ಕೆಲ ದಿನಗಳ ಹಿಂದೆ ಸ್ಯಾಂಡಲ್ವುಡ್ನಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ನಟ ದರ್ಶನ್, ಇದೀಗ ಟೆಂಪಲ್ ರನ್ ಮಾಡ್ತಿದ್ದಾರೆ. 25 ಕೋಟಿ ರೂಪಾಯಿ ಶ್ಯೂರಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಹಾಗೂ ಬ್ಯಾಂಕ್ ಮ್ಯಾನೇಜರ್ ಎನ್ನಲಾದ ಅರುಣಾಕುಮಾರಿ ಪ್ರಕರಣ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿತ್ತು.

ಈ ಗಲಾಟೆ ಬೆನ್ನಲ್ಲೇ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿದ ಆರೋಪದಿಂದ ದರ್ಶನ್ ಕುಪಿತರಾಗಿ, ಗಂಡಸ್ತನದ ಬಗ್ಗೆ ಸವಾಲುಗಳನ್ನ ಹಾಕಿದ್ದರು. ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತ್ಯಾರೋಪಗಳ ಬಳಿಕ, ದರ್ಶನ್ ಮಾಧ್ಯಮಗಳ ಬಗ್ಗೆ ಅವಾಚ್ಯ ಶಬ್ದಗಳನ್ನ ಬಳಸಿ ನಿಂದಿಸಿದ್ದರು.

ಈ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ವಿವಾದಗಳಿಂದ ದೂರವಾಗಿ, ನೆಮ್ಮದಿ ಪಡೆಯಲೆಂದು ದರ್ಶನ್ ತಮಿಳುನಾಡಿನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಪುದುಚೇರಿಯಲ್ಲಿರುವ ತಿರುನಲ್ಲಾರ್, ಶನಿದೇವ ದೇವಾಲಯಕ್ಕೆ ಗೆಳೆಯರೊಂದಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನು, ದರ್ಶನ್ ಜೀವನದಲ್ಲಿ ಏನಾದರು ವಿವಾದಗಳು ಹಾಗೂ ಸಮಸ್ಯೆಗಳು ಸೃಷ್ಟಿಯಾದಾಗ ಈ ಶನಿದೇವರ ಮೊರೆ ಹೋಗುತ್ತಾರೆ. ಈಗ ಮತ್ತೆ ವಿವಾದಗಳ ಕೇಂದ್ರಬಿಂದು ಆಗಿರುವ ದರ್ಶನ್, ಶನಿದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ..
ಇದನ್ನೂ ಓದಿ: ಪ್ರಭಾಸ್, ದೀಪಿಕಾ & ಬಿಗ್ ಬಿ ಅಭಿನಯಿಸುತ್ತಿರುವ ಚಿತ್ರದ ಶೂಟಿಂಗ್ ಶುರು... ಯಾವುದಾ ಚಿತ್ರ?