ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಸ್ಮಶಾನ ಕಾರ್ಮಿಕರ ಪರವಾಗಿ ನಟ ಆ ದಿನಗಳು ಚೇತನ್ ಸಿಎಂಗೆ ಪತ್ರ ಬರೆದಿದ್ದು, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಸ್ಮಶಾನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೈದ್ಯಕೀಯ ವಿಮೆ ಒದಗಿಸಿಕೊಡಬೇಕು. ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ ನೀಡಬೇಕು, ಹೆಚ್ಚು ಕೆಲಸ ಮಾಡಿದರೆ ಹೆಚ್ಚು ಸಂಬಳ ನೀಡಬೇಕು. 4 ನೇ ದರ್ಜೆಯ ಡಿ ಗ್ರೂಪ್ ನೌಕರರಿಗೆ ಶಾಶ್ವತ ಉದ್ಯೋಗ, ಪಿಎಫ್ ಸೇರಿಂದತೆ ಹಲವು ಬೇಡಿಕೆಗಳನ್ನು ಅವರು ಸಿಎಂ ಮುಂದಿಟ್ಟಿದ್ದಾರೆ.
![Actor Chetan urges to meet graveyard workers demand](https://etvbharatimages.akamaized.net/etvbharat/prod-images/kn-bng-02-crematorium-karamikara-paravagi-nata-chethan-cmge-pathra-7204725_17052021104507_1705f_1621228507_762.jpg)
ಇದನ್ನೂ ಓದಿ : ಭಾರತೀಯ ಜೈನ್ ಸಂಘಟನೆಯಿಂದ ಕಡಿಮೆ ದರಕ್ಕೆ ಆಮ್ಲಜನಕ ಯಂತ್ರ ವಿತರಣೆ
ಕೋವಿಡ್ ಬಂದ ಬಳಿಕ ಸ್ಮಶಾನ ಕಾರ್ಮಿಕರು ಮುಂಚೂಣಿ ಕಾರ್ಮಿಕರಾಗಿ ದಿನವಿಡೀ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಜೀವನ ಪರಿಸ್ಥಿತಿ ಮಾತ್ರ ದುಸ್ಥರವಾಗಿದೆ. ಹಾಗಾಗಿ, ಸರ್ಕಾರ ಅವರ ನೆರವಿಗೆ ಬರುವಂತೆ ಚೇತನ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.