ಬೆಂಗಳೂರು, ಚಿಕ್ಕಮಗಳೂರು, ಬಳ್ಳಾರಿ ಮುಂತಾದ ಕಡೆ ನಮ್ಮ ಚಿತ್ರತಂಡ ಶೂಟಿಂಗ್ ಮುಗಿಸಿದೆ. ಎರಡು ಹಾಡು ಹಾಗೂ ಒಂದು ಫೈಟ್ ಮಾತ್ರ ಬಾಕಿ ಉಳಿದಿದ್ದು, ಆದಷ್ಟು ಬೇಗ ಶೂಟಿಂಗ್ ಮುಗಿಸುವುದಾಗಿ ನಿರ್ದೇಶಕ ಮನು ಕಲ್ಯಾಡಿ ಹೇಳಿದ್ದಾರೆ. ಮನು ಕಲ್ಯಾಡಿ ಈ ಹಿಂದೆ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ.
'ಪ್ರಾರಂಭ'ದಲ್ಲಿ ಮನೋರಂಜನ್ಗೆ ನಾಯಕಿಯಾಗಿ ಕೀರ್ತಿ ನಟಿಸಿದ್ದಾರೆ. ಅವರಿಗಿದು ಚೊಚ್ಚಲ ಸಿನಿಮಾ. ಉಳಿದಂತೆ ಕಡ್ಡಿಪುಡ್ಡಿ ಚಂದ್ರು, ಹನುಮಂತೇಗೌಡ, ರಾಘು ಶ್ರೀವಾಸ್ತವ್, ಶಾಂಭವಿ, ಸೂರಜ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಜಗದೀಶ್ ಕಲ್ಯಾಡಿ ಈ ಚಿತ್ರದ ನಿರ್ಮಾಪಕ. ಪ್ರಜ್ವಲ್ ಪೈ ಸಂಗೀತ ನೀಡಿದ್ದು, ಸಂತೋಷ್ ನಾಯಕ್ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಸುರೇಶ್ ಬಾಬು ಕ್ಯಾಮರಾ ವರ್ಕ್, ವಿಜಿ ಎಂ. ಕುಮಾರ್ ಎಡಿಟಿಂಗ್, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಕಲಾ ನಿರ್ದೇಶನ ಚಿತ್ರಕ್ಕಿದೆ. ಈ ಸಿನಿಮಾ ಕ್ರೇಜಿ ಸ್ಟಾರ್ ಪುತ್ರನಿಗೆ ಸಕ್ಸಸ್ ತಂದು ಕೊಡುವ ಸೂಚನೆ ಇದೆ.