ನೆನಪಿರಲಿ ಪ್ರೇಮ್ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗದ ಸಿನಿಮಾಗಳಿಂದ ಗಮನ ಸೆಳೆದಿರುವ ನಟ. ಸದ್ಯ 'ಪ್ರೇಮ ಪೂಜ್ಯಂ' ಸಿನಿಮಾ ಮಾಡ್ತಿರೋ ಪ್ರೇಮ್ ಮಗಳು ಅಮೃತಾ ಹುಟ್ಟುಹಬ್ಬವನ್ನ ವಿಶೇಷವಾಗಿ ಸೆಲೆಬ್ರೆಟ್ ಮಾಡಿದ್ದಾರೆ. ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಅಪ್ಪನ ಮುದ್ದಿನ ಮಗಳು ಅನಿಸಿಕೊಂಡಿದ್ದ ಅಮೃತಾಗೆ 18 ವರ್ಷ ತುಂಬಿದ ಹಿನ್ನಲೆಯಲ್ಲಿ, ಪ್ರೇಮ್ ಬರ್ತಡೇಯನ್ನು ಬಹಳ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ.
ಮಗಳ ಬರ್ತಡೇ ಸೆಲೆಬ್ರೇಷನ್ನಲ್ಲಿ ಕೈಯಲ್ಲಿ ಗಿಟಾರ್ ಹಿಡಿದು ಹ್ಯಾಪಿ ಬರ್ತಡೇ ಅಂತ ಹಾಡಿದ್ದಾರೆ. ಅಪ್ಪನ ಪ್ರೀತಿಗೆ ಮಗಳು ಅಮೃತಾ ಕೂಡ ಫಿದಾ ಆಗಿದ್ದಾಳೆ.
ಪ್ರೇಮ್ ಪ್ರತಿವರ್ಷ ಮಗಳ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದರಂತೆ. ಆದ್ರೆ ಈ ವರ್ಷ ಅದ್ಧೂರಿಯಾಗಿ ಆಚರಿಸಿದ್ದಾರೆ. ಮೆಡಿಕಲ್ ಎಲೆಕ್ಟ್ರಾನಿಕ್ ಓದುತ್ತಿರುವ ಅಮೃತಾ ಅಪ್ಪನ ಕನಸನ್ನು ನನಸು ಮಾಡುತ್ತಿದ್ದಾಳೆ. ಸದ್ಯ ಪ್ರೇಮ್ ಮಗಳಿಗಾಗಿ ಹಾಡಿರುವ ಹಾಡು ಬೊಂಬಾಟ್ ಆಗಿದೆ.