ಮೈಸೂರು : ನಟ ಮಂಡ್ಯ ರಮೇಶ್ ತಂದೆ ಎನ್.ಸುಬ್ರಹ್ಮಣ್ಯಂ ಶುಕ್ರವಾರ ಮೈಸೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೈಸೂರಿನ ದಟ್ಟಗಳ್ಳಿಯ ಸೋಮನಾಥಪುರ ನಿವಾಸದಲ್ಲಿ ನಟ ಮಂಡ್ಯ ರಮೇಶ್ ಅವರ ತಂದೆ ಎನ್.ಸುಬ್ರಹ್ಮಣ್ಯಂ (90) ಕೊನೆಯುಸಿರೆಳೆದಿದ್ದಾರೆ. ಇವರು ಸಬ್ ರಿಜಿಸ್ಟರ್ ಆಗಿ, ಹಿರಿಯ ಕಲಾವಿದರಾಗಿ, ಮಂಡ್ಯ ಶಂಕರ ಮಠದ ಟ್ರಸ್ಟಿಗಳಾಗಿ, ಬಡಗನಾಡು ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಈ ಮೂಲಕ ಸಮಾಜದೊಂದಿಗೆ ನಿರಂತರ ಚಟುವಟಿಕೆಯಲ್ಲಿ ಭಾಗವಹಿಸಿ ಎಲ್ಲರಿಗೂ ಹುರುಪು ತುಂಬುತ್ತಿದ್ದ ಅವರು ನಿಧನರಾಗಿದ್ದು, ಶುಕ್ರವಾರ ಸಂಜೆ ಚಾಮುಂಡಿ ಬೆಟ್ಟದ ತಪ್ಪಲಿನ ಮುಕ್ತಿಧಾಮದಲ್ಲಿ ಕುಟುಂಬದವರು ಅಂತ್ಯ ಸಂಸ್ಕಾರ ನಡೆಸಿದರು.