ಯಶಸ್ವಿ ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ ತಮ್ಮ ಸ್ಮೃತಿ ಪಟಲದಿಂದ ಕೆಲವು ನೆನಪುಗಳನ್ನು ಹೊರಹಾಕಿದ್ದಾರೆ. ಅವರ ಗುರು ಅರವಿಂದ್ ಕೌಶಿಕ್ ಅವರನ್ನು ನೆನದಿದ್ದಾರೆ.
ಅದು ಶೆಟ್ಟರ ಕಷ್ಟದ ದಿವಸಗಳು, ಕೈಯಲ್ಲಿ ಕಾಸಿಲ್ಲ ಮತ್ತು ಕೆಲಸವೂ ಇರಲಿಲ್ಲ. ಈ ವೇಳೆ ‘ನಮ್ ಏರಿಯಾದಲ್ ಒಂದ್ ದಿನ’ (2010) ಚಿತ್ರದ ಮೂಲಕ ನಿರ್ದೇಶಕ ಅರವಿಂದ್ ಕೌಶಿಕ್ ಕ್ಯಾಂಪ್ ಸೇರುತ್ತಾರೆ. ಅಲ್ಲಿ ದಿವಸಕ್ಕೆ 500 ರೂಪಾಯಿ ಪಡೆದು ಕೆಲಸ ಮಾಡುತ್ತಾರೆ. ಆ ಟೀಮ್ ಅಲ್ಲೇ ರಿಷಭ್ ಶೆಟ್ಟಿಗೆ ರಕ್ಷಿತ್ ಶೆಟ್ಟಿ ಪರಿಚಯ ಆಗಿದ್ದು. 500 ರೂಪಾಯಿಯಂತೆ ಐದು ದಿವಸಕ್ಕೆ ಬಂದ ₹2500 ಹಣವನ್ನು ಪಾರ್ಟಿ ಮಾಡಿ ಖರ್ಚು ಮಾಡಿಕೊಂಡಿದ್ದನ್ನು ರಿಷಭ್ ಹೇಳಿಕೊಂಡ್ರು.