ETV Bharat / sitara

ಕೊರೊನಾದಿಂದ ಸಂಕಷ್ಟದಲ್ಲಿರುವ ಶಿಕ್ಷಕರ ನೆರವಿಗೆ ನಿಂತ ಕಿಚ್ಚ..

author img

By

Published : May 25, 2021, 6:42 PM IST

Updated : May 25, 2021, 6:53 PM IST

ಮಹಾಮಾರಿ ಕೋವಿಡ್​ ಸಮಾಜದ ಎಲ್ಲ ವರ್ಗಗಳನ್ನು ಹಿಂಡಿ ಹಿಪ್ಪೆ ಮಾಡಿದೆ. ಸಹೃದಯಿಗಳು ಸಂಕಷ್ಟದಲ್ಲಿದ್ದವರ ನೆರವಿಗೆ ನಿಲ್ಲುತ್ತಿದ್ದಾರೆ. ಅದೇ ರೀತಿ ಅಭಿನಯ ಚಕ್ರವರ್ತಿ ಸುದೀಪ್ ಈಗ ಶಿಕ್ಷಕರ ನೆರವಿಗೆ ಮುಂದಾಗಿದ್ದಾರೆ.

Sudeep helps two teachers
ಶಿಕ್ಷಕರಿಗೆ ಸುದೇಪ್​ ನೆರವು

ಕೊರೊನಾದಿಂದ ಕಷ್ಟದಲ್ಲಿದ್ದ, ಕೂಲಿ ಕಾರ್ಮಿಕರು ಹಾಗು ಚಿತ್ರರಂಗದ ಪೋಷಕ ಕಲಾವಿದರಿಗೆ ಚಿತ್ರರಂಗದಲ್ಲಿ ಕೆಲ ತಾರೆಯರು ನೆರವು ನೀಡುತ್ತಿದ್ದಾರೆ. ಇದೇ ಹಾದಿಯಲ್ಲಿ ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ತಮ್ಮ ಕೈಲಾದ ಸಹಾಯ ನೀಡಲು ಮುಂದಾಗಿದ್ದಾರೆ.

ಕಿಚ್ಚ ಸುದೀಪ್​ ಚಾರಿಟೇಬಲ್ ಸೊಸೈಟಿ ವತಿಯಿಂದ, 'ಪೈಲ್ವಾನ್' ಹಸಿದವರ ಹಾಗು ನೊಂದವರ ಸಹಾಯಕ್ಕೆ ಬರ್ತಾ ಇದ್ದಾರೆ. ಇದೀಗ ಪಾಠ ಕಲಿಸುವ ಶಿಕ್ಷಕರ ಕಷ್ಟಕ್ಕೂ ಸ್ಪಂದಿಸಲು ಸಜ್ಜಾಗಿದ್ದಾರೆ.

ಹೌದು, ವಿದ್ಯೆ ಕಲಿಸುವ ಗುರುಗಳಿಗೆ, 'ನೀವು ರೂಪಿಸಿದ ಈ ವ್ಯಕ್ತಿತ್ವ.. ನೀವು ಕಲಿಸಿದ ವಿದ್ಯೆ.. ನೀವು ಕಲಿಸಿದ ಮಾತುಗಳು.. ಎಲ್ಲವನ್ನು ಗೌರವ ಮತ್ತು ಪ್ರೀತಿಯಿಂದ ನಿಮಗೆ ಹಿಂದಿರುಗಿಸುವ ಸಮಯ. ಹೀಗಾಗಿ ಖಾಸಗಿ ಶಾಲೆಯ ಶಿಕ್ಷಕರಿಗೆ ಈ ಕೊರೊನಾ ಸಂಕಷ್ಟದ ಕಾಲದಲ್ಲಿ ನಿಮ್ಮ ಜತೆ ನಾವಿದ್ದೇವೆ ಅನ್ನುವ ಸಮಯ.' ಎಂದು ಕಿಚ್ಚ ಸುದೀಪ್ ತಮ್ಮ ಚಾರಿಟೇಬಲ್ ಸೊಸೈಟಿ ಮೂಲಕ ಗುರುಗಳಿಗೆ ನೆರವು ನೀಡಲು ಮುಂದಾಗಿದ್ದಾರೆ‌.

Sudeep helps to teachers
ಶಿಕ್ಷಕರಿಗೆ ಕಿಚ್ಚನ ನೆರವು

ಈ ಅಭಿಯಾನದಲ್ಲಿ ಕರ್ನಾಟಕದ ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯ ಮಾಡಲಾಗುವುದು. ಮೊದಲನೇ ಹಂತದಲ್ಲಿ 50 ಶಿಕ್ಷಕರಿಗೆ ತಲಾ 2000 ರೂಪಾಯಿ ಧನಸಹಾಯ ಮಾಡುವುದಾಗಿ ತಿಳಿಸಲಾಗಿದೆ. ನೀವು ಖಾಸಗಿ ಶಾಲೆಯ ಶಿಕ್ಷಕರಾಗಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದರೆ 6360334455 ಈ ಸಂಖ್ಯೆಗೆ ಕರೆ ಮಾಡಿ. ನಾವು ನಿಮಗೆ ಸಹಾಯ ಮಾಡಲು ಸಿದ್ಧ ಎಂದಿದೆ ಕಿಚ್ಚನ ತಂಡ.

Last Updated : May 25, 2021, 6:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.