ತಂದೆ-ತಾಯಿ ಹುಟ್ಟಿದ ದಿನದಂದೇ ಮಕ್ಕಳು ಕೂಡಾ ಹುಟ್ಟುವುದು ಬಹಳ ಅಪರೂಪ. ಒಂದು ವೇಳೆ ಹಾಗೇನಾದರೂ ಆದಲ್ಲಿ ಅದು ನಿಜಕ್ಕೂ ಡಬಲ್ ಧಮಾಕ. ಒಂದೇ ದಿನ ತಾವು ಹಾಗೂ ಮಕ್ಕಳು ಬರ್ತಡೇ ಆಚರಿಸಿಕೊಳ್ಳುವುದರ ಸಂತೋಷಕ್ಕೆ ಸಮನಾದದ್ದು ಬೇರೇನೂ ಇಲ್ಲ.
ತಮಿಳು ನಟ ಅಶ್ವಿನ್ ಕಾಕುಮಾನು ಜುಲೈ 5ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅದೇ ದಿನ ಅವರ ಪತ್ನಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. 2016ರಲ್ಲಿ ಅಶ್ವಿನ್ ಕಾಕುಮಾನು ತಮ್ಮ ದೀರ್ಘಕಾಲದ ಗೆಳತಿ ಸೋನಾಲಿ ಮನವಳನ್ ಅವರನ್ನು ವರಿಸಿದ್ದರು. ಇನ್ನು ಈ ವಿಶೇಷ ದಿನದ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ. ಅಶ್ವಿನ್ ಅಭಿಮಾನಿಗಳು ಹಾಗೂ ಚಿತ್ರರಂಗದ ಸ್ನೇಹಿತರು ಅವರಿಗೆ ಶುಭ ಕೋರಿದ್ದಾರೆ. ಬಿರ್ಯಾನಿ, ಮೇಘ, ಜೀರೋ, ನೀಲ ನೀಲ ಒಡಿ ವಾ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ಅಶ್ವಿನ್ ನಟಿಸಿದ್ದಾರೆ.