ETV Bharat / sitara

ಪೊಗರು ಹುಡುಗ ಧ್ರುವ ಸರ್ಜಾ ಭರ್ಜರಿ ವರ್ಕೌಟ್​​​​​​​​​​​​​​​​​​​ ಹೇಗಿದೆ ನೋಡಿ - Dhruva sarja body build workout

ಧ್ರುವ ಸರ್ಜಾ ಸದ್ಯಕ್ಕೆ ಮನೆಯಲ್ಲಿ ಇದ್ದರೂ ವರ್ಕೌಟ್ ಮಾಡುವುದನ್ನು ಮಾತ್ರ ಮಿಸ್ ಮಾಡುವುದಿಲ್ಲವಂತೆ. ಪ್ರತಿದಿನ ಬೆಳಗ್ಗೆ ಸಂಜೆ ಸಖತ್ ವರ್ಕೌಟ್ ಮಾಡುವ ಧ್ರುವ ಅದರೊಂದಿಗೆ ಪೌಷ್ಠಿಕ ಆಹಾರ ಕೂಡಾ ಸೇವಿಸುತ್ತಾರಂತೆ. ದಿನಕ್ಕೆ 5 ಗಂಟೆಗಳ ಕಾಲ ಜಿಮ್​​​ನಲ್ಲಿ ವರ್ಕೌಟ್ ಮಾಡುತ್ತಾರಂತೆ ಆ್ಯಕ್ಷನ್ ಪ್ರಿನ್ಸ್.

Dhruva sarja workout
ಧ್ರುವ ಸರ್ಜಾ
author img

By

Published : Oct 7, 2020, 3:39 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿನ್ನೆಯಷ್ಟೇ ತಮ್ಮ ಕುಟುಂಬದವರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಭಾನುವಾರ ಮುಂದೆ ನಿಂತು ತಮ್ಮ ಅತ್ತಿಗೆ ಮೇಘನಾ ರಾಜ್​ ಸೀಮಂತ ಶಾಸ್ತ್ರ ಮಾಡಿದ್ದಾರೆ. ಇವೆಲ್ಲದರ ನಡುವೆಯೂ ಧ್ರುವ ಸರ್ಜಾ ಫಿಟ್ನೆಸ್​​​​​​ ಕಡೆ ಗಮನ ನೀಡುವುದನ್ನು ಮಾತ್ರ ಮರೆತಿಲ್ಲ.

ಧ್ರುವ ಸರ್ಜಾ ವರ್ಕೌಟ್

ಧ್ರುವ ಸರ್ಜಾ ನಟಿಸಿರುವುದು 3 ಚಿತ್ರಗಳಲ್ಲಾದರೂ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಇದೀಗ ಧ್ರುವ ಅಭಿನಯದ 4ನೇ ಸಿನಿಮಾ 'ಪೊಗರು' ಬಿಡುಗಡೆಯಾಗಬೇಕಿದೆ. ಮೊದಲ ಚಿತ್ರ 'ಅದ್ದೂರಿ'ಯಲ್ಲಿ ಕೂಡಾ ಧ್ರುವ ಬಾಡಿ ಬಿಲ್ಡ್ ಮಾಡಿ ಗಮನ ಸೆಳೆದಿದ್ದರು. ಈ ಸಿನಿಮಾ ಬಳಿಕ 'ಬಹದ್ದೂರ್' ಹಾಗೂ 'ಭರ್ಜರಿ' ಸಿನಿಮಾಗಳಲ್ಲೂ ಬಾಡಿ ಮೇಂಟೇನ್ ಮಾಡಿದ್ದರು. ಸದ್ಯ ಬಿಡುಗಡೆಗೆ ರೆಡಿಯಾಗುತ್ತಿರುವ 'ಪೊಗರು' ಚಿತ್ರಕ್ಕಾಗಿ ಧ್ರುವ ಸರ್ಜಾ 30 ಕೆಜಿ ತೂಕ ಇಳಿಸಿ ಮತ್ತೆ ಬಾಡಿ ಬಿಲ್ಡ್ ಮಾಡಿದ್ದಾರೆ. ಪಟ ಪಟ ಅಂತಾ ಡೈಲಾಗ್ ಹೊಡೆಯುವುದರಲ್ಲದೆ ಅಷ್ಟೇ ರಿಸ್ಕ್​​ನಿಂದ ಭರ್ಜರಿ ಫೈಟ್​​​​​ಗಳನ್ನು ಈ ಚಿತ್ರದಲ್ಲಿ ಮಾಡಿದ್ದಾರೆ.

Dhruva sarja workout
ಧ್ರುವ ಸರ್ಜಾ

ಹೀಗೆ ಪಾತ್ರಕ್ಕೆ ತಕ್ಕಂತೆ ಮೇಕ್ ಓವರ್ ಆಗುವ ಧ್ರುವ ಸರ್ಜಾ ಫಿಟ್ನೆಸ್ ಸೀಕ್ರೇಟ್ ಕೇಳಿದ್ರೆ ಆಶ್ಚರ್ಯ ಆಗೋದು ಗ್ಯಾರಂಟಿ. ಪ್ರತಿ ದಿನ ಬೆಳಗ್ಗೆ ಎರಡೂವರೆ ಗಂಟೆ ಹಾಗೂ ಸಂಜೆ ಕೂಡಾ ಅಷ್ಟೇ ಸಮಯ ಜಿಮ್​​ನಲ್ಲಿ ವಿವಿಧ ಬಗೆಯ ವರ್ಕೌಟ್ ಮಾಡುತ್ತಾರಂತೆ. ಧ್ರುವ ಸರ್ಜಾ ಮಜಲ್ಸ್​​ ನೋಡಿದ್ರೆ ಅವರ ವರ್ಕೌಟ್ ಹೇಗಿದೆ ಅನ್ನೋದು ಗೊತ್ತಾಗುತ್ತೆ. ವರ್ಕೌಟ್ ಮುಗಿದ ಬಳಿಕ ಹಣ್ಣಿನ ಜ್ಯೂಸ್, ಬಳಿಕ ಮೊಟ್ಟೆ ಜೊತೆಗೆ ಹಲವು ಬಗೆಯ ತರಕಾರಿ ಸಲಾಡ್ ಚಪಾತಿ ತಿನ್ನುತ್ತಾರೆ. ಮಧ್ಯಾಹ್ನ ಸಿನಿಮಾ ಶೂಟಿಂಗ್ ಇದ್ರು, ಇಲ್ಲದಿದ್ರೂ ಚಿಕನ್ ಊಟ ಮಾಡ್ತಾರಂತೆ. ಸಂಜೆ ಊಟಕ್ಕೆ ಚಪಾತಿ ಅಥವಾ ಮುದ್ದೆ ಜೊತೆಗೆ ಮೊಟ್ಟೆಯನ್ನು ಸೇವಿಸುತ್ತಾರೆ.

ಧ್ರುವ ಸರ್ಜಾ ವರ್ಕೌಟ್

ಆದರೆ ಧ್ರುವ ಸರ್ಜಾ ಒಂದು ವಿಚಾರದಲ್ಲಿ ವಿರುದ್ಧವಾಗಿದ್ದಾರೆ‌. ಸಹಜವಾಗಿ ಬಾಡಿ ಬಿಲ್ಡ್​​​​​ ಮಾಡುವವರು ಹೆಚ್ಚಾಗಿ ರೈಸ್ ಪದಾರ್ಥಗಳನ್ನು ತಿನ್ನುವುದಿಲ್ಲ. ಆದರೆ ಧ್ರುವ ಸರ್ಜಾ ಅನ್ನ ಸೇವಿಸುತ್ತಾರಂತೆ. ಅನ್ನವನ್ನು ತಿಂದು ಅದರ ಜೊತೆಗೆ ದೇಹವನ್ನು ದಂಡಿಸಬೇಕು ಅನ್ನೋದು ಈ ಆ್ಯಕ್ಷನ್ ಪ್ರಿನ್ಸ್ ಸಿದ್ಧಾಂತವಂತೆ. ಇದು ಇವರ ಫಿಟ್ನೆಸ್ ಸೀಕ್ರೇಟ್​. ಇನ್ನು 'ಪೊಗರು' ಚಿತ್ರದ ಹಾಡು ಸಖತ್ ಹಿಟ್ ಆಗಿದ್ದು ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ದೊರೆಯಲಿದೆ ಕಾದು ನೋಡಬೇಕು.

Dhruva sarja workout
'ಪೊಗರು' ಚಿತ್ರದಲ್ಲಿ ಧ್ರುವ ಸರ್ಜಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.