ETV Bharat / sitara

ಪುನೀತ್​ ರಾಜಕುಮಾರ್ 'ಕನ್ನಡದ ಕೋಟ್ಯಧಿಪತಿ' ಒಪ್ಪಲು ಕಾರಣ ಏನ್​ ಗೊತ್ತೆ?

ಕನ್ನಡದ ಕೋಟ್ಯಧಿಪತಿ ನಾಲ್ಕನೇ ಸೀಸನ್​ ಕಲರ್ಸ್​​ ಕನ್ನಡ ವಾಹಿನಿಯಲ್ಲಿ ಇದೇ 22 ರಿಂದ ರಾತ್ರಿ 8 ಗಂಟೆಗೆ ಶನಿವಾರ ಹಾಗೂ ಭಾನುವಾರ ಪ್ರಸಾರ ಆಗಲಿದೆ. ಈ ಸೀಸನ್​​ನ್ನು ಪವರ್ ಸ್ಟಾರ್ ಪುನೀತ್​ ರಾಜಕುಮಾರ್​ ನಡೆಸಿಕೊಡಲಿದ್ದಾರೆ.

ಪುನೀತ್​ ರಾಜಕುಮಾರ್
author img

By

Published : Jun 18, 2019, 4:19 PM IST

ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ 'ಕನ್ನಡದ ಕೋಟ್ಯಧಿಪತಿ' ರಿಯಾಲಿಟಿ ಶೋಗೆ ವಾಪಸ್​ ಆಗಿದ್ದಾರೆ. ಯಶಸ್ವಿಯಾಗಿ ಎರಡು ಸೀಸನ್​​​ ಹೋಸ್ಟ್ ಮಾಡಿದ್ದ ಪುನೀತ್​ ಕಾರಣಾಂತರಗಳಿಂದ ಮೂರನೇ ಸೀಸನ್​​​​​ನಿಂದ ಹೊರಗುಳಿದಿದ್ದರು. ಇದೀಗ ನಾಲ್ಕನೇ ಸೀಸನ್​​​​ಗೆ ಕಮ್​ಬ್ಯಾಕ್ ಆಗಿದ್ದಾರೆ.

ಅಪ್ಪು, ಕನ್ನಡದ ಈ ಜನಪ್ರಿಯ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಬಂದವರು. ಬೆಳ್ಳಿ ಪರದೆಯಲ್ಲಿ ಸಿಕ್ಕ ಯಶಸ್ಸನ್ನು ಇಲ್ಲಿಯೂ ಪಡೆದುಕೊಂಡರು. ಅವರು ಈ ಕಾರ್ಯಕ್ರಮದ ನಿರೂಪಣೆಗೆ ಬರಲು ಪ್ರಮುಖ ಕಾರಣ ಅವರ ತಂದೆ ರಾಜಕುಮಾರ್ ಅಂತೆ. ಇಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಈ ವಿಚಾರವನ್ನು ಪುನೀತ್​ ಹಂಚಿಕೊಂಡಿದ್ದಾರೆ.

ಅಣ್ಣಾವ್ರು ತಪ್ಪದೆ ಅಮಿತಾಭ್ ಬಚ್ಚನ್ ನಡೆಸಿಕೊಡುವ 'ಕೌನ್​ ಬನೇಗಾ ಕರೋಡಪತಿ' ಕಾರ್ಯಕ್ರಮ ನೋಡುತ್ತಿದ್ದರಂತೆ. ಅವರ ಜೊತೆ ಪುನೀತ್​ ಸಹ ವೀಕ್ಷಿಸುತ್ತಿದ್ದರಂತೆ. 2011ರಲ್ಲಿ ಕೋಟ್ಯಧಿಪತಿ ಮೊದಲ ಸೀಸನ್​ ನಡೆಸಿಕೊಡಬೇಕು ಎಂದು ಕೇಳಿದಾಗ ರಾಜಕುಮಾರ್ ಅವರು ಇರಲಿಲ್ಲ. ಆದರೆ, ಅವರ ತಾಯಿ ಪಾರ್ವತಮ್ಮ ಅವರು ಪುನೀತ್​ಗೆ ಆತ್ಮವಿಶ್ವಾಸ ತುಂಬಿದ್ದರಂತೆ. ಶಿವಣ್ಣ ಮಾರ್ಗದರ್ಶನ, ರಾಘಣ್ಣ ಸಲಹೆ ಸಹ ಇವರಿಗೆ ದೊರಕಿತಂತೆ. ಇವರೆಲ್ಲರ ಪ್ರೋತ್ಸಾಹದಿಂದ ಕಿರುತೆರೆಗೆ ಕಾಲಿಟ್ಟರಂತೆ ಅಪ್ಪು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೋಟ್ಯಾದಿಪತಿ ಒಪ್ಪಲು ಕಾರಣೆ ಏನು ಗೊತ್ತೇ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೂರನೇ ಸೀಸನ್ ಕನ್ನಡದ ಕೋಟ್ಯಾಧಿಪತಿ ಈ ಬಾರಿ ಕಲರ್ಸ್ ಕನ್ನಡದಲ್ಲಿ ಒಪ್ಪಿಕೊಂಡು ಕಾರ್ಯಕ್ರಮ ಒಂದೂವರೆ ಘಂಟೆ ಇದೆ 22 ರಿಂದ ರಾತ್ರಿ 8 ಘಂಟೆಗೆ ಶನಿವಾರ ಹಾಗೂ ಭಾನುವಾರ ಪ್ರಸಾರ ಆಗಲಿದೆ. ಈ ಮಧ್ಯೆ ರಮೇಶ್ ಅರವಿಂದ್ ಸಹ ಒಂದು ಸೀಸನ್ ಸ್ಟಾರ್ ಸುವರ್ಣದಲ್ಲಿ ನಡೆಸಿಕೊಟ್ಟರು. ಇದು ಕನ್ನಡದ ಕೋಟ್ಯಾಧಿಪತಿ 4 ನೇ ಸೀಸನ್.

ಅಸಲಿಯಾಗಿ ಪುನೀತ್ ರಾಜಕುಮಾರ್ ಅವರು ಈ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡಲು ಕಾರಣ ಅಪ್ಪಾಜಿ ಡಾ ರಾಜಕುಮಾರ್. ಡಾ ರಾಜಕುಮಾರ್ ಅವರು ತಪ್ಪದೆ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕಾರ್ಯಕ್ರಮ ನೋಡುತ್ತಾ ಇದ್ದರು. ಅವರ ಜೊತೆ ಪುನೀತ್ ರಾಜಕುಮಾರ್ ಸಹ ವೀಕ್ಷಿಸಿದ್ದಾರೆ.

ಆದರೆ ಮೊದಲ ಸೀಸನ್ ಕೋಟ್ಯಾಧಿಪತಿ 2011 ರಲ್ಲಿ ಕನ್ನಡದಲ್ಲಿ ಪುನೀತ್ ರಾಜಕುಮಾರ್ ನಡೆಸಿಕೊಡಬೇಕು ಎಂದು ಹೇಳಿದಾಗ ಡಾ ರಾಜಕುಮಾರ್ ಇರಲಿಲ್ಲ. ಆದರೆ ಅವರ ತಾಯಿ ಪಾರ್ವತಮ್ಮ ಅವರು ಆತ್ಮವಿಶ್ವಾಸ ಇಂದ ಹೋಗೋ ನೀನು ಚಚ್ಚಿ ಕೊಂಡು ಬರ್ತೀಯಾ ಎಂದು ಭವಿಷ್ಯ ನುಡಿದಿದ್ದರಂತೆ. ಶಿವಣ್ಣ ಮಾರ್ಗದರ್ಶನ, ರಾಘಣ್ಣ ಸಲಹೆ ಸಹ ಇವರಿಗೆ ದೊರಕಿದೆ.

ಪವರ್ ಸ್ಟಾರ್ ಮೊದಲು ಆಯ್ಕೆ ಆಗಿದ್ದ ಮಾಡಿದ್ದು ಮುಂಬಯಿಯಲ್ಲಿ ಅಮಿತಾಭ್ ಬಚ್ಚನ್ ಅವರನ್ನು ಬೇಟಿ ಮಾಡುವುದರ ಜೊತೆ ಸಿದ್ದರ್ತ್ ಬಾಸು (ಬೋರ್ನ್ವಿತ ಕ್ವಿಜ್ ಕಾಂಟೆಸ್ಟ್ ಜನಪ್ರಿಯ ಆದವರು) ಜೊತೆ ಚರ್ಚೆ ಮಾಡಿಕೊಂಡು ಬಂದರು. ಆಮೇಲೆ ಈ ಕಾರ್ಯಕ್ರಮ ಮಾಡುತ್ತಾ ನನ್ನ ಸಾಮಾನ್ಯ ಜ್ಞಾನ ಸಹ ಅಭಿವೃದ್ದಿ ಆಗುತ್ತಾ ಹೋಯಿತು ಎನ್ನುತ್ತಾರೆ ಪುನೀತ್ ರಾಜಕುಮಾರ್. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.