ETV Bharat / sitara

ಕೋವಿಡ್​ ವ್ಯಾಕ್ಸಿನ್​ ಪಡೆದ ನಟಿ ಪೂಜಾ ಹೆಗ್ಡೆ: ಫೋಟೋ ಶೇರ್ ಮಾಡಿ ಹೇಳಿದ್ದೇನು?

ಕೊರೊನಾ ಸೋಂಕಿಗೊಳಗಾಗಿ ಗುಣಮುಖರಾಗಿರುವ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಇಂದು ಕೋವಿಡ್​ ವ್ಯಾಕ್ಸಿನ್​​ ಮೊದಲ ಡೋಸ್ ಪಡೆದುಕೊಂಡಿದ್ದಾರೆ.

Actor Pooja hegde
Actor Pooja hegde
author img

By

Published : Jul 22, 2021, 10:45 PM IST

ನವದೆಹಲಿ: ಬಾಲಿವುಡ್​​ ಬೆಡಗಿ ಪೂಜಾ ಹೆಗ್ಡೆ ಕೋವಿಡ್​​ ವ್ಯಾಕ್ಸಿನ್​ನ ಮೊದಲ ಡೋಸ್​ ಪಡೆದುಕೊಂಡಿದ್ದು, ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್ ಮಾಡಿದ್ದಾರೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಕೊರೊನಾ ಸೋಂಕಿಗೊಳಗಾಗಿದ್ದ ಕರಾವಳಿ ಸುಂದರಿ ಪೂಜಾ ಹೆಗ್ಡೆ ಅದರಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಮೂರು ತಿಂಗಳ ಬಳಿಕ ಮೊದಲ ಡೋಸ್​ ಪಡೆದುಕೊಂಡಿದ್ದಾರೆ. ಈ ಹಿಂದೆ ನನ್ನ ತಾಯಿಯನ್ನು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಕರೆದುಕೊಂಡು ಬಂದಿದ್ದೆ. ಆ ವೇಳೆ ನಾನು ಲಸಿಕೆ ಪಡೆದುಕೊಂಡಿದ್ದರೆ, ಇಂದು ಎರಡನೇ ಡೋಸ್​ ಹಾಕಿಸಿಕೊಳ್ಳುತ್ತಿದ್ದೆ ಎಂದಿದ್ದಾರೆ.

Actor Pooja hegde
ರಾಧೆಶ್ಯಾಮ್​ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ

ಕೊರೊನಾ ಸೋಂಕಿಗೊಳಗಾಗುವವರು ಮೂರು ತಿಂಗಳ ನಂತರ ಕೋವಿಡ್​ ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಪೂಜಾ ಹೆಗ್ಡೆ ಇದೀಗ ವ್ಯಾಕ್ಸಿನ್​ ಹಾಕಿಸಿಕೊಂಡಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಪೂಜಾ ಅನೇಕ ಸಂತ್ರಸ್ತರಿಗೆ ಸಹಾಯ ಮಾಡಿದ್ದು, ಅಗತ್ಯ ವಸ್ತುಗಳನ್ನು ನೀಡಿ ಮಾನವೀಯತೆ ಮರೆದಿದ್ದರು.

ಸದ್ಯ ಶೂಟಿಂಗ್​ನಲ್ಲಿ ಬ್ಯುಸಿ ಇರುವ ನಟಿ ಪೂಜಾ ದಕ್ಷಿಣ ಭಾರತದ ಸೂಪರ್​ಸ್ಟಾರ್​ ನಟ ಚಿರಂಜೀವಿ ಜೊತೆ 'ಆಚಾರ್ಯ' ಪ್ರಭಾಸ್​ ಜೊತೆ ರಾಧೆಶ್ಯಾಮ್​ ಚಿತ್ರದಲ್ಲಿ ನಟನೆ ಮಾಡ್ತಿದ್ದಾರೆ.

Actor Pooja hegde
ಕರಾವಳಿ ಬೆಡಗಿ ಪೂಜಾ ಹೆಗ್ಡೆ

ಇದನ್ನೂ ಓದಿ: ಅವಕಾಶ ಸಿಕ್ಕರೆ ಖಂಡಿತಾ ಕನ್ನಡ ಚಿತ್ರಗಳಲ್ಲಿ ನಟಿಸುವೆ: ಈಟಿವಿ ಭಾರತ ಜತೆ 'ರಾಧೆಶ್ಯಾಮ್' ನಟಿ ಪೂಜಾ ಹೆಗ್ಡೆ ಮಾತು!

ಈ ಹಿಂದೆ ಈಟಿವಿ ಭಾರತ ಜೊತೆ ಮಾತನಾಡಿದ್ದ ನಟಿ ಪೂಜಾ ಹೆಗ್ಡೆ, ಅವಕಾಶ ಸಿಕ್ಕರೆ ಖಂಡಿತವಾಗಿ ಸ್ಯಾಂಡಲ್​ವುಡ್​ ಸಿನಿಮಾಗಳಲ್ಲಿ ನಟನೆ ಮಾಡುವೆ ಎಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.