ತಮ್ಮ ನೆಚ್ಚಿನ ನಟ, ನಟಿಯರನ್ನು ನೋಡಲು, ಮಾತನಾಡಿಸಲು ಅಭಿಮಾನಿಗಳು ಏನು ಬೇಕಾದ್ರು ಮಾಡಲು ಸಿದ್ದರಾಗಿರುತ್ತಾರೆ. ಇದಕ್ಕೆ ಒಂದು ಅದ್ಭುತ ಸಾಕ್ಷಿಯಂತಿದೆ ಈ ಸ್ಟೋರಿ.
ಹೌದು ಕರ್ನಾಟಕ ಮೂಲದ ಪೂಜಾ ಹೆಗ್ಡೆ ಇದೀಗ ದೊಡ್ಡ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ತೆಲುಗು ಸೇರಿದಂತೆ ಬಾಲಿವುಡ್ಗೂ ಕೂಡ ಎಂಟ್ರಿ ಕೊಟ್ಟಿರುವ ಇವರು, ಹೃತಿಕ್ ರೋಶನ್ ಜೊತೆ ಮಹೆಂಜೋದಾರೋ ಸಿನಿಮಾಲ್ಲಿ ನಟಿಸಿದ್ದಾರೆ. ಈ ನಟಿಯನ್ನು ನೋಡಲು ಅಭಿಮಾನಿಯೊಬ್ಬ ಬರೋಬ್ಬರಿ 5 ದಿನಗಳ ಕಾಲ ರಸ್ತೆಯಲ್ಲೇ ಮಲಗಿದ್ದನಂತೆ...
- " class="align-text-top noRightClick twitterSection" data="
">
ಈ ಬಗ್ಗೆ ಸ್ವತಃ ಪೂಜಾ ಹೆಗ್ಡೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಾಕಿ, ಭಾಸ್ಕರ್ ರಾವ್ ಎಂಬ ಯುವಕ ಬಾಂಬೆಗೆ ಬಂದು ನನಗೋಸ್ಕರ 5 ದಿನಗಳ ಕಾಲ ರಸ್ತೆಯಲ್ಲೇ ಮಲಗಿದ್ದಾನೆ. ಈ ಯುವಕ ನನ್ನನ್ನು ನೋಡಬೇಕೆಂಬ ಆಸೆಯಿಂದ ಈ ರೀತಿ ಮಾಡಿದ್ದಾನೆ. ನೀವು ಇಲ್ಲಿಗೆ ಬಂದಿದ್ದಕ್ಕೆ ಧನ್ಯವಾದಗಳು. ನನಗೆ ಖುಷಿಯಾಯಿತು. ಆದ್ರೆ ನನ್ನನ್ನು ನೋಡಲು ಅಭಿಮಾನಿಗಳು ಈ ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ ಎಂಬುದರ ಬಗ್ಗೆ ನೋವೂ ಕೂಡ ಆಯಿತು ಎಂದು ಪೂಜಾ ಹೆಗ್ಡೆ ಬರೆದುಕೊಂಡಿದ್ದಾರೆ.