ETV Bharat / sitara

ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಜ.26ರಿಂದ ಡಾಲಿ ಅಭಿನಯದ ಬಡವ ರಾಸ್ಕಲ್ ಸಿನಿಮಾ ಬಿಡುಗಡೆ

author img

By

Published : Jan 19, 2022, 9:59 PM IST

ನಟ ಡಾಲಿ ಧನಂಜಯ್​ ಅಭಿನಯದ ಬಡವ ರಾಸ್ಕಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಜನವರಿ 26ರಿಂದ ವೂಟ್‌ ಸೆಲೆಕ್ಟ್‌ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

Badava Rascal movie will release in OTT platform
ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಬಡವ ರಾಸ್ಕಲ್ ಸಿನಿಮಾ ಬಿಡುಗಡೆ

ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಕೇವಲ 50 ರಷ್ಟು ಆಸನಕ್ಕೆ ಅವಕಾಶ ಕಲ್ಪಿಸಿರುವ ಬೆನ್ನಲ್ಲೇ ಥಿಯೇಟರ್​ಗಳಲ್ಲಿ ಬಿಡುಗಡೆಯಾದ ಸಾಕಷ್ಟು ಚಿತ್ರಗಳು, ಕೆಲವೇ ದಿನಗಳಲ್ಲಿ ಒಟಿಟಿ ಪ್ಲಾಟ್ ಫಾರ್ಮ್​​​ನಲ್ಲಿ ಬಿಡುಗಡೆಯಾಗುತ್ತಿವೆ. ಇದೀಗ ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಜನವರಿ 26ರಿಂದ ವೂಟ್‌ ಸೆಲೆಕ್ಟ್‌ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

ಶಂಕರ್ ಗುರು ನಿರ್ದೇಶನದಲ್ಲಿ ಮೂಡಿ ಬಂದಿರುವ ರೊಮ್ಯಾಂಟಿಕ್ ಡ್ರಾಮದಲ್ಲಿ ಧನಂಜಯ್, ಅಮೃತ ಅಯ್ಯಂಗಾರ್, ರಂಗಾಯಣ ರಘು ಹಾಗೂ ತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ವರ್ಶ ರೇಖಾ, ನಾಗಭೂಷಣ್, ಪೂರ್ಣ ಚಂದ್ರ ಮತ್ತು ಮಾಸ್ತಿ ಮಂಜು ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ.

ಶ್ರೀಮಂತ ರಾಜಕಾರಣಿಯ ಮಗಳು ಸಂಗೀತಾ (ಅಮೃತ) ಮತ್ತು ಮಧ್ಯಮ ವರ್ಗ ಕುಟುಂಬದ ಶಂಕರ್ (ಧನಂಜಯ್) ನಡುವೆ ಪ್ರೇಮ ಬೆಳೆದು ಹಲವು ತಿರುವು ಪಡೆದು ಇವರಿಬ್ಬರು ಒಂದಾಗಲಿದ್ದಾರೆಯೇ ಎಂಬ ಪ್ರೇಮಕಥೆ ಹಾಗೂ ಜೀವನದಲ್ಲಿ ನಡೆಯುವ ಕೆಲ ಘಟನೆಗಳನ್ನು ಹೊಂದಿದೆ. ಚಿತ್ರ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡು ಜನರಿಂದ ಮೆಚ್ಚುಗೆ ಪಡೆದಿದೆ. ಇದೀಗ ಗಣರಾಜ್ಯೋತ್ಸವ ದಿನದಂದು (ಜ. 26ಕ್ಕೆ) ಚಿತ್ರ ವೂಟ್ ಸೆಲೆಕ್ಟ್ ಒಟಿಟಿಯಲ್ಲಿ ರಿಲೀಸ್ ಆಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಡಾಲಿ ಧನಂಜಯ್, ಈ ಚಿತ್ರ ನನಗೆ ಎರಡು ಕಾರಣಗಳಿಂದ ಬಹಳ ಹತ್ತಿರವೆನಿಸುತ್ತದೆ. ಒಂದು, ಚಿತ್ರ ತಂಡ ಮತ್ತೊಂದು ಈ ಚಿತ್ರದಲ್ಲಿನ ಕತೆ. ಬಡತನದ ಸೂಕ್ಷ್ಮತೆಯನ್ನು ತೋರಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಒಬ್ಬ ಸಾಮಾನ್ಯ ಮನುಷ್ಯ ತನ್ನ ಕನಸುಗಳನ್ನು ಹೇಗೆ ಬೆನ್ನಟ್ಟಿ ಯಶಸ್ವಿಯಾಗುತ್ತಾನೆ. ಜೊತೆಗೆ ಪ್ರೀತಿಯನ್ನೂ ಬಿಟ್ಟುಕೊಡದೆ ಹೇಗೆಲ್ಲಾ ಕಷ್ಟ ಪಡುತ್ತಾನೆ ಎಂಬುದನ್ನು ಅತಿ ಭಾವನಾತ್ಮಕವಾಗಿ ತೋರಿಸಲಾಗಿದೆ ಎಂದಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಜನರು ಥಿಯೇಟರ್‌ಗೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಚಿತ್ರವೇ ನಿಮ್ಮ ಮನೆಗೆ ಬರಲು ಸಿದ್ಧವಾಗಿದೆ. ಈ ಚಿತ್ರವು ಐಎಂಡಿಬಿನಲ್ಲಿ 9.4 ರೇಟಿಂಗ್ ಹೊಂದಿದ್ದು, ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿದೆ.

ಇದನ್ನೂ ಓದಿ: ಅಪ್ಪು, ಅಪ್ಪ-ಅಮ್ಮನ ಅಗಲಿಕೆ ನೋವು.. ಈ ವರ್ಷ ಹುಟ್ಟು ಹಬ್ಬ ಆಚರಿಸದಿರಲು 'ಸಲಗ' ನಿರ್ಧಾರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.