ದೇಶದೆಲ್ಲೆಡೆ ಸೆಪ್ಟೆಂಬರ್ 14ನ್ನು ಹಿಂದಿ ದಿವಸವಾಗಿ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯ ಕೇಂದ್ರ ಸರ್ಕಾರ, ಈಗಾಗಲೇ ಹಿಂದಿ ಹೇರಿ ಮಾಡುತ್ತಿದೆ ಎಂಬ ಅಪವಾದ ಕೇಳಿ ಬಂದಿದೆ. ಆದರೆ ಹಿಂದಿ ಹೇರಿಕೆ ಬಗ್ಗೆ ಕೆಲವೊಂದು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಹಿಂದಿ ಹೇರಿಕೆ ಬಗ್ಗೆ ಸಾಕಷ್ಟು ಸಿನಿಮಾ ತಾರೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 'ಆ ದಿನಗಳು' ಸಿನಿಮಾ ಖ್ಯಾತಿಯ ನಟ ಚೇತನ್ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ಒಂದು ಅಚ್ಚರಿ ಸಂಗತಿ ಅಂದ್ರೆ, ಚೇತನ್ ಹೋರಾಟಕ್ಕೆ ಈಗ ಪತ್ನಿ ಮೇಘಾ ಕೂಡ ಕೈ ಜೋಡಿಸುವ ಮೂಲಕ ಪತಿಯ ಸಪೋರ್ಟ್ಗೆ ನಿಂತಿದ್ದಾರೆ.
ಮೂಲತಃ ಮಧ್ಯ ಪ್ರದೇಶದ ಅಸ್ಸೋಂನವರು ಆಗಿರುವ ಮೇಘಾ, ಹುಟ್ಟಿ ಬೆಳೆದಿದ್ದು ಮಧ್ಯಪ್ರದೇಶದಲ್ಲಿ. ಅವರ ಮಾತೃ ಭಾಷೆ ಹಿಂದಿ. ಆದರೂ ಸಹ ಇಂದು ಹಿಂದಿ ದಿವಸ ಆದ್ದರಿಂದ ಈ ದಿನವನ್ನು ವಿರೋಸಿ ಕನ್ನಡದ ಹೆಣ್ಣು ಮಗಳು ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲಾ ಚೇತನ್ ಮೇಘಾ ಅವ್ರನ್ನ ಮದುವೆಯಾಗುವ ಸಂದರ್ಭದಲ್ಲಿ, ಮೇಘಾಗೆ ಕನ್ನಡವನ್ನು ಕಲಿಸುತ್ತೇನೆ ಅಂದಿದ್ರು. ಅದೇ ರೀತಿ ಮದುವೆಯಾದ ಏಳು ತಿಂಗಳಿಗೆ ಕನ್ನಡವನ್ನ ಕಲಿತು ಕನ್ನಡದಲ್ಲೇ ಮಾತನಾಡಿ ಹಿಂದಿಯನ್ನ ವಿರೋಧಿಸಿರೋದು ಹೆಮ್ಮೆಯ ಸಂಗತಿ.