ಕಳೆದ 86 ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ 4000 ಕ್ಕೂ ಹೆಚ್ಚು ಚಿತ್ರಗಳು ತಯಾರಾಗಿವೆ. ನಟನೆ ಸಿನಿಮಾದ ಒಂದು ಭಾಗವಾದರೆ, ನಿರ್ದೇಶಕ ಕನಸಿನ ಕೈಗನ್ನಡಿಯಾಗಿ ಛಾಯಾಗ್ರಾಹಕ ಅದ್ಭುತ ಸೃಷ್ಟಿ ಮಾಡುತ್ತಾನೆ. ಸ್ಯಾಂಡಲ್ವುಡ್ನಲ್ಲಿ ತಮ್ಮದೆಯಾದ ಛಾಪು ಮೂಡಿಸಿ ಎಲೆಮರೆ ಕಾಯಿಯಂತಿರುವ ಛಾಯಾಗ್ರಾಹಕ ಪೈಕಿ ಆರ್. ಚಿಟ್ಟಿ ಬಾಬು ಸಹ ಒಬ್ಬರು.
![r-chitti-babu](https://etvbharatimages.akamaized.net/etvbharat/prod-images/chitti-babu-with-camera1590377664889-71_2505email_1590377676_722.jpg)
ಕನ್ನಡದಲ್ಲಿ 72 ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿ ಇನ್ನಿತರ ಭಾಷೆಗಳಲ್ಲಿ 22 ಸಿನಿಮಾಗಳಿಗೆ ಕ್ಯಾಮರಾ ಕೈಚಳಕ ತೋರಿಸಿದ ಆರ್. ಚಿಟ್ಟಿ ಬಾಬು ಅವರನ್ನು ‘ಕ್ಲಾಶ್ ಕ್ಯಾಮರಮ್ಯಾನ್’ ಎಂದೇ ಹೆಚ್ಚಾಗಿ ನೆನಸಿಕೊಳ್ಳುತ್ತ ಇದ್ದದ್ದು ಉಂಟು.
![r-chitti-babu](https://etvbharatimages.akamaized.net/etvbharat/prod-images/chitti-babu-with-ashok-kumar-hindi-actor1590377664889-53_2505email_1590377676_612.jpg)
1951ರಲ್ಲಿ ಶ್ರೀನಿವಾಸ್ ರಾಘವನ್ ಅವರಿಂದ ಪರಿಚಯ ಆದ ಚಿಟ್ಟಿ ಬಾಬು ರೇವತಿ ಸ್ಟುಡಿಯೋದಲ್ಲಿ ಕೆಲಸ ಆರಂಭಿಸಿ ಅಂದಿನ ಮಿಚೆಲ್ ಕ್ಯಾಮರಾ ಸಹವಾಸ ಬೆಳಸಿಕೊಂಡರು. ಚಿತ್ರೀಕರಣಕ್ಕೆ ಬೇಕಾದ ಲೈಟಿಂಗ್ನ್ನು ಇವರು ಕಣ್ಣಿನ ಅಳತೆಯಲ್ಲಿ ನಿಗದಿ ಪಡಿಸುತ್ತಾ ಇದ್ದ ಪಂಟರ್. ಆಗ ಇನ್ನ ಮೀಟರ್ ಇಂದ ಅಳೆದು ಶಾಟ್ ವಿಂಗಡಿಸುವುದು ಬಂದಿರಲಿಲ್ಲ.
![r-chitti-babu](https://etvbharatimages.akamaized.net/etvbharat/prod-images/chitti-babu-with-parvathamma-and-others1590377664890-59_2505email_1590377676_310.jpg)
ಕೈಗೆ ತಟ್ಟುವ ಲೈಟಿನ ಶಾಖದ ಆದಾರದ ಮೇಲೂ ಸಹ ಚಿಟ್ಟಿ ಬಾಬು ಬೆಳಕಿನ ಮೀಟರ್ ಅಳೆಯುತ್ತಿದ್ದರಂತೆ. ಆಮೇಲೆ ಪ್ಯಾರಾಮೌಂಟ್ ಸ್ಟುಡಿಯೋ ಅಲ್ಲಿ ದೊಡ್ಡ ಸಿನಿಮಾಗಳಲ್ಲಿ ಕೆಲಸ ಕಲಿತು ಭಾರತಿ ವಿಷ್ಣುವರ್ಧನ ಅವರ ಮೊದಲ ಸಿನಿಮಾ ‘ಲವ್ ಇನ್ ಬೆಂಗಳೂರು’ ಚಿತ್ರಕ್ಕೆ ಸ್ವತಂತ್ರ ಛಾಯಾಗ್ರಾಹಕರಾಗುತ್ತಾರೆ.
![r-chitti-babu](https://etvbharatimages.akamaized.net/etvbharat/prod-images/chitti-babu-with-dr-rajakumar-holding-his-camera1590377664897-49_2505email_1590377676_829.jpg)
ಕಲ್ಲು ಸಕ್ಕರೆ, ಚಕ್ರ ತೀರ್ಥ, ನಮ್ಮ ಊರು, ಪುನರ್ಜನ್ಮ, ಮನಶಾಂತಿ, ಪರೋಪಕಾರಿ, ನಾಡಿನ ಭಾಗ್ಯ, ಬಾಳು ಬೆಳಗಿತು, ತಾಯಿ ದೇವರು, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ, ಪ್ರತಿದ್ವನಿ, ಕಸ್ತೂರಿ ನಿವಾಸ, ಸಿಪಾಯಿ ರಾಮು, ನಂದ ಗೋಕುಲ, ನಾಗರಹಾವು, ಶ್ರೀ ಶ್ರೀನಿವಾಸ ಕಲ್ಯಾಣ, ಸಂಪತ್ತಿಗೆ ಸವಾಲ್, ಎರಡು ಕನಸು, ಹೆಣ್ಣು ಸಂಸಾರದ ಕಣ್ಣು, ಕಳ್ಳ ಕುಳ್ಳ, ದೇವರ ಕಣ್ಣು, ದೇವರ ಗುಡಿ, ರಾಜ ನಿನ್ನ ರಾಜ, ನಾ ನಿನ್ನ ಮರೆಯಲಾರೆ, ಬಯಲು ದಾರಿ, ಸನಾದಿ ಅಪ್ಪಣ್ಣ, ಗಿರಿ ಕನ್ಯೆ, ನಾನೊಬ್ಬ ಕಳ್ಳ, ಹುಲಿ ಹಾಲಿನ ಮೇವು, ಚಂದನದ ಗೊಂಬೆ, ಬಿಳಿಗಿರಿಯ ಬನದಲ್ಲಿ, ಪರಾಜಿತ, ಚಕ್ರವ್ಯೂಹ, ಇಬ್ಬನಿ ಕರಗಿತು, ಬೆಂಕಿಯ ಬಲೆ, ಶಿವ ಮೆಚ್ಚಿದ ಕಣ್ಣಪ್ಪ 1988 ರ ವರೆಗೂ ಆರ್. ಚಿಟ್ಟಿ ಬಾಬು ಬಹಳ ಲವಲವಿಕೆ ಇಂದ ಛಾಯಾಗ್ರಹಣ ಮಾಡಿದ ಖ್ಯಾತಿ ಹೊಂದಿದ್ದಾರೆ.
![r-chitti-babu](https://etvbharatimages.akamaized.net/etvbharat/prod-images/chitti-babu-work-spot1590377664897-9_2505email_1590377676_819.jpg)
1999 ಜನವರಿ 28 ಆರ್ ಚಿಟ್ಟಿಬಾಬು ಕಾಲವಾದಾಗ ಅವರಿಗೆ 72 ವಯಸ್ಸು. ತಮಿಳುನಾಡಿನ ಚಿದಂಬರಂ ಅಲ್ಲಿ ಜನಿಸಿದ ಆರ್. ಚಿಟ್ಟಿಬಾಬು ಅವರ ಪತ್ನಿ ಲಲಿತ, ಸಂಘಮಿತ್ರ, ಮಹೇಂದ್ರನ್ (ಇವರು ಸಹ ಛಾಯಾಗ್ರಾಹಕರು) ಪುಷ್ಪ, ಗಜೇಂದ್ರನ್, ರಾಜೇಂದ್ರನ್, ಜ್ಯೋತಿ, ಸಾಯಿ ಬಾಬು ರಾಖಿ ವಿನೋದ್ ಕೃಷ್ಣ ಇವರ ಮಕ್ಕಳು.
![r-chitti-babu](https://etvbharatimages.akamaized.net/etvbharat/prod-images/chitti-babu-with-dr-rajakumar-and-bismilla-khan1590377664898-52_2505email_1590377676_561.jpg)
ಕನ್ನಡದ ಹಿರಿಯ ಸಜ್ಜನ ನಟ ಶ್ರೀನಿವಾಸಮೂರ್ತಿ ಚಿಟ್ಟಿಬಾಬು ಅವರ ಕುರಿತು ಕೆಲವೊಂದಿಷ್ಟು ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಆಸ್ತಿಯಾಗಿದ್ದ ಚಿಟ್ಟಿಯನ್ನು ಲಡ್ಡು ಎಂದು ಕರೆಯುತ್ತಿದ್ದರಂತೆ. ಕೆಲಸ ವಿಚಾರದಲ್ಲಿ ಚಿಟ್ಟಿ ಅದ್ಭುತ ಕಲಾಕಾರ, ಅಲ್ಲದೆ ಕ್ಲೋಸ್ ಅಪ್ ಶಾಟ್ಸ್ ತೆಗೆಯುವುದರಲ್ಲಿ ಚಿಟ್ಟಿಯಂತೆ ಇನ್ನೊಬ್ಬರಿಲ್ಲ. ಲೈಟಿಂಗ್ ವಿಷಯಕ್ಕೆ ಬಂದ್ರೆ ವಿಷ್ಣುವರ್ದನ್ ಅಂತಹ ನಟರಿಗೆ ಬಹಳ ಕಷ್ಟವಾಗುತ್ತಿತ್ತು.
‘ಬಿಳಿಗಿಯ ಬನದಲ್ಲಿ’ ಚಿತ್ರದ ಚಿತ್ರಿಕರಣ ಸಮಯದಲ್ಲಿ, ಚಿಟ್ಟಿ ಬಾಬು ಅವರು ಸಾಹಸ ನಟ ಶಿವಯ್ಯ ಜೊತೆ ಕೋಪ ಮಾಡಿಕೊಂಡಿದ್ದು, ಆಮೇಲೆ ಎಂ.ಪಿ. ಶಂಕರ್ ಅವರಿಗೆ ಬೈದದ್ದು, ಅವರು ಬೇಜಾರು ಮಾಡಿಕೊಂಡಿದ್ದು, ಮಾರನೇ ದಿನ ಎಂ ಪಿ ಶಂಕರ್ ಹಣ್ಣುಗಳನ್ನು ‘ಬಿಳಿಗಿರಿಯ ಬನದಲ್ಲಿ’ ಸೆಟ್ಟಿಗೆ ತಂದು ಛಾಯಾಗ್ರಾಹಕ ಚಿಟ್ಟಿ ಬಾಬು ಅವರಿಗೆ ಮಸ್ಕಾ ಹೊಡೆದದ್ದು ನೆನೆದುಕೊಂಡು ಆಗಿನ ಕಾಲದ ರೀತಿ ಈಗ ಇಲ್ಲವೇ ಇಲ್ಲ ಎನ್ನುತ್ತಾರೆ ಶ್ರೀನಿವಾಸಮೂರ್ತಿಯವರು.
ಚಿಟ್ಟಿ ಬಾಬು ಅವರಿಗೆ ಶ್ರೀನಿವಾಸಮೂರ್ತಿ ಅವರ ಮಡದಿ ಪುಷ್ಪ ಅವರನ್ನ ಕಂಡರೆ ಇನ್ನಿಲ್ಲದ ವಿಶ್ವಾಸ. ಅದಕ್ಕೆ ಕಾರಣ ಶ್ರೀನಿವಾಸಮೂರ್ತಿ ಅವರ ಪತ್ನಿ ಹಾಗೂ ಚಿಟ್ಟಿ ಬಾಬು ಅವರ ಮಗಳು ನೋಡಲಿಕ್ಕೆ ಒಂದೇ ರೀತಿ ಕಾಣುತ್ತಾ ಇದ್ದದ್ದು.
ಕನ್ನಡದ ಚಿತ್ರ ರಂಗದ ಹಿರಿಯ ಛಾಯಾಗ್ರಾಹಕ ಬಿ.ಎಸ್ ಬಸವರಾಜ್ ಸಹ ಆರ್. ಚಿಟ್ಟಿ ಬಾಬು ಅವರನ್ನು ನೆನದು, ಛಾಯಾಗ್ರಾಹಕ ಆಗುವುದಕ್ಕೂ ಮುಂಚೆ ಪ್ರಿಂಟರ್ ಆಗಿ ಕೆಲಸ ಮಾಡಿದ ದಿವಸಗಳನ್ನು ನೆನೆದು ಅವರ ಶೈಲಿಯ ಛಾಯಾಗ್ರಹಣ ಅನೇಕರಿಗೆ ಇಂದಿಗೂ ಸ್ಪೂರ್ತಿ ಎಂದು ಅಭಿಪ್ರಾಯ ಪಡುತ್ತಾರೆ. ಕಣ್ಣಿನ ಅಳತೆ ಮತ್ತು ಲೈಟಿನ ಶಾಖದಿಂದ ಚಿತ್ರೀಕರಣ ಮಾಡುತ್ತಿದ್ದ ಏಕೈಕ ಛಾಯಾಗ್ರಾಹಕ ಅಂದರೆ ಆರ್. ಚಿಟ್ಟಿ ಬಾಬು ಎಂದು ಬಸವರಾಜ್ ಸ್ಮರಿಸಿಕೊಳ್ಳುತ್ತಾರೆ.