ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಶೋ ಅಕ್ಷರಮಾಲೆಯ ನಿರೂಪಕರಾಗಿ ಕಿರುತೆರೆಯಲ್ಲಿ ಮನೆ ಮಾತಾಗಿರುವ ಅಭಿಜಿತ್ ಇದೀಗ ಧಾರಾವಾಹಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ನಟ, ಗಾಯಕ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅಭಿಜಿತ್ ಕಿರುತೆರೆಗಾಗಿ ಬಣ್ಣ ಹಚ್ಚಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ವಕೀಲರಾಗಿ ಅಭಿಜಿತ್ ಕಾಣಿಸಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಸಹನಟ, ನಾಯಕ, ಖಳನಟನ ಜೊತೆಗೆ ಪೋಷಕ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ಅಭಿಜಿತ್ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಲು ತಯಾರಾಗಿದ್ದಾರೆ. 'ಕಾಲೇಜ್ ಹೀರೋ'ದಲ್ಲಿ ಖಳನಾಯಕನಾಗಿ ನಟನಾ ಯಾನ ಆರಂಭಿಸಿದ ಇವರು, ಮುಂದೆ ಮಾಂಗಲ್ಯ, ಚೈತ್ರದ ಪ್ರೇಮಾಂಜಲಿ, ಸಿಂಧೂರ ತಿಲಕ, ಜೀವನ ಚೈತ್ರ, ಸರ್ವರ್ ಸೋಮಣ್ಣ, ತುಂಬಿದ ಮನೆ, ಮುದ್ದಿನ ಮಾವ, ಯಜಮಾನ, ಕೋಟಿಗೊಬ್ಬ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಧಾರಾವಾಹಿಯ ಪ್ರೋಮೋ ಹರಿದಾಡುತ್ತಿದ್ದು, ತಮ್ಮ ನೆಚ್ಚಿನ ನಟನನ್ನು ಕಿರುತೆರೆಯಲ್ಲಿ ನೋಡಲು ವೀಕ್ಷಕರು ಕಾತರರಾಗಿದ್ದಾರೆ.