ETV Bharat / sitara

ಕೋಮಲ್ ಮದುವೆ ಬೆನ್ನಲ್ಲೇ ಆ ದುರ್ಘಟನೆ ನಡೆಯಿತು...ಭಾವಪೂರ್ಣ ಪೋಸ್ಟ್ ಹಂಚಿಕೊಂಡ ಜಗ್ಗೇಶ್​​​​

ನಿನ್ನೆ ವಿಶ್ವ ತಾಯಂದಿರ ದಿನದ ಅಂಗವಾಗಿ ನಟ ಜಗ್ಗೇಶ್ ತಮ್ಮ ಟ್ವಿಟ್ಟರ್​​​ನಲ್ಲಿ ಕೋಮಲ್ ಮದುವೆ ಫೋಟೋವೊಂದನ್ನು ಹಂಚಿಕೊಂಡು, ಕೋಮಲ್ ಮದುವೆಯಾಗಿ 20 ದಿನಗಳಲ್ಲೇ ಅಮ್ಮ ನಿಧನರಾದ ವಿಚಾರವನ್ನು ಹೇಳಿಕೊಂಡು ಭಾವಪೂರ್ಣ ಪೋಸ್ಟ್ ಹಾಕಿಕೊಂಡಿದ್ದಾರೆ.

jaggesh
ಜಗ್ಗೇಶ್
author img

By

Published : May 11, 2020, 7:19 PM IST

Updated : May 11, 2020, 7:24 PM IST

ನವರಸ ನಾಯಕ ಜಗ್ಗೇಶ್​​​, ತೆರೆ ಮೇಲೆ ಎಷ್ಟು ಕಾಮಿಡಿ ಮಾಡ್ತಾರೋ, ತೆರೆ ಹಿಂದೆ ಕೂಡಾ ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಕಾಮಿಡಿ ಮಾಡುತ್ತಾ ತಾವೂ ನಕ್ಕೂ ಎಲ್ಲರನ್ನೂ ನಗಿಸುವ ವ್ಯಕ್ತಿತ್ವ ಹೊಂದಿದವರು.

  • ಅಮ್ಮ ನನಗೆ ಬೇಗ ಕೋಮಲ್ ಮದುವೆ
    ಮಾಡು ಈಶ ಯಾಕೋ ಶಿವ ಕರೆದಂತೆ ಆಗುತ್ತಿದೆ ಎಂದು ಹಿಂಸೆಕೊಟ್ಟಳು!ವಾರದಲ್ಲೆ ಸ್ನೇಹಿತನ ತಂಗಿಯನ್ನ ಒಪ್ಪಿಸಿ
    20ವರ್ಷದ ಕೋಮಲ್ ಗೆ ಮದುವೆ ಮಾಡಿಸಿಬಿಟ್ಟೆ!ಕೂತು ಚಪ್ಪಾಳೆತಟ್ಟಿ ಆನಂದಿಸಿ ಅವನು ಮದುವೆಯಾದ 20ದಿನಕ್ಕೆ ದೇಹತ್ಯಾಗ ಮಾಡಿಬಿಟ್ಟಳು ಅಮ್ಮ!ಆಕಸ್ಮಿಕ ಇಂದು ಸಿಕ್ಕ ಅಮ್ಮನ ಪೋಟೋ ಭಾವುಕನಾಗಿಸಿತು ನನ್ನ.! pic.twitter.com/G4DpAdxQ9z

    — ನವರಸನಾಯಕ ಜಗ್ಗೇಶ್ (@Jaggesh2) May 10, 2020 " class="align-text-top noRightClick twitterSection" data=" ">

ಇನ್ನು ನಿನ್ನೆಯಷ್ಟೇ ಸಾಮಾನ್ಯರು ಸೇರಿದಂತೆ ಎಲ್ಲಾ ಸೆಲಬ್ರಿಟಿಗಳು ವಿಶ್ವ ಅಮ್ಮಂದಿರ ದಿನದ ಅಂಗವಾಗಿ ತಮ್ಮ ತಾಯಿ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜಗ್ಗೇಶ್ ಕೂಡಾ ತಮ್ಮ ತಾಯಿಯನ್ನು ನೆನೆದು ಅವರು ಕಾಲವಾದ ವಿಚಾರದ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ಕೋಮಲ್ ಮದುವೆ ಪೋಟೋವೊಂದನ್ನು ತಮ್ಮ ಟ್ವಿಟ್ಟರ್​​​​ನಲ್ಲಿ ಹಂಚಿಕೊಂಡಿರುವ ಜಗ್ಗೇಶ್​, 'ಒಮ್ಮೆ ಅಮ್ಮ ನನ್ನನ್ನು ಕರೆದು, ಶಿವ ನನ್ನನ್ನು ಕರೆಯುತ್ತಿದ್ಧಾನೆ ಎನ್ನಿಸುತ್ತಿದೆ ಈಶ. ನನಗೆ ಕೋಮಲ್ ಮದುವೆ ನೋಡಬೇಕು ಎನ್ನಿಸುತ್ತಿದೆ ಎಂದು ಕೇಳಿದರು, ಅಮ್ಮನ ಆಸೆ ಈಡೇರಿಸಲು ಸ್ನೇಹಿತನ ತಂಗಿಯನ್ನು ಒಪ್ಪಿಸಿ ವಾರದಲ್ಲೇ ತಮ್ಮನ ಮದುವೆ ಮಾಡಿದೆ. ಮದುವೆ ದಿನ ಚಪ್ಪಾಳೆ ಹಾಕುತ್ತಾ ಖುಷಿ ವ್ಯಕ್ತಪಡಿಸಿದ ಅಮ್ಮ 20 ದಿನಗಳಲ್ಲೇ ನಮ್ಮನ್ನೆಲ್ಲಾ ಅಗಲಿದರು'. ಎಂದು ಭಾವಪೂರ್ಣವಾಗಿ ಬರೆದುಕೊಂಡಿದ್ದಾರೆ.

ಶಿವಲಿಂಗಪ್ಪ, ನಂಜಪ್ಪ ದಂಪತಿ ಪುತ್ರನಾಗಿ ಜನಿಸಿದ ಈಶ್ವರ್ ಗೌಡ ಅವರಿಗೆ ಚಿಕ್ಕಂದಿನಿಂದ ನಟನೆ ಬಗ್ಗೆ ಆಸಕ್ತಿ ಇತ್ತು. ತಮಗೆ ದೊರೆತ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಬಹಳ ಕಷ್ಟಪಟ್ಟು ಮುಂದೆ ಬಂದವರು ಜಗ್ಗೇಶ್. ರಾಜಕೀಯ ಮಾತ್ರವಲ್ಲ ಸಮಾಜಸೇವೆಯಲ್ಲೂ ತಮ್ಮನ್ನೂ ಗುಗುತಿಸಿಕೊಂಡಿರುವ ಜಗ್ಗೇಶ್ ಇತ್ತೀಚೆಗೆ ದಿವ್ಯಾಂಗ ಗಾಯಕಿಯರಿಗೆ ಸ್ವಂತ ಖರ್ಚಿನಲ್ಲಿ ಮನೆ ಕೂಡಾ ಕಟ್ಟಿಸಿಕೊಟ್ಟಿದ್ದಾರೆ.

Last Updated : May 11, 2020, 7:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.