ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ 'ಹ್ಯಾಂಡ್ಸ್ಅಪ್' ಹಾಡು ಬಿಡುಗಡೆಯಾದ ದಿನದಿಂದ ಸಖತ್ ಕ್ರೇಜ್ ಹುಟ್ಟಿಸಿದೆ. ಸಾಮಾನ್ಯ ಜನರೊಂದಿಗೆ ಸೆಲಬ್ರಿಟಿಗಳು ಕೂಡಾ ಈ ಸಿಗ್ನೇಚರ್ ಸ್ಟೆಪ್ ಟಿಕ್ಟಾಕ್ ಮಾಡುತ್ತಾ ಚಾಲೆಂಜ್ ಸ್ವೀಕರಿಸಿ, ಉಳಿದವರಿಗೂ ಚಾಲೆಂಜ್ ನೀಡುತ್ತಿದ್ದಾರೆ.
- " class="align-text-top noRightClick twitterSection" data="">
ಎಲ್ಲಿ ನೋಡಿದರೂ 'ಅವನೇ ಶ್ರೀಮನ್ನಾರಾಯಣ'ನ ಜಪ ಮಾಡುತ್ತಿದ್ದಾರೆ. ಡಿಸೆಂಬರ್ 27 ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು ರೈಲು ಸೇರಿ ವಾಹನಗಳ ಹಿಂಭಾಗ ಚಿತ್ರದ ಪೋಸ್ಟರ್ಗಳನ್ನು ಅಂಟಿಸುವ ಮೂಲಕ ಚಿತ್ರದ ಪ್ರಮೋಷನ್ ಮಾಡಲಾಗುತ್ತಿದೆ. ಸ್ನೇಹಿತರು ನೀಡುವ ಚಾಲೆಂಜ್ ಸ್ವೀಕರಿಸುವ ಮೂಲಕ ಎಲ್ಲರೂ ಹ್ಯಾಂಡ್ಸ್ ಅಪ್ ಎನ್ನುತ್ತಿದ್ದಾರೆ. ಇದೀಗ ಪೈಲ್ವಾನ್ ಬೆಡಗಿ ಆಕಾಂಕ್ಷ ಸಿಂಗ್ ಕೂಡಾ 'ಹ್ಯಾಂಡ್ಸ್ ಅಪ್' ಎನ್ನುತ್ತಿದ್ದಾರೆ. ಈ ಹಾಡಿಗೆ ಆಕಾಂಕ್ಷ ಕೂಡಾ ಫಿದಾ ಆಗಿದ್ದಾರೆ. ಶಾನ್ವಿ ಶ್ರೀವಾತ್ಸವ್ ನೀಡಿದ ಚಾಲೆಂಜ್ ಸ್ವೀಕರಿಸಿರುವ ಆಕಾಂಕ್ಷ ಸಿಂಗ್ ತಾವೂ ಕೂಡಾ ಸ್ಟೆಪ್ ಹಾಕಿ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಕನ್ನಡ ಹಾಡಿಗೆ ಆಕಾಂಕ್ಷ ಸ್ಟೆಪ್ ಹಾಕಿರುವುದು ಕನ್ನಡ ಅಭಿಮಾನಿಗಳಿಗೆ ಖುಷಿ ನೀಡಿದೆ.