ETV Bharat / sitara

'ಅಧ್ಯಕ್ಷ ಇನ್ ಅಮೆರಿಕ' ಚಿತ್ರವನ್ನು ಹೊಗಳಿದ ಆ್ಯಕ್ಷನ್ ಪ್ರಿನ್ಸ್​​​​​​​​​​​​​​​​ - ಶರಣ್ ಹೊಗಳಿದ ಧ್ರುವಾ ಸರ್ಜಾ

ಯೋಗಾನಂದ್ ಮುದ್ದಾನ್ ನಿರ್ದೇಶನದ 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಶರಣ್, ರಾಗಿಣಿ ಅಭಿನಯದ ಸಿನಿಮಾವನ್ನು ಆ್ಯಕ್ಷನ್​ ಪ್ರಿನ್ಸ್ ಧ್ರುವಾ ಸರ್ಜಾ ಕೂಡಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆ್ಯಕ್ಷನ್ ಪ್ರಿನ್ಸ್
author img

By

Published : Oct 5, 2019, 6:23 PM IST

ರ್‍ಯಾಂಬೋ ಶರಣ್ ಹಾಗೂ ತುಪ್ಪದ ಹುಡುಗಿ ರಾಗಿಣಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾ ನಿನ್ನೆ ರಾಜ್ಯಾದ್ಯಂತ ಸುಮಾರು 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಟೈಟಲ್, ಪೋಸ್ಟರ್, ಹಾಡುಗಳಿಂದಲೇ ಸಖತ್ ಸದ್ದು ಮಾಡಿದ್ದ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ.

'ಅಧ್ಯಕ್ಷ ಇನ್ ಅಮೆರಿಕ' ಚಿತ್ರ ನೋಡಿದ ಧ್ರುವಾ ಸರ್ಜಾ

'ಫಸ್ಟ್ ಡೇ ಫಸ್ಟ್ ಶೋ' ನೋಡಿದ ಶರಣ್​, ರಾಗಿಣಿ ಅಭಿಮಾನಿಗಳಂತೂ ಇಬ್ಬರ ಕಾಂಬಿನೇಶನ್​​ಗೆ ಪುಲ್ ಫಿದಾ ಆಗಿದ್ದಾರೆ. ಶರಣ್, ರಾಗಿಣಿ, ಹಾಸ್ಯನಟ ತಬಲಾ ನಾಣಿ, ನಿರ್ದೇಶಕ ಯೋಗಾನಂದ್ ಮುದ್ದಾನ್​​, ಆ್ಯಕ್ಷನ್​ ಪ್ರಿನ್ಸ್ ಧ್ರುವಾಸರ್ಜಾ ಅನುಪಮಾ ಚಿತ್ರಮಂದಿರದಲ್ಲಿ ಒಟ್ಟಿಗೆ ಕುಳಿತು ಸಿನಿಮಾ ನೋಡಿದ್ದಾರೆ.

ಹಿಂದಿನ ಚಿತ್ರಗಳ ಸೋಲಿನಿಂದ ಕಂಗೆಟ್ಟಿದ್ದ ರಾಗಿಣಿಗೆ ಈ ಚಿತ್ರ ಬ್ರೇಕ್ ನೀಡಿದೆ ಎನ್ನಬಹುದು. ಅಲ್ಲದೆ ಶರಣ್ ರ್‍ಯಾಂಬೋ 2 ,ವಿಕ್ಟರಿ 2 ನಂತರ ಈ ಚಿತ್ರ ಕೂಡಾ ಮೋಡಿ ಮಾಡಿದ್ದು ಹ್ಯಾಟ್ರಿಕ್ ಬಾರಿಸುವುದು ಪಕ್ಕಾ ಅಂತಿದ್ದಾರೆ ಗಾಂಧಿನಗರ ಪಂಡಿತರು.

ಮಾಧ್ಯಮಗಳೊಂದಿಗೆ ಮಾತನಾಡಿದ ಧ್ರುವಾಸರ್ಜಾ, ಚಿತ್ರದಲ್ಲಿ ಎಲ್ಲೂ ವಲ್ಗಾರಿಟಿ ಅನ್ನೋದು ಇಲ್ಲ. ಮೊದಲಾರ್ಧವಂತೂ ಹೇಗೆ ಕಳೆಯುತ್ತೆ ಎಂಬುದು ತಿಳಿಯಲಿಲ್ಲ. ರಾಗಿಣಿ ಹಾಗೂ ಶರಣ್ ಚೆನ್ನಾಗಿ ಅಭಿನಯಿಸಿದ್ದಾರೆ. ಇದು ಫ್ಯಾಮಿಲಿಯೊಂದಿಗೆ ಕುಳಿತು ನೋಡಬಹುದಾದಂತ ಸಿನಿಮಾ. ಎಲ್ಲರೂ ಥಿಯೇಟರ್​​ಗೆ ಬಂದು ಸಿನಿಮಾ ನೋಡಿ ಎಂದು ಧ್ರುವಾ ಮನವಿ ಮಾಡಿದರು.

Intro:ಅಧ್ಯಕ್ಷ ಇನ್ ಚಿತ್ರತಂಡದ ಜೊತೆ ಸಿನಿಮಾ ನೋಡಿದ ಆಕ್ಷನ್ ಪ್ರಿನ್ಸ್

Body:ಅಧ್ಯಕ್ಷನ ಹೊಸ ಅವತಾರಕ್ಕೆ ಫಿದಾ ಆದ ಪೊಗರು ಹುಡುಗ

ಸತೀಶ ಎಂಬಿ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.