. ಅಪ್ಪಾಜಿ ಅವರ ಪುಣ್ಯ ತಿಥಿ ಏಪ್ರಿಲ್ 12 ರಂದು ನಿಖಿಲ್ ಮಂಜು ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಈ ಚಿತ್ರದ ಪ್ರಕಟಣೆಯಾಗಲಿದೆ. ಅಪ್ಪಾಜಿ ಜನುಮ ದಿನ ಏಪ್ರಿಲ್ 24 ರಂದು ಚಿತ್ರದ ಮೊದಲ ಪೋಸ್ಟರ್ ಸಹ ಬಿಡುಗಡೆ ಆಗುವುದಾಗಿ ರಾಘಣ್ಣ ಹೇಳಿಕೊಂಡಿದ್ದಾರೆ.
ಏನಿದು ಅಪ್ಪನ ಅಂಗಿ?
ಈ ಚಿತ್ರದಲ್ಲಿ ಬಹುತೇಕ ಡಾ.ರಾಜಕುಮಾರ್ ಅವರ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಅವರು ಹೇಳಿದ್ದ ಕಥೆ ಮುಖ್ಯವಾಗಲಿದೆ. ಆಗಿನ ಕಾಲದಲ್ಲಿ ಮನೆಯಲ್ಲಿ ತೊಟ್ಟಿಲು ಕಟ್ಟಬೇಕಂದರೆ – ಅಪ್ಪನ ಅಂಗಿ, ಪಂಚೆ ಇದೆ ನೋಡಿ ಅದರಲ್ಲೇ ಕಟ್ಟು ಅನ್ನುತ್ತಿದ್ದರು. ಹಾಗೆ ಅಪ್ಪನ ಅಂಗಿ ಅನೇಕ ಸಂದರ್ಭಗಳಲ್ಲಿ ಬಳಸುತ್ತಿದ್ದರೂ. ಅಪ್ಪ ಆದವನು ಮನೆಯಲ್ಲಿ ಒಂದು ರೀತಿ ‘ಫರ್ಗಾಟನ್ ವಾರಿಯರ್’ ಇದ್ದ ಹಾಗೆ. ಕೊನೆಗೆ ಅವನಿಗೆ ಹೋಗುವಾಗ ಸಿಗೋದು ಒಂದು ಖರ್ಚಿಫ್ ಅಗಲದ ಬಟ್ಟೆ. ಇಂತಹ ವಿಚಾರವನ್ನು ಡಾ.ರಾಜಕುಮಾರ್ ಅವರು ತಮ್ಮ ಮಗ ರಾಘಣ್ಣ ಜೊತೆ ಹೇಳಿಕೊಂಡಿದ್ದು ಇದೆ. ಈ ವಿಚಾರವೇ ಚಿತ್ರದ ಮೂಲ ಕಥೆ ಸಹ ಇಗಿದ್ದು ಅನೇಕ ವಿಚಾರಗಳನ್ನು ನಿರ್ದೇಶಕ ನಿಖಿಲ್ ಮಂಜು ಸೇರಿಸಲಿದ್ದಾರೆ.
ಇನ್ನು ನಿಖಿಲ್ ಮಂಜು ಮತ್ತು ರಾಘವೇಂದ್ರ ರಾಜಕುಮಾರ್ ಅವರ ‘ಅಮ್ಮನ ಮನೆ’ ಚಿತ್ರ ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಕಾಣಲಿಲ್ಲ. ಇದೀಗ ಮತ್ತೊಮ್ಮೆ ಇಬ್ಬರೂ ಜತೆ ಸೇರಿ ವರ್ಕ್ ಮಾಡಿದ್ದಾರೆ.