ಹಾವೇರಿಯ ಈರಪ್ಪ ಈ ವಾರ ಕನ್ನಡದ ಕೋಟ್ಯಧಿಪತಿಯ ಹಾಟ್ ಸೀಟ್ ಮೇಲೆ ಪುನೀತ್ ಎದುರು ಕುಳಿತುಕೊಂಡಿದ್ದಾರೆ. ಈಗಾಗಲೇ ಈ ಎಪಿಸೋಡ್ ಚಿತ್ರೀಕರಣವಾಗಿದೆ. ಕಾರ್ಯಕ್ರಮದ ಮಧ್ಯೆದಲ್ಲಿ ನೀನು ಯಾವ ನಟರ ಅಭಿಮಾನಿ ಎಂದು ಅಪ್ಪು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸ್ವಲ್ಪ ಸಂಕೋಚದಿಂದಲೇ ಉತ್ತರಿಸಿದ ಈರಪ್ಪ, ನಾನು ಡಿ ಬಾಸ್ ಅಭಿಮಾನಿ ಎಂದಿದ್ದಾರೆ. ಯಾಕೆ ? ನಾ ನಿಮ್ಮ ನೆಚ್ಚಿನ ನಟ ಅಲ್ವಾ? ಎಂದು ಅಪ್ಪು ಮರುಪ್ರಶ್ನೆ ಎಸೆದಿದ್ದಾರೆ. ನಗುತ್ತಲೇ ಉತ್ತರಿಸಿದ ಈ ಸ್ಪರ್ಧಿ, 'ಯಾರ್ ಇಲ್ಲ ಅಂದ್ರು ಸಾರ್' ಎಂದು ನಗುತ್ತಲೇ ಉತ್ತರಿಸಿದ್ದಾರೆ. ಮತ್ತೆ ಮಾತು ಮುಂದುವರೆಸಿದ ಅಪ್ಪು, ನಾನು ಹಾಗೂ ದರ್ಶನ್ ಒಂದು ಸಿನಿಮಾ ಮಾಡಿದ್ದೇವೆ, ಗೊತ್ತಾ? ಎಂದು ಕೇಳಿದ್ರು. ಇದಕ್ಕೆ 'ಅರಸು' ಸಿನಿಮಾ ಸಾರ್ ಎಂದು ಈರಪ್ಪ ತಕ್ಷಣವೇ ಉತ್ತರಿಸಿದ. ಇದನ್ನು ಕೇಳಿದ ದೊಡ್ಮನೆ ರಾಜಕುಮಾರ್, ಅದು ಕೂಡ ಗೊತ್ತಾ ನಿಮಗೆ ಎಂದು ಖುಷಿಯಾದರು. ಈ ಎಪಿಸೋಡ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
- " class="align-text-top noRightClick twitterSection" data="">
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಳ್ಳೆಯ ಸ್ನೇಹಿತರು. ಕನ್ನಡದ ಈ ದಿಗ್ಗಜ ನಟರು 'ಅರಸು' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ತಾರೆಯರು ತಮ್ಮದೆಯಾದ ಅಭಿಮಾನಿ ಬಳಗ ಹೊಂದಿದ್ದಾರೆ.