ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದ ನಿರೂಪಕರಾಗಿ ಕಿರುತೆರೆಗೆ ಕಾಲಿಟ್ಟ ಮಾಸ್ಟರ್ ಆನಂದ್ ಮುಂದೆ ಕಾಮಿಡಿ ಕಿಲಾಡಿಗಳು ನಿರೂಪಕರಾಗಿ ಸೈ ಎನಿಸಿಕೊಂಡರು.
ಸದ್ಯ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಸೀಸನ್ 2 ರ ಸ್ಪರ್ಧಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ಮಾಸ್ಟರ್ ಆನಂದ್ ‘ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ಹತ್ತಿರವಾದ ಪ್ರೋಗ್ರಾಂ ಎಂದರೆ ತಪ್ಪಲ್ಲ. ಈ ಕಾರ್ಯಕ್ರಮದಲ್ಲಿ ನಾನು ಹೊಸ ಜನರನ್ನು ಭೇಟಿ ಮಾಡುತ್ತೇನೆ. ಬೇರೆ ಬೇರೆ ಕಡೆಗಳಿಂದ ಬರುವ ಪ್ರತಿಭೆಗಳನ್ನು ಒಂದೇ ಸ್ಟೇಜ್ ಮೇಲೆ ನೋಡುತ್ತೇನೆ. ಇಂತಹ ಅಪೂರ್ವ ಕಾರ್ಯಕ್ರಮದ ನಿರೂಪಣೆ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ’ ಎಂದು ಹೇಳುತ್ತಾರೆ ಮಾಸ್ಟರ್ ಆನಂದ್.
‘ನಿಗೂಢ ರಾತ್ರಿ’ ಧಾರಾವಾಹಿಯ ನಂತರ ನಿರ್ದೇಶನದಿಂದ ದೂರವಿದ್ದ ಮಾಸ್ಟರ್ ಆನಂದ್ ಇದೀಗ ‘ಭೂಮಿಗೆ ಬಂದ ಭಗವಂತ’ ಎಂಬ ಹೊಸ ಧಾರಾವಾಹಿಯನ್ನು ನಿರ್ದೇಶನ ಮಾಡಲಿದ್ದಾರೆ. ಆ ಮೂಲಕ ಮತ್ತೊಮ್ಮೆ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲು ತಯಾರಾಗಿದ್ದಾರೆ ಮಾಸ್ಟರ್ ಆನಂದ್.