ಸ್ಯಾಂಡಲ್ವುಡ್ನಲ್ಲಿ ಪ್ರಾಣಿ ಹಾಗೂ ಪಕ್ಷಿಗಳ ಬಗ್ಗೆ ಕ್ರೇಜ್ ಹೊಂದಿರುವ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೆಲವು ದಿನಗಳ ಹಿಂದೆ ಮೈಸೂರಿನ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳ ಆಶ್ರಮಕ್ಕೆ ಭೇಟಿ ಕೊಟ್ಟಿದ್ದರು. ಈಗ ಮತ್ತೆ ಸ್ವಾಮಿಗಳನ್ನ ಭೇಟಿಯಾಗಿ ಸುದ್ದಿಯಾಗಿದ್ದಾರೆ.
ಗಣಪತಿ ಸಚ್ಚಿದಾನಂದ ಸ್ವಾಮಿಗಳಿಗೆ ಈಗ 79ನೇ ಹುಟ್ಟುಹಬ್ಬ. ಈ ಹಿನ್ನೆಲೆ ಸಂಭ್ರಮದಲ್ಲಿರುವ ಸ್ವಾಮಿಗಳಿಗೆ ದರ್ಶನ್ ವಿಡಿಯೋ ಮೂಲಕ ಶುಭ ಕೋರಿದ್ದಾರೆ.
![acter-darshan-wished-to-sachidananda-swamiji-through-video](https://etvbharatimages.akamaized.net/etvbharat/prod-images/kn-bng-02-ganapathi-sachidanad-swamyge-wish-madida-darshan-7204735_27052021173342_2705f_1622117022_357.jpg)
ಎಲ್ಲರಿಗೂ ನಮಸ್ಕಾರ. ಇವತ್ತು ನಮ್ಮ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳದ್ದು 79ನೇ ಹುಟ್ಟುಹಬ್ಬ. ಅವರಿಗೆ ಭಗವಂತ ಆಯುಷಾರೋಗ್ಯ ಕೊಡಲಿ, ಹೆಚ್ಚು ಜನರ ಸೇವೆ ಮಾಡುವಂತಹ ಅವಕಾಶ ಮಾಡಿಕೊಡಲಿ. ಅವರೇ ಒಂದು ದೇವರು ಇದ್ದ ಹಾಗೆ. ಯಾಕಂದ್ರೆ ನನಗೆ ಪ್ರಾಣಿ - ಪಕ್ಷಿಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಗೊತ್ತಿದೆ. ಆದರೆ ಅವರ ಆಶ್ರಮಕ್ಕೆ ಹೋದಮೇಲೆ ಗಿಳಿಗಳಲ್ಲೂ ಅಷ್ಟೊಂದು ಜಾತಿ, ವೆರೈಟಿಗಳು ಇವೆ ಅಂತ ಗೊತ್ತಾಯಿತು. ಅವರು ಪಕ್ಷಿಗಳಲ್ಲೇ ದೇವರನ್ನ ಕಂಡಿದ್ದಾರೆ ಎಂದು ತಿಳಿಸಿ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
![acter-darshan-wished-to-sachidananda-swamiji-through-video](https://etvbharatimages.akamaized.net/etvbharat/prod-images/kn-bng-02-ganapathi-sachidanad-swamyge-wish-madida-darshan-7204735_27052021173342_2705f_1622117022_775.jpg)
ಕೆಲವು ದಿನಗಳ ಹಿಂದೆ ನಟ ದರ್ಶನ್ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶ್ರಮಕ್ಕೆ ಭೇಟಿ ಕೊಟ್ಟಿದ್ದರು. ಮೊದಲೇ ಪ್ರಾಣಿ, ಪಕ್ಷಿ ಪ್ರಿಯನಾಗಿರೋ ದರ್ಶನ್ ಗೆ ಹಲವಾರು ಬಗೆಯ ಗಿಣಿಗಳ ಬಗೆಗೆ ಸ್ವಾಮೀಜಿ ತಿಳಿಸಿದ್ದರು. ಈ ಪ್ರೀತಿಗೆ ಅವರು ಸ್ವಾಮೀಜಿಗೆ ವಿಶ್ ಮಾಡಿದ್ದಾರೆ.
ಓದಿ: Puneeth Rajkumar: ಲಾಕ್ಡೌನ್ನಲ್ಲಿ ಹೊಸ ವಿದ್ಯೆ ಕಲಿತ ಅಪ್ಪು.. ಫಿದಾ ಆಗೋಯ್ತು ಕುಟುಂಬ