ETV Bharat / sitara

ವನ್ಯಜೀವಿಗಳ ರಕ್ಷಣೆಗೆ ಎಲ್ಲರೂ ಕೈ ಜೋಡಿಸಿ ಎಂದ ಚಾಲೆಂಜಿಂಗ್ ಸ್ಟಾರ್

author img

By

Published : Mar 3, 2021, 3:07 PM IST

ಇಂದು ವಿಶ್ವ ವನ್ಯಜೀವಿ ದಿನಾಚರಣೆ. ಈ ಹಿನ್ನೆಲೆ ನಟ ದರ್ಶನ್​​, ವನ್ಯ ಜೀವಿಗಳ ರಕ್ಷಣೆಗೆ ಎಲ್ಲರೂ ಕೈ ಜೋಡಿಸಿ, ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ, ಇದು ನಿಮ್ಮ ಕಾಳಜಿಯನ್ನು ತೋರಿಸಿ ಎಂದು ಟ್ವೀಟ್​ ಮಾಡಿದ್ದಾರೆ.

Actor Challenging Star Darshan
ಚಾಲೆಂಜಿಂಗ್ ಸ್ಟಾರ್

ಜಗತ್ತಿನ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ 3ರಂದು ವಿಶ್ವ ವನ್ಯ ಜೀವಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. 2013ರಲ್ಲಿ ವಿಶ್ವಸಂಸ್ಥೆ ಸಮಾವೇಶದಲ್ಲಿ ಮಾರ್ಚ್‌ 3ರನ್ನು ವಿಶ್ವ ವನ್ಯಜೀವಿಗಳ ದಿನವೆಂದು ಘೋಷಿಸಲಾಯಿತು.

  • ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ.
    ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ, ನಿಮಗೆ ಕಾಳಜಿಯನ್ನು ತೋರಿಸುತ್ತದೆ, ಅಪರಿಚಿತರಾಗಬೇಡಿ!
    ಪ್ರಾಣಿಗಳನ್ನು ಉಳಿಸಿ ಏಕೆಂದರೆ ಅವು ಈ ಪ್ರಪಂಚದ ಒಂದು ಭಾಗವಾಗಿದೆ!
    ವನ್ಯಜೀವಿಗಳಿಗಾಗಿ ನಿಲ್ಲುವ ಸಮಯ.
    ನಿಮ್ಮ ದಾಸ ದರ್ಶನ್@aranya_kfd #WorldWildlifeDay2021 pic.twitter.com/TK0cqRvIuR

    — Darshan Thoogudeepa (@dasadarshan) March 3, 2021 " class="align-text-top noRightClick twitterSection" data=" ">

ಸಿಂಹ, ಆನೆ, ಹುಲಿ, ಚಿರತೆ ಸೇರಿದಂತೆ ಹಲವು ಪ್ರಾಣಿಗಳ ಚರ್ಮ, ಉಗುರು, ಕೊಂಬು, ದಂತಗಳ ಮಾರಾಟ ಅಕ್ರಮವಾಗಿ ನಡೆಯುತ್ತಿದೆ. ಇದರಿಂದ ಹಲವು ವನ್ಯಜೀವಿಗಳ ಸಂತತಿ ಅಳಿವಿನಂಚಿನಲ್ಲಿದೆ. ಈ ಹಿನ್ನೆಲೆ ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ವಿಶ್ವ ವನ್ಯಜೀವಿ ದಿನವನ್ನು ಪ್ರತಿವರ್ಷ ಮಾರ್ಚ್‌ 3ರಂದು ಆಚರಿಸಲಾಗುತ್ತದೆ. ನಟ ದರ್ಶನ್ ಕೂಡ ವನ್ಯಜೀವಿ ರಕ್ಷಣೆಗೆ ನಿಂತಿದ್ದಾರೆ.

ಓದಿ:ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಬಂದ ಹುಡುಗಿ ಈಗ ಕಿರುತೆರೆಯಲ್ಲಿ ಬ್ಯುಸಿ

ದರ್ಶನ್ ಓರ್ವ ಸೆಲೆಬ್ರಿಟಿ ಆಗಿದ್ದರೂ, ಪ್ರಾಣಿ, ಪಕ್ಷಿಗಳು ಅಂದರೆ ಅವರಿಗೆ ಪಂಚಪ್ರಾಣ. ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ. ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ, ಇದು ನಿಮ್ಮ ಕಾಳಜಿಯನ್ನು ತೋರಿಸುತ್ತದೆ, ಅಪರಿಚಿತರಾಗಬೇಡಿ. ಪ್ರಾಣಿಗಳನ್ನು ಉಳಿಸಿ ಏಕೆಂದರೆ ಅವು ಈ ಪ್ರಪಂಚದ ಒಂದು ಭಾಗವಾಗಿವೆ ಎಂದು ಚಾಲೆಂಜಿಂಗ್​ ಸ್ಟಾರ್​​ ದರ್ಶನ್ ಟ್ವಿಟರ್​​ನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.