ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರರು ದಿನೇಶ್ ಬಾಬೂ ನಿರ್ದೇಶನದ ‘ಅಭ್ಯಂಜನ’ ಸಿನಿಮಾ ನೋಡಿ ಭಾವುಕರಾಗಿದ್ದಾರೆ.
ನಿನ್ನೆ ‘ಅಭ್ಯಂಜನ’ ಸಿನಿಮಾದ ಪೂರ್ವಭಾವಿ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಸಿನಿಮಾ ನೋಡಿದ ಕಂಬಾರರು ಭಾವುಕರಾಗಿ ಚಿತ್ರದಲ್ಲಿ ಅಭಿನಯಿಸಿದ್ದ ಕರಿ ಸುಬ್ಬು ಅವರನ್ನು ಅಭಿನಂದಿಸಿದ್ರು.
ಇನ್ನು ಈ ಸಿನಿಮಾದಲ್ಲಿ ‘ತಲೈ ಕೂತಲ್’ ಪದ್ಧತಿಯ ಕುರಿತು ತೋರಿಸಲಾಗಿದೆ. ತಲೈ ಕೂತಲ್ ಅಂದ್ರೆ ಸಾಯಲೂ ಆಗದೆ ಬದುಕಲೂ ಆಗದೆ ನರಳುವ ವಯಸ್ಸಾದ ವ್ಯಕ್ತಿ ತಲೆಗೆ ಕೊಬ್ಬರಿ ಎಣ್ಣೆ, ಹರಳೆಣ್ಣೆ, ಎಳ್ಳಿನ ಎಣ್ಣೆ ಮಿಶ್ರಿತ ತೈಲ ಹಚ್ಚಿ, ತಣ್ಣೀರಿನಿಂದ ಸ್ನಾನ ಮಾಡಿಸಿ, ಆರು ಎಳನೀರು ಮತ್ತು ಒಂದು ಲೋಟ ಹಾಲನ್ನು ಕುಡಿಸಿ ಹಾಸಿಗೆ ಮೇಲೆ ಮಲಗಿಸಲಾಗುತ್ತದೆ. ಹಾಗೆ ಮಾಡಿದಾಗ ವಯಸ್ಸಾದ ವ್ಯಕ್ತಿ ಎರಡು ದಿವಸದಲ್ಲಿ ಯಾವುದೇ ನೋವಿಲ್ಲದೆ ಪ್ರಾಣ ಬಿಡುತ್ತಾನೆ. ಈ ಪದ್ಧತಿಯನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನು ಮಾಡಲಾಗಿದೆ.
ಚಿತ್ರಕ್ಕೆ ನಾಗೇಶ್ವರ ರಾವ್ ಬಂಡವಾಳ ಹೂಡಿದ್ದು, ದಿನೇಶ್ ಬಾಬೂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಬರುವ ವಯಸ್ಸಾದ ಪಾತ್ರವನ್ನು ಮಾಡಿರುವ ಕರಿ ಸುಬ್ಬ ಅವರಿಗೆ ತಮಗೆ ಹೊದಿಸಿದ ಶಾಲನ್ನು ಹಾಕಿ ಕಂಬಾರರು ಸನ್ಮಾನ ಮಾಡಿದ್ರು.
‘ಅಭ್ಯಂಜನ’ ಚಿತ್ರದಲ್ಲಿ ನಾರಾಯಣಸ್ವಾಮಿ ಹಾಗೂ ಅಪೂರ್ವ ನಾಯಕ-ನಾಯಕಿ ಪಾತ್ರವನ್ನು ನಿರ್ವಹಿದ್ರೆ, ಲಕ್ವ ಹೊಡೆದ ವಯಸ್ಸಾದ ತಂದೆ ಪಾತ್ರಧಾರಿಯಾಗಿ ಕರಿ ಸುಬ್ಬು ಕಾಣಿಸಿಕೊಂಡಿದ್ದಾರೆ.