ETV Bharat / sitara

ದುಬಾರಿ ಲ್ಯಾಂಬೋರ್ಗಿನಿ ಕಾರ್​ ಖರೀದಿಸಿದ ಟಾಲಿವುಡ್​ ನಟ: ಇಂಥಾ ಕಾರು ಖರೀದಿಸಿದ ಮೊದಲ ಭಾರತೀಯ ಇವರೇ.!

ಟಾಲಿವುಡ್​ ನಟ ಜೂನಿಯರ್​ ಎನ್​ಟಿಆರ್​ ಐಷಾರಾಮಿ ಕಾರೊಂದನ್ನು ಖರೀಸಿದ್ದಾರೆ. ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸೂಲ್ ಹೆಸರಿನ ಹೊಸ ಮಾದರಿಯ ವಿದೇಶಿ ಕಾರನ್ನು ​ಪರ್ಚೇಸ್​ ಮಾಡಿದ ದೇಶದ ಮೊದಲ ವ್ಯಕ್ತಿ ಎನಿಸಿದ್ದಾರೆ ಜೂನಿಯರ್​ ಎನ್​ಟಿಆರ್​.

lamborgini
ಟಾಲಿವುಡ್​ ನಟ ಜೂನಿಯರ್​ ಎನ್​ಟಿಆರ್
author img

By

Published : Aug 18, 2021, 8:11 PM IST

Updated : Aug 18, 2021, 8:24 PM IST

ಹೈದರಾಬಾದ್​: ಭಾರತೀಯ ಸಿನಿಮಾ ರಂಗದ ಕಲಾವಿದರು ದುಬಾರಿ ಕಾರು ಖರೀದಿಸೋದು ಹೊಸದೇನಲ್ಲ. ಸ್ಯಾಂಡಲ್​ವುಡ್​, ಬಾಲಿವುಡ್​, ಕಾಲಿವುಡ್​, ಟಾಲಿವುಡ್​ ಹೀಗೆ ಎಲ್ಲಾ ಸಿನಿಕ್ಷೇತ್ರಗಳ ಸ್ಟಾರ್​ ನಟರು ಕೋಟಿಗಟ್ಟಲೇ ಹಣ ನೀಡಿ ಕಾರು ಖರೀದಿಸಿ ಮನೆಯಂಗಳದಲ್ಲಿ ನಿಲ್ಲಿಸಿದ್ದಾರೆ. ಕೆಲವರಿಗೆ ವಿದೇಶಿ ಕಾರುಗಳ ಮೇಲೆಯೂ ಹೆಚ್ಚಿನ ಒಲವಿದ್ದು, ಸದ್ಯ ಈ ಸಾಲಿಗೆ ಜೂನಿಯರ್​ ಎನ್​ಟಿಆರ್​ ಸೇರ್ಪಡೆಯಾಗಿದ್ದಾರೆ.

lamborgini
ಲ್ಯಾಂಬೋರ್ಗಿನಿ ಕಾರ್

ಹೌದು ಟಾಲಿವುಡ್​ ಯಂಗ್​​​​​ ಟೈಗರ್​ ಜೂನಿಯರ್​ ಎನ್​ಟಿಆರ್​ @ ನಂದಮುರಿ ತಾರಕ ರಾಮರಾವ್​ ಇದೀಗ ಲ್ಯಾಂಬೋರ್ಗಿನಿ ಕಾರಿನ ಒಡೆಯರಾಗಿದ್ದಾರೆ ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸೂಲ್ ಹೆಸರಿನ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಸದ್ಯ ಈ ಕಾರು ವಿದೇಶದಿಂದ ಬೆಂಗಳೂರನ್ನು ತಲುಪಿದ್ದು ,ಸದ್ಯದಲ್ಲೇ ಹೈದರಾಬಾದ್​ಗೆ ಬರಲಿದೆ. ಅಂದಹಾಗೇ ಈ ಬಗೆಯ ವಿನ್ಯಾಸದ ಕಾರನ್ನು ಖರೀದಿಸಿದ ಮೊದಲ ಭಾರತೀಯ ಎನಿಸಿದ್ದಾರೆ ಜೂನಿಯರ್​ ಎನ್​ಟಿಆರ್​.

lamborgini
ಟಾಲಿವುಡ್​ ನಟ ಜೂನಿಯರ್​ ಎನ್​ಟಿಆರ್

ಸದ್ಯ ಎನ್​ಟಿಆರ್​​ ಆರ್‌ಆರ್‌ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾ ಸದ್ಯ ಉಕ್ರೇನ್​ನಲ್ಲಿ ಶೂಟಿಂಗ್​ ನಡೆಸುತ್ತಿದೆ.. ಇದರಲ್ಲಿ ರಾಮ್ ಚರಣ್ ಸಹ ನಟಿಸಿದ್ದು, ಅಕ್ಟೋಬರ್ 13 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಈ ಕಾರಿನ ಬೆಲೆ ಎಷ್ಟು ಗೊತ್ತಾ?

ಭಾರತದಲ್ಲಿ ಈ ಐಷಾರಾಮಿ ಕಾರಿನ ಬೆಲೆ ಅಂದಾಜು 3.16 ಕೋಟಿ ರೂ ಅಂತೆ. ಇದು ಎಕ್ಸ್​ ಷೋರೂಂ ಬೆಲೆಯಾಗಿದ್ದು, ತೆರಿಗೆಯಲ್ಲಾ ಸೇರಿ ಮತ್ತಷ್ಟು ಹೆಚ್ಚಾಗಲಿದೆ.

ಏನಿದರ ಸ್ಪೆಷಾಲಿಟಿ?:

ಲ್ಯಾಂಬೋರ್ಗಿನಿ ಊರುಸ್​​​​​ 4.0-ಲೀಟರ್ ವಿ 8 ಟ್ವಿನ್-ಟರ್ಬೊ ಇಂಜಿನ್ ಆಗಿದ್ದು, 6,000 ಆರ್‌ಪಿಎಮ್‌ನ 650 ಬಿಎಚ್‌ಪಿ ಇಂಜಿನ್​ ಹೊಂದಿದೆ. ಗರಿಷ್ಠ 6,800 ಆರ್‌ಪಿಎಂ ಮತ್ತು 2,250 ಆರ್‌ಪಿಎಂನಲ್ಲಿ 850 ಎನ್ಎಂ ಗರಿಷ್ಠ ಟಾರ್ಕ್ ನೀಡುತ್ತದೆ. ಊರುಸ್ 0-100 ಕಿಮೀ ವೇಗವನ್ನು 3.6 ಸೆಕೆಂಡುಗಳಲ್ಲಿ ಹಾಗೂ 0-200 ಕಿಮೀ ವರೆಗಿನ ವೇಗವನ್ನ 12.8 ಸೆಕೆಂಡುಗಳಲ್ಲಿ ಗರಿಷ್ಠವಾಗಿ ಪಡೆಯುತ್ತದೆ. ಅಂದ ಹಾಗೆ ಈ ಕಾರು, ಪ್ರತಿ ಗಂಟೆಗೆ 305 ಕಿಮೀ ವೇಗದಲ್ಲಿ ಮುನ್ನುಗ್ಗಲಿದೆ. ಇದು ಗರಿಷ್ಠ ವೇಗದ ಎಸ್​​​ಯುವಿ ಆಗಿದೆ.

ಇದನ್ನೂ ಓದಿ:RRR ಶೂಟ್​​ಗೆ ಮುನ್ನ 'ದೋಸ್ತಿ' ಗುಂಗಲ್ಲಿ ರಾಮ್​ ಚರಣ್, ಜೂನಿಯರ್ ಎನ್​ಟಿಆರ್​ - Watch Video

Last Updated : Aug 18, 2021, 8:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.