ಅನುಷ್ಕಾ ಶೆಟ್ಟಿ ಟಾಲಿವುಡ್ ನಾಯಕಿಯರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ನಟಿ. 'ಭಾಗಮತಿ' ಚಿತ್ರದ ನಂತರ ಕೆಲವು ದಿನಗಳ ಕಾಲ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದ ಅನುಷ್ಕಾ ಈಗ 'ಸೈಲೆನ್ಸ್' ಹಾಗೂ 'ಸೈ ರಾ ನರಸಿಂಹರೆಡ್ಡಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
- " class="align-text-top noRightClick twitterSection" data="
">
ಇನ್ನು ಅನುಷ್ಕಾ ಎಷ್ಟೇ ಬ್ಯುಸಿಯಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಷೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗಿದ್ದಾರೆ. ನಿನ್ನೆ ಅನುಷ್ಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸುಮಾರು 7 ವರ್ಷಗಳ ಹಿಂದೆ ನಿಧನರಾದ ತಮ್ಮ ಅಸಿಸ್ಟೆಂಟ್ ರವಿ ಎಂಬುವರೊಂದಿಗೆ ಇರುವ ಫೋಟೋವೊಂದನ್ನು ಷೇರ್ ಮಾಡಿಕೊಂಡಿದ್ದಾರೆ. 'ನಿಜಕ್ಕೂ ನಮ್ಮನ್ನು ಇಷ್ಟಪಡುವವರು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಕಳೆದ 14 ವರ್ಷಗಳಿಂದ ನಾನು ಸಿನಿರಂಗದಲ್ಲಿದ್ದೇನೆ. ನಿಮಗೆ ಬಹಳ ಹತ್ತಿರವಾದ ವ್ಯಕ್ತಿ ಇನ್ನು ನಿಮ್ಮ ಜೀವನದಲ್ಲಿ ಇಲ್ಲ ಎಂದಾಗ ನಿಮ್ಮ ಜೀವನದ ಸ್ವಲ್ಪ ಭಾಗವನ್ನು ಅವರೊಂದಿಗೆ ಕೊಂಡೊಯ್ದರೆಂದೇ ಅರ್ಥ. ಒಂದು ಸುಂದರವಾದ ವ್ಯಕ್ತಿತ್ವ ಹೊಂದಿದ್ದ ರವಿ ನಮ್ಮನ್ನು ಅಗಲಿ 7 ವರ್ಷಗಳಾಯಿತು ಎಂದರೆ ನಂಬಲಾಗುತ್ತಿಲ್ಲ. ಸಾವಿನ ನಂತರ ಏನು ಎಂಬ ವಿಷಯ ನನಗೆ ತಿಳಿದಿಲ್ಲ. ಆದರೆ ಆತ ನನ್ನ ಮನಸ್ಸಿನಲ್ಲಿ ಸದಾ ಇರುತ್ತಾರೆ' ಎಂದು ಅನುಷ್ಕಾ ಭಾವಪೂರ್ಣವಾಗಿ ಬರೆದಿದ್ದಾರೆ.
7 ವರ್ಷಗಳ ಹಿಂದೆ ನಿಧನರಾದ ವ್ಯಕ್ತಿಯನ್ನು ಇನ್ನೂ ನೆನಪಿನಲ್ಲಿಟ್ಟುಕೊಂಡು ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ಬಗ್ಗೆ ಅಭಿಮಾನಿಗಳು ಅನುಷ್ಕಾ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ರವಿ ಮಾತ್ರವಲ್ಲ ನೀವು ಕೂಡಾ ಸುಂದರ ಮನಸ್ಸುಳ್ಳವರು, ನೀವು ಬಹಳ ಸ್ವೀಟ್ ಪರ್ಸನ್ ಎಂದು ಸ್ವೀಟಿಯನ್ನು ಹೊಗಳಿದ್ದಾರೆ.