ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬಹು ನಿರೀಕ್ಷೆ ಹುಟ್ಟುಹಾಕಿರುವ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿ ಇಂದಿನಿಂದ ಆರಂಭವಾಗಲಿದೆ. ಈಗಾಗಲೇ ಪ್ರೋಮೋದ ಮೂಲಕ ಸಾಕಷ್ಟು ಸುದ್ದಿ ಮಾಡಿರುವ ಈ ಧಾರಾವಾಹಿ ಇಂದಿನಿಂದ ಪ್ರಸಾರ ಆರಂಭಿಸಲಿದೆ.
'ನಾಮ್ ಇರುವರ್ ನಮಕ್ಕು ಇರುವರ್' ತೆಲುಗು ಧಾರಾವಾಹಿಯ ರಿಮೇಕ್ ಆಗಿರುವ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಆರತಿ ಆಗಿ ಕುಲವಧು ಧಾರಾವಾಹಿಯ ಧನ್ಯಾ ಖ್ಯಾತಿಯ ದೀಪಿಕಾ ಮತ್ತು ಕೀರ್ತಿಯಾಗಿ ರಕ್ಷಾಬಂಧನ ಧಾರಾವಾಹಿಯ ರಮ್ಯಾಳಾಗಿ ಮಿಂಚಿದ ಮೇಘಾ ಶೆಣೈ ಕಾಣಿಸಿಕೊಳ್ಳಲಿದ್ದಾರೆ. ಹಳ್ಳಿಯ ವಾತಾವರಣದಲ್ಲಿಯೇ ಬೆಳೆದಿರುವ ಆರತಿಗೆ ಹಳ್ಳಿಯ ಜೀವನವೇ ಇಷ್ಟ. ಆದರೆ ಇದಕ್ಕೆ ತದ್ವಿರುದ್ಧ ಕೀರ್ತಿ.
ಆಡಂಬರದ ಜೀವನವನ್ನೇ ರೂಢಿ ಮಾಡಿಕೊಂಡಿರುವ ಕೀರ್ತಿ ಬೆಳೆದಿದ್ದೆಲ್ಲಾ ಪಟ್ಟಣದಲ್ಲಿ. ಜೊತೆಗೆ ಆಕೆಗೆ ಬೈಕ್ ಬಿಡುವುದು ಕೂಡಾ ಇಷ್ಟ. ಇನ್ನು ತೇಜಸ್ ಗೌಡ ಅವರು ಅಜಯ್ ಮತ್ತು ವಿಜಯ್ ಎಂಬ ದ್ವಿಪಾತ್ರದ ಮೂಲಕ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಆರತಿ ಮತ್ತು ಕೀರ್ತಿ ಅಜಯ್, ವಿಜಯ್ ರನ್ನು ಭೇಟಿಯಾಗುವುದಾದರೂ ಹೇಗೆ, ಮುಂದೇನಾಗುತ್ತದೆ ಎಂಬುದೆಲ್ಲಾ ಧಾರಾವಾಹಿ ನೋಡಿಯೇ ತಿಳಿಯಬೇಕಾಗಿದೆ.
- " class="align-text-top noRightClick twitterSection" data="
">
ಮುಖ್ಯವಾದ ಸಂಗತಿಯೆಂದರೆ ಈ ಧಾರಾವಾಹಿಯ ಮೂಲಕ ಉಮಾಶ್ರೀ ಅವರು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕಿರಾತಕ ಅಜಯ್ ನ ಅಮ್ಮ ಪುಟ್ಮಲ್ಲಿಯಾಗಿ ಉಮಾಶ್ರೀ ಅವರು ಅಭಿನಯಿಸಿದ್ದಾರೆ.