ETV Bharat / sitara

ಸಿನಿಮಾದಲ್ಲಿ ಚಾನ್ಸ್​​​​​​​ ಸಿಗಬೇಕಂದ್ರೆ ಈ ಕೆಲಸ ಗೊತ್ತಿರಬೇಕು ಎಂದ ಕಾಮಿಡಿ ಕಿಲಾಡಿ ಕಲಾವಿದ - ಕಾಮಿಡಿ ಕಿಲಾಡಿಗಳು ಸೀಸನ್​​ 1

ಸಿನಿಮಾ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿಯಾಗಬೇಕಂದ್ರೆ ಮಾರ್ಕೆಟಿಂಗ್ ಗೊತ್ತಿರಬೇಕು. ನಮಗೆ ಟ್ಯಾಲೆಂಟ್ ಇಲ್ಲದಿದ್ರು ಪರವಾಗಿಲ್ಲ. ಪ್ರಮೋಟಿಂಗ್ ಮಾಡಿಕೊಳ್ಳೋ ಕೆಲಸಗಳು ಗೊತ್ತಿರಬೇಕು . ಆದ್ರೆ ಆ ಕೆಲಸಗಳು ನಮಗೆ ಗೊತ್ತಿಲ್ಲ ಎಂದು ಕಾಮಿಡಿ ಕಿಲಾಡಿ ಕಲಾವಿದ ಮುತ್ತುರಾಜ್​ ಹೇಳಿದರು.

ಮುತ್ತುರಾಜ್​​​, ಕಾಮಿಡಿ ಕಿಲಾಡಿ ಕಲಾವಿದ
author img

By

Published : Oct 26, 2019, 8:30 AM IST

ಜೀ ಕನ್ನಡಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಈ ಶೋನಲ್ಲಿ ನಟಿಸಿದವರಲ್ಲಿ ಬಹುಪಾಲು ಕಲಾವಿದರು ಬಿಗ್​ ಸಿನಿಮಾಗಳಲ್ಲಿ ಚಾನ್ಸ್​​ ಗಿಟ್ಟಿಸಿಕೊಂಡಿದ್ದಾರೆ. ಅದ್ರಲ್ಲು ಕಾಮಿಡಿ ಕಿಲಾಡಿಗಳು ಸೀಸನ್​​ ಒಂದರಲ್ಲಿ ಇದ್ದ ಬಹುಪಾಲು ಕಲಾವಿದರು ದೊಡ್ಡ ದೊಡ್ಡ ಸಿನಿಮಾಗಳಲ್ಲಿಯೇ ನಟಿಸಿದ್ದಾರೆ.

ಆದ್ರೆ ಒಂದನೇ ಸೀಸನ್​ನಲ್ಲಿದ್ದ ಕಲಾವಿದ ಮಂಡ್ಯದ ಮುತ್ತುರಾಜ್​​ಗೆ ಸಿನಿಮಾಗಳಲ್ಲಿ ಚಾನ್ಸ್​​ಗಳೇ ಸಿಗಲಿಲ್ಲ. ಇದ್ರಿಂದ ಸಿನಿಮಾ ರಂಗದಲ್ಲಿ ಮುಂದೆ ಬರಬೇಕಂದ್ರೆ ಯಾವ ಟ್ಯಾಲೆಂಟ್​​ ಇರಬೇಕು ಅಂತ ಮುತ್ತು ಹೇಳಿದ್ದಾರೆ.

ಕನ್ನಡದ 'ಆನೆಬಲ' ಸಿನಿಮಾದಲ್ಲಿ ಮುತ್ತುರಾಜ್​ ನಟಿಸಿದ್ದಾರೆ. ಈ ಚಿತ್ರದ ಆಡಿಯೋ ರಿಲೀಸ್​​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಚಿತ್ರರಂಗದ ಬಗ್ಗೆ ಇದ್ದ ತಮ್ಮ ನೋವನ್ನು ವ್ಯಕ್ತಪಡಿಸಿದ್ರು. ಸಿನಿಮಾ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿಯಾಗಬೇಕಂದ್ರೆ ಮಾರ್ಕೆಟಿಂಗ್ ಗೊತ್ತಿರಬೇಕು. ನಮಗೆ ಟ್ಯಾಲೆಂಟ್ ಇಲ್ಲದಿದ್ರು ಪರವಾಗಿಲ್ಲ ಪ್ರಮೋಟಿಂಗ್ ಮಾಡಿಕೊಳ್ಳೋ ಕೆಲಸಗಳು ಗೊತ್ತಿರಬೇಕು. ಆದ್ರೆ ಆ ಕೆಲಸಗಳು ನಮಗೆ ಗೊತ್ತಿಲ್ಲ. ನಾನು ಈಗ ಅದನ್ನು ಸಾತ್ವಿಕವಾಗಿ ಕಲಿಯುತ್ತಿದ್ದೇನೆ ಎಂದು ಮುತ್ತುರಾಜ್​ ನಗುನಗುತ್ತಲೇ ಬೆಸರ ವ್ಯಕ್ತಪಡಿಸಿದರು.

ಸಿನಿಮಾದಲ್ಲಿ ಚಾನ್ಸ್​​​​ ಸಿಗಬೇಕಂದ್ರೆ ಈ ಕೆಲಸ ಮಾಡಬೇಕು ಎಂದ ಕಾಮಿಡಿ ಕಿಲಾಡಿ ಕಲಾವಿದ

ಸದ್ಯ ಮುತ್ತರಾಜ್​​​ ಎರಡ್ಮೂರು ಚಿತ್ರಗಳಲ್ಲಿ ನಟಿಸ್ತಿದ್ದಾರಂತೆ. ವಸಿಷ್ಠ ಸಿಂಹ ಹಾಗೂ ಲೂಸ್ ಮಾದ ಯೋಗಿ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದೀನಿ. ಅಲ್ಲದೆ ಒಂದಿಬ್ಬರು ನನ್ನನ್ನು ನಾಯಕನಾಗಿ ಮಾಡುವ ಸಲುವಾಗಿ ಸ್ಕ್ರಿಪ್ಟ್ ಮಾಡ್ತಿದ್ದಾರೆ. ಆದರೆ ನನಗೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗಬೇಕು ಎಂಬ ಆಸೆ ಇಲ್ಲ. ನಾನು ಇಂಟರ್​ನ್ಯಾಶನಲ್ ಸರ್ಟಿಫೈಡ್ ಯೋಗ ಮಾಸ್ಟರ್ ಎಂದರು.

Intro:ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಜನರ ಮೆಚ್ಚುಗೆಗೆ ಪಾತ್ರವಾಗಿದೆ.ಇನ್ನೂ ಈ ಶೋ ಅಷ್ಟು ದೊಡ್ಡ ಮಟ್ಟಕ್ಕೆ ರೀಚ್ ಆಗಲು ಪ್ರಮುಖ ಕಾರಣ ಅಂದ್ರೆ ಕಾಮಿಡಿ ಕಿಲಾಡಿಗಳು ಸೀಸನ್ ೧ ನಲ್ಲಿ ಸ್ಪರ್ಧಿಸಿದ್ದವರು ಅಂದ್ರೆ ತಪ್ಪಾಗಲಾರದು. ಸೀಸನ್ ೧ ನಲ್ಲಿ ನಟಿಸಿದ ಬಹುತೇಕ ಕಿಲಾಡಿಗಳು ನೈಜ ಅಭಿನಯದಿಂದಲೇ ಜನರ ಮನಸ್ಸಿಗೆ ತಲುಪಿದ್ರು.ಅಲ್ಲದೆ ಕಾಮಿಡಿ ಕಿಲಾಡಿಗಳು ಸೀಸನ್ ೧ ನ ಬಹುತೇಕ ಸ್ಪರ್ಧಿಗಳು ಸ್ಮಾಲ್ ಸ್ಕ್ರೀನ್ ನಿಂದ ಬಿಗ್ ಸ್ಕ್ರೀನ್ ಗೆ ಪ್ರಮೋಶನ್ ಪಡೆದುಕೊಂಡಿದ್ದಾರೆ.ಜೊತೆಗೆ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡು ಕಡೆಗಳಲ್ಲೂ ಸಖತ್ ಬ್ಯಸಿಯಾಗಿದ್ದಾರೆ.

Body:ಅದ್ರೆ ಕಾಮಿಡಿ ಕಿಲಾಡಿಗಳು ಸೀಸನ್ ೧ ನಲ್ಲಿ ತನ್ನ ಸೊಣಕಲೂ ದೇಹದಿಂದಲೇ ಜಡೇ ಮುನೇಶ್ವರ ಎಂದೆ ಪ್ರಸಿದ್ದಿಯಾಗಿ.ತನ್ನ ನ್ಯಾಚುರಲ್ ನಟನೆಯಿಂದಲೇ ಗಮನ ಸೆಳೆದಿದ್ದ , ಪಕ್ಕಾ ಹಳ್ಳಿ ಪ್ರತಿಭೆ ಮಂಡ್ಯದ ಮುತ್ತುರಾಜ್ ಗೆ ಮಾತ್ರ ಬೆರಳೇಣಿಕೆ ಚಿತ್ರಗಳಲ್ಲಿ ನಟಿಸಿದ್ರು‌.ಅದ್ರೆ ನಟಿಸಿದ ಯಾವ ಚಿತ್ರವು ಈ ಕಡ್ಡಿ ಪೈಲ್ವಾನ್ ಗೆ ಗೆಲುವಿನ ಸಿಹಿ ಮುತ್ತು ನೀಡಲೇ ಇಲ್ಲ , ಒಳ್ಳೆ ಪ್ರತಿಭೆ ಇದ್ರು ಯಾಕೆ ನಿಮ್ಗೆ ಸಕ್ಸಸ್ ಸಿಗಲಿಲ್ಲ ಅಂತ ‌ಮುತುರಾಜ್ ನನ್ನ ಮಾತಿಗೆಳೆದ್ರೆ ,ಮುತ್ತುರಾಜ್ ಕಡ್ಡಿ ತುಂಡು ಮಾಡಿದ ರೀತಿ ಮಾತನಾಡಿದ್ರು.ಎಸ್ ಆನೆಬಲ ಚಿತ್ರದಲ್ಲಿ ಮುತ್ತುರಾಜ್ ನಟಿಸಿದ್ದು, ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ವೇಳೆ ಮಾತಿಗೆ ಸಿಕ್ಕ ಮುತ್ತು ಸಿನಿಮಾ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿ ಯಾಗ ಬೇಕಂದ್ರೆ ಮಾರ್ಕೆಟಿಂಗ್ ಗೊತ್ತಿರ ಬೇಕು ನಮಗೆ ಟ್ಯಾಲೆಂಟ್ ಇಲ್ಲದಿದ್ರು ಪರವಾಗಿಲ್ಲ ಪ್ರಮೋಟಿಂಗ್ ಮಾಡಿಕೊಳ್ಳೊ ಖತರ್ನಾಕ್ ಕೆಲಸಗಳು ಗೊತ್ತಿರ ಬೇಕು .ಅದ್ರೆ ಆ ಖತರ್ನಾಕ್ ಕೆಲಸಗಳು ನಮಗೆ ಗೊತ್ತಿಲ್ಲ ನಾನು ಈಗ ಅದನ್ನು ಸಾತ್ವಿಕವಾಗಿ ಕಲಿಯುತ್ತಿದ್ದೇನೆ ಎಂದು ನಗುನಗುತ್ತನೆ ಬೆಸರ ವ್ಯಕ್ತಪಡಿಸಿದರು.

Conclusion:ಇದ ಒರತುಪಡಿಸಿ ನಾನು ಸದ್ಯ ಎರಡ್ಮೂರು ಚಿತ್ರಗಳಲ್ಲಿ ನಟಿಸ್ತಿದ್ದೇನೆ.ವಶಿಷ್ಠ ಸಿಂಹ ಹಾಗು ಲೂಸ್ ಮಾದ ಯೋಗಿ ಅವರ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದೀನಿ.ಅಲ್ಲದೆ ಒಂದಿಬ್ಬರು ನನ್ನನ್ನು ನಾಯಕನಾಗಿ ಮಾಡುವ ಸಲುವಾಗಿ ಸ್ಕ್ರಿಪ್ಟ್ ಮಾಡ್ತಿದ್ದಾರೆ.ಅದರೆ ನನಗೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗ ಬೇಕು ಎಂಬ ಆಸೆ ನನಗೆ ಇಲ್ಲ.ನಾನು ಇಂಟರ್ ನ್ಯಾಶನಲ್ ಸರ್ಟಿಫೈಡ್ ಯೋಗ ಮಾಸ್ಟರ್,ಇದರ ಜೊತೆಗೆ ಆಕ್ಟಿಂಗ್ ಕ್ಲಾಸ್ ನಡೆಸ್ತಿದ್ದೀನಿ. ಕನ್ನಡ ಸೇರಿದಂತೆ‌‌‌ ಎಲ್ಲಾ ಭಾಷೆಗಳಲ್ಲಿ ಸಿನಿಮಾಗಳನ್ನು ಇಂದು ದುಡ್ಡು ಮಾಡುವ ಸಲುವಾಗಿ ಮಾತ್ರ ಸಿನಿಮಾ ಮಾಡ್ತಿದ್ದಾರೆ. ಹತ್ತು ಸಿನಿಮಾವನ್ನು ಮಾಡಿದ್ರೆ ಸಾಕು ಆ ನಟ ಮರೆಯಾಗಿ ಬಿಡ್ತಾನೆ. ಈ ಉದ್ದೇಶದಿಂದ ನಾನು ಚಿತ್ರರಂಗಕ್ಕೆ ಡಿಪೆಂಡ್ ಆಗದೆ ಬೇರೆ ಕೆಲಸ ಮಾಡಲು ಪ್ಲಾನ್ ಮಾಡ್ತಿದ್ದಿನಿ ಆದಷ್ಟು ಬೇಗ ಅದು ಏನು ಎಂದು ಹೇಳ್ತಿನಿ. ಇದಲ್ಲದೆ ಇದುವರೆಗೂ ನಾನು ನಟಿಸಿದ ಚಿತ್ರಗಳಿಂದ ನನಗೆ ಆತ್ಮತೃಪ್ತಿ ಸಿಕ್ಕಿದೆ ಎಂದು ಮುತ್ತುರಾಜ್ ಚಿತ್ರರಂಗದ ಬಗ್ಗೆ ಬೇಸರದ ನುಡಿಗಳನಾಡಿದ್ರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.