ಸೆಲಬ್ರಿಟಿಗಳು ತಮ್ಮ ಬ್ಯುಸಿ ಕೆಲಸದ ನಡುವೆಯೂ ಕುಟುಂಬದೊಂದಿಗೆ ಕಾಲ ಕಳೆಯುವುದು ಬಹಳ ಅಪರೂಪ. ಅದರಲ್ಲೂ ಹಬ್ಬ ಹರಿದಿನ, ಕುಟುಂಬಸ್ಥರ ಹುಟ್ಟುಹಬ್ಬದ ವೇಳೆ ಅವರೊಂದಿಗೆ ಇದ್ದು ಬರ್ತಡೇ ಆಚರಿಸುವುದು ಎಂದರೆ ಅದು ನಿಜಕ್ಕೂ ವಿಶೇಷ.

ದಕ್ಷಿಣ ಭಾರತದ ಸ್ಟಾರ್, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಯಾವಾಗಲೂ ಬ್ಯುಸಿ ಇರುವ ನಟ. ಸದ್ಯಕ್ಕೆ ಅರ್ಜುನ್ ರಾಧಿಕಾ ಜೊತೆ 'ಕಾಂಟ್ರಾಕ್ಟ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಕೆಲಸಗಳ ನಡುವೆಯೂ ಅರ್ಜುನ್ ನಿನ್ನೆ ತಮ್ಮ ತಾಯಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಷ್ಟೇ ಅಲ್ಲ ತಾಯಿಗೆ ಉಂಗುರವನ್ನು ಕೂಡಾ ಗಿಫ್ಟ್ ಮಾಡಿದ್ದಾರೆ. ಅರ್ಜುನ್ ತಾಯಿ ಲಕ್ಷ್ಮಿದೇವಿ ಧ್ರುವಸರ್ಜಾ ಕುಟುಂಬದೊಂದಿಗೆ ನೆಲೆಸಿದ್ದು, ಅಲ್ಲಿಗೆ ತೆರಳಿದ್ದ ಅರ್ಜುನ್ ತಾಯಿಗೆ ಹುಟ್ಟುಹಬ್ಬದ ವಿಶ್ ಮಾಡಿ ಉಂಗುರವನ್ನು ಅಮ್ಮನ ಕೈ ಬೆರಳಿಗೆ ತೊಡಿಸಿದ್ದಾರೆ.


ಇನ್ನು ವಿಶೇಷ ಎಂದರೆ ನಿನ್ನೆ ಅರ್ಜುನ್ ಪತ್ನಿ ಆಶಾರಾಣಿ ಬರ್ತಡೇ ಕೂಡಾ. ಪತ್ನಿ ಆಶಾರಾಣಿ, ಮಕ್ಕಳಾದ ಐಶ್ವರ್ಯ ಅರ್ಜುನ್ ಹಾಗೂ ಅಂಜನಾ ಅರ್ಜುನ್ ಅವರನ್ನು ರೆಸ್ಟೋರೆಂಟ್ಗೆ ಕರೆದೊಯ್ದು ಅವರೊಂದಿಗೆ ಊಟ ಮಾಡಿ ಬರ್ತಡೇ ಆಚರಿಸಿದ್ದಾರೆ.