ETV Bharat / sitara

ಯುವರತ್ನ ನೋಡಲು ಫ್ಯಾಮಿಲಿಗಳು ಬರ್ತಿವೆ, ಈ ರೀತಿಯಾದ್ರೆ ಚಿತ್ರರಂಗ ಉಳಿಯೋದ್ಹೇಗೆ?.. ನಟ ದುನಿಯಾ ವಿಜಿ - theatres to operate at 50% occupancy

ಎಲ್ಲಾ ಮಠಗಳ ಮೇಲೆ ಅಭಿಮಾನ ಇದೆ. ನಾನು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ನನಗೆ ಎಲ್ಲಿ ಹೋಗಬೇಕು ಅನ್ನಿಸುತ್ತೋ ಅಲ್ಲಿ ಹೋಗುತ್ತೇನೆ, ದುನಿಯಾವನ್ನು ಎಲ್ಲಾ ಜಾತಿ ಧರ್ಮದವರು ನೋಡಿ ಬೆಳೆಸಿದ್ದೀರಿ..

actor duniya vijay reation on theatres to operate at 50% occupancy
ನಟ ದುನಿಯಾ ವಿಜಿ
author img

By

Published : Apr 3, 2021, 5:43 PM IST

ದಾವಣಗೆರೆ : ಥಿಯೇಟರ್​ಗಳಲ್ಲಿ ಶೇ.50ರಷ್ಟು ಸೀಟು ಭರ್ತಿ ಆದೇಶ ಹಿನ್ನೆಲೆ ದಾವಣಗೆರೆಯಲ್ಲಿ ನಟ ದುನಿಯಾ ವಿಜಯ್​​ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೋಡಿ ಶಾಖಾ ಮಠದಲ್ಲಿ ಮಾತನಾಡಿದ ಅವರು, ಎಲ್ಲೂ ಇಲ್ಲದ ನಿಯಮಗಳು ಚಿತ್ರಮಂದಿರಕ್ಕೆ ಏಕೆ?, ರಾಜಕೀಯ ಸಮಾವೇಶಗಳಲ್ಲಿ ಸಾವಿರಾರು ಜನ ಸೇರ್ತಾರೆ. ಅದಕ್ಕೆ ನಿರ್ಬಂಧ ಇಲ್ಲವೇ ಎಂದು ಪ್ರಶ್ನಿಸಿದರು.

ಚಿತ್ರಮಂದಿರದಲ್ಲಿ ಶೇ 50ರಷ್ಟು ಸೀಟು ಭರ್ತಿ ಆದೇಶ: ನಟ ದುನಿಯಾ ವಿಜಿ ಅಸಮಾಧಾನ

ಪುನಿತ್ ರಾಜಕುಮಾರ್ ಅವರು ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ಎರಡು ದಿನ ಮೊದಲು ಹೇಳಿದ್ದರೆ ಅವರು ಸಿನಿಮಾ ರಿಲೀಸ್ ಮಾಡುತ್ತಿರಲಿಲ್ಲ. ಯುವರತ್ನ ಸಿನಿಮಾ ಬಿಗ್ ಬಜೆಟ್​ಗಳ ಸಿನಿಮಾಗಳಲ್ಲಿ ಒಂದು. ಈ ರೀತಿ ಆದ್ರೆ ಸಿನಿಮಾ ಇಂಡಸ್ಟ್ರಿ ಉಳಿಯುವುದು ಹೇಗೆ?, ಪುನಿತ್ ಸಿನಿಮಾ ನೋಡಲು ಫ್ಯಾಮಿಲಿಗಳು ಬರ್ತಾ ಇದೆ.

ದಯವಿಟ್ಟು ಟಫ್ ರೂಲ್ಸ್‌ಗಳನ್ನು ಸಡಿಲಿಸಿ ಎಂದು ಸರ್ಕಾರಕ್ಕೆ ದುನಿಯಾ ವಿಜಿ ಮನವಿ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಪುನೀತ್ ಅವರು ಸರ್ಕಾರಕ್ಕೆ ನೆರವು ನೀಡಿದ್ರು. ಅದಕ್ಕೆ ಅಂತ ನಾವು ಕೇಳ್ತಾ ಇಲ್ಲ, ಕನ್ನಡ ಸಿನಿಮಾ ರಂಗ ಉಳಿಯಲು ಕೇಳುತ್ತಿದ್ದೇವೆ ಎಂದರು.

ಎಲ್ಲಾ ಮಠಗಳ ಮೇಲೆ ಅಭಿಮಾನ ಇದೆ. ನಾನು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ನನಗೆ ಎಲ್ಲಿ ಹೋಗಬೇಕು ಅನ್ನಿಸುತ್ತೋ ಅಲ್ಲಿ ಹೋಗುತ್ತೇನೆ, ದುನಿಯಾವನ್ನು ಎಲ್ಲಾ ಜಾತಿ ಧರ್ಮದವರು ನೋಡಿ ಬೆಳೆಸಿದ್ದೀರಿ‌ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.