ETV Bharat / sitara

ಸೆಟ್ಟೇರಲಿದೆ ಧ್ರುವಾ ಹೊಸ ಸಿನಿಮಾ: ಆಗಸ್ಟ್15ಕ್ಕೆ ಮುಹೂರ್ತ - Actor Druva Sarja Martin Movie

ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರ ಸ್ವಾತಂತ್ರೋತ್ಸವದಂದು ಸೆಟ್ಟೇರಲಿದೆ. ಇನ್ನು ಚಿತ್ರಕ್ಕೆ ಮಾರ್ಟಿನ್ ಎಂಬ ಹೆಸರು ಇಡಲಾಗಿದೆಯಂತೆ. ರಾಬರ್ಟ್ ತರಹ ಮಾರ್ಟಿನ್ ಎಂಬ ಹೆಸರಿನ ಸೌಂಡಿಂಗ್ ಚೆನ್ನಾಗಿರುವುದರಿಂದ ಚಿತ್ರಕ್ಕೆ ಆ ಹೆಸರು ಇಡಲಾಗಿದೆ ಎಂದು ಹೇಳಲಾಗುತ್ತಿದೆ.

Actor Druva Sarja
ಧ್ರುವ ಸರ್ಜಾ
author img

By

Published : Aug 13, 2021, 2:10 PM IST

ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಮುಹೂರ್ತ ಸಮಾರಂಭದಲ್ಲಿ ರವಿಚಂದ್ರನ್ ಭಾಗವಹಿಸುವ ಸಾಧ್ಯತೆ ಇದೆ.

ಕೆಲವು ದಿನಗಳ ಹಿಂದೆ ಧ್ರುವ ಮತ್ತು ನಿರ್ಮಾಪಕ ಉದಯ್ ಮೆಹ್ತಾ ಇಬ್ಬರೂ ರವಿಚಂದ್ರನ್ ಅವರನ್ನು ಭೇಟಿ ಮುಹೂರ್ತಕ್ಕೆ ಆಹ್ವಾನಿಸಿ ಬಂದಿದ್ದರು. ಆದರೆ, ರವಿಚಂದ್ರನ್ ಕೊಡಗಿನಲ್ಲಿರುವುದರಿಂದ ಮತ್ತು ದೃಶ್ಯ 2 ಚಿತ್ರದ ಸತತ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದರಿಂದ, ಮುಹೂರ್ತಕ್ಕೆ ಬರುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸದ್ಯ ಸಿನಿಮಾದ ಹೆಸರನ್ನು ಚಿತ್ರತಂಡ ಹೇಳಿರಲಿಲ್ಲ. ಆಗಸ್ಟ್ 15ರಂದೇ ಚಿತ್ರದ ಹೆಸರು ಮತ್ತು ಫಸ್ಟ್​ ಲುಕ್​ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಮೂಲಗಳ ಪ್ರಕಾರ, ಚಿತ್ರಕ್ಕೆ ಮಾರ್ಟಿನ್ ಎಂಬ ಹೆಸರನ್ನು ಇಡಲಾಗಿದೆಯಂತೆ. ರಾಬರ್ಟ್ ತರಹ ಮಾರ್ಟಿನ್ ಎಂಬ ಹೆಸರಿನ ಸೌಂಡಿಂಗ್ ಚೆನ್ನಾಗಿರುವುದರಿಂದ ಚಿತ್ರಕ್ಕೆ ಆ ಹೆಸರು ಇಡಲಾಗಿದೆ ಎಂದು ಹೇಳಲಾಗುತ್ತಿದೆ.

ಹೊಸ ಚಿತ್ರದಲ್ಲಿ ಧ್ರುವ ಅವರ ಲುಕ್ ಹೇಗಿರಲಿದೆ ಎಂಬ ಕುತೂಹಲ ಸಹಜವೇ. ಆದರೆ ಚಿತ್ರತಂಡವು ಈ ವಿಷಯವನ್ನು ಗೌಪ್ಯವಾಗಿ ಇಟ್ಟಿದ್ದು, ಆಗಸ್ಟ್ 15ರಂದು ಅಧಿಕೃತವಾಗಿ ಫಸ್ಟ್​ಲುಕ್​ ಬಿಡುಗಡೆ ಮಾಡಲಿದೆ. ಮಾರ್ಟಿನ್ ಚಿತ್ರವನ್ನು ಉದಯ್ ಮೆಹ್ತಾ ನಿರ್ಮಿಸಿದರೆ, ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಕಥೆ-ಚಿತ್ರಕಥೆ ಸಹ ಅವರದ್ದೇ. ಇನ್ನು ಎ.ಪಿ ಅರ್ಜುನ್ ಅವರ ಖಾಯಂ ಕ್ಯಾಮೆರಾಮ್ಯಾನ್ ಎನಿಸಿಕೊಂಡಿರುವ ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕರಾದ ರಾಮ್​-ಲಕ್ಷ್ಮಣ್ ಈ ಚಿತ್ರ ಸೇರಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.