ETV Bharat / sitara

ನಾವೆಲ್ಲರೂ ಒಂದೇ ಅಂತ ಮತ್ತೆ ಪ್ರೂವ್​ ಮಾಡಿದ್ರು ಸುದೀಪ್​ ! - ಸಲಗ

ಕಿಚ್ಚನ ಹಾರೈಕೆ ವಿಜಿಗೆ ಆನೆ ಬಲ ನೀಡಿದಂತಾಗಿದೆ. ಸುದೀಪ್​ ಅವರಿಗೆ ಹೃದಯಪೂರ್ವಕ ಧನ್ಯವಾದ ಹೇಳಿರುವ ಅವರು, ನಿಮ್ಮಂತ ಹಿರಿಯ ನಟರ ಆಶೀರ್ವಾದ ಹಾಗೂ ಪ್ರೋತ್ಸಾಹ ನನಗೆ ಬಲ ನೀಡಿದೆ ಎಂದಿದ್ದಾರೆ.

ಸುದೀಪ್
author img

By

Published : May 14, 2019, 4:27 PM IST

Updated : May 14, 2019, 5:17 PM IST

ನಟ ದುನಿಯಾ ವಿಜಯ್ ಡೈರೆಕ್ಟರ್​ ಕ್ಯಾಪ್​ ತೊಡುತ್ತಿದ್ದಾರೆ. ತಮ್ಮದೇ 'ಸಲಗ' ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ. ಇದುವರೆಗೆ ಆ್ಯಕ್ಷನ್ ಹೀರೋ ಆಗಿದ್ದ ಕರಿಚಿರತೆ ಈಗ ಆ್ಯಕ್ಷನ್ ಕಟ್​ ಹೇಳುತ್ತಿದೆ.

ಈಗಾಗಲೇ ಯಶಸ್ವಿ ನಟ ಹಾಗೂ ಒಂದೆರಡು ಚಿತ್ರಗಳಿಗೆ ಕಥೆ ಬರೆದಿರುವ ಮಾಸ್ತಿಗುಡಿ, ಈಗ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ಸಲಗ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಸಲಗಕ್ಕೆ ತಾವೇ ಹಣ ಹಾಕುತ್ತಿದ್ದಾರೆ. ಈ ಚಿತ್ರದಲ್ಲಿ ಡಾಲಿ ಖ್ಯಾತಿಯ ಧನಂಜಯ್ ಐಪಿಎಸ್​ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ.

ವಿಜಿಯ ನೂತನ ಪ್ರಯತ್ನಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ. ಒಬ್ಬ ನಟ ನಿರ್ದೇಶಕನಾಗುವುದು ದೊಡ್ಡದು. ಅಷ್ಟೇ ಒತ್ತಡ ಕೂಡ ಇರುತ್ತದೆ. ಈ ಕ್ಷಣವನ್ನೂ ಆನಂದಿಸಿ,ಯಶಸ್ಸು ಗಳಿಸಿ ಎಂದು ಹಾರೈಸಿದ್ದಾರೆ.

  • Sir, Thank you for the tweet from bottom of my heart. I believe in the mantra of "When all else fails try patience" and this is where it has got me. With industry veterans like you backing me up, I am hoping the almighty gives me the strength to pull this one through.

    — Duniya Vijay (@OfficialViji) May 14, 2019 " class="align-text-top noRightClick twitterSection" data=" ">

ಕಿಚ್ಚನ ಹಾರೈಕೆ ವಿಜಿಗೆ ಆನೆ ಬಲ ನೀಡಿದಂತಾಗಿದೆ. ಸುದೀಪ್​ ಅವರಿಗೆ ಹೃದಯಪೂರ್ವಕ ಧನ್ಯವಾದ ಹೇಳಿರುವ ಅವರು, ನಿಮ್ಮಂತ ಹಿರಿಯ ನಟರ ಆಶೀರ್ವಾದ ಹಾಗೂ ಪ್ರೋತ್ಸಾಹ ನನಗೆ ಬಲ ನೀಡಿದೆ ಎಂದಿದ್ದಾರೆ.

ಇನ್ನು ಕಳೆದ ವರ್ಷ ವಿಜಯ್ ಅವರ 'ಕುಸ್ತಿ' ಚಿತ್ರದ ಡೈಲಾಗ್​ವೊಂದು ವಿವಾದ ಸೃಷ್ಟಿಸಿತ್ತು. ಸುದೀಪ್ ಹಾಗೂ ವಿಜಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಜಗಳವಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ್ದ ಸುದೀಪ್​, ತಮ್ಮ ಅಭಿಮಾನಿಗಳು ಬುದ್ಧಿವಾದ ಹೇಳಿದ್ದರು. ಜತೆಗೆ ವಿಜಯ್ ಅವರ ಕುಸ್ತಿ ಚಿತ್ರಕ್ಕೆ ಆಲ್​ ದಿ ಬೆಸ್ಟ್​ ತಿಳಿಸಿದ್ದರು. ಇದೀಗ ಮತ್ತೊಮ್ಮೆ ವಿಜಿಯ ಬೆನ್ನು ತಟ್ಟಿದ್ದಾರೆ. ಇದು ಸ್ಯಾಂಡಲ್​​ವುಡ್​​ ತಾರೆಯರು ಒಗ್ಗಟ್ಟು ತೋರ್ಪಡಿಸುತ್ತಿದೆ.

Intro:Body:Conclusion:
Last Updated : May 14, 2019, 5:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.