ಅಂದು ‘ದೃಶ್ಯ’ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ವಿಚಂದ್ರನ್ ಮನೆಯ ಮಗಳ ರಕ್ಷಣೆಗೆ ಪಣ ತೊಟ್ಟರು. ಇಂದು ‘ಆ ದೃಶ್ಯ’ ಸಿನಿಮಾದಲ್ಲಿ ಹೆತ್ತ ಮಗನ ರಕ್ಷಣೆಗೆ ಶ್ರಮಿಸಿದ್ದಾರೆ. ಇನ್ನು ಈ ಹಿಂದೆ ತೆರೆ ಕಂಡಿದ್ದ ಕನ್ನಡದ ‘ದೃಶ್ಯ’ ಮಲಯಾಳಂ ಭಾಷೆಯ ‘ದೃಶ್ಯಮ್’ ರೀಮೇಕ್ ಆಗಿತ್ತು. ಇಂದು ‘ಆ ದೃಶ್ಯ’ ತಮಿಳಿನ ‘ದೃವಂಗಳ್ ಪತಿನಾರು’ ರೀಮೇಕ್.
ಈ ಚಿತ್ರದ ಅಂತ್ಯದಲ್ಲಿ ರಾಮಾಯಣವನ್ನು ರಾವಣನ ಮುಖಾಂತರ ಹೇಳಿದರೆ ಹೇಗೋ ಹಾಗಿದೆ ಈ ಚಿತ್ರದ ನಿರೂಪಣೆ ಎಂದು ನಾಯಕ ಹೇಳುತ್ತಾರೆ. ನಿರ್ದೇಶಕ ಶಿವ ಗಣೇಶ್ ರೀಮೇಕ್ ಮಾಡುವಾಗ ಯಥಾವತ್ ಮಾಡದೆ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ ಪೊಲೀಸ್ ಇಲಾಖೆಯಲ್ಲೇ ಇದ್ದುಕೊಂಡು ಉನ್ನತ ಅಧಿಕಾರಿ ತಪ್ಪು ಮಾಡಿದಾಗ ಮಗನ ಸಂರಕ್ಷಣೆ ಮಾಡುವುದು ಚಿತ್ರದ ಅಂತ್ಯದಲ್ಲಿ ಕಂಡುಬರುತ್ತದೆ.
ಇನ್ನು ಈ ಪಾತ್ರ ವಿ.ರವಿಚಂದ್ರನ್ಗೆ ಸರಿಯಾಗಿ ಹೊಂದಿಕೊಂಡು ಲೀಲಾಜಾಲವಾಗಿ ಅಭಿನಯಿಸಿರುವುದು ಚಿತ್ರದ ಮೊದಲ ಶಕ್ತಿ. ಮೂಲ ಸಿನಿಮಾವನ್ನು ನೋಡದೆ ಇರುವವರಿಗೆ ‘ಆ ದೃಶ್ಯ’ ಕುತೂಹಲ ಕೆರಳಿಸಿ ನೋಡಿಸಿಕೊಂಡು ಹೋಗುವ ಸಿನಿಮಾ. ವಿ.ರವಿಚಂದ್ರನ್, ಅಚ್ಯುತ್ ಕುಮಾರ್ ಬಿಟ್ಟರೆ ಮಿಕ್ಕವರನ್ನು ಹೊಸದಾಗಿ ಆಯ್ಕೆ ಮಾಡಿಕೊಂಡಿರುವುದು ಚಿತ್ರದ ಅಂತ್ಯದವೆರೆಗೂ ಗುಟ್ಟು ಬಯಲಾಗುವುದಿಲ್ಲ.
- " class="align-text-top noRightClick twitterSection" data="">
ಸಿನಿಮಾದಲ್ಲಿ ರವಿಚಂದ್ರನ್ ಎರಡು ಶೇಡ್ನಲ್ಲಿ ಅಭಿನಯಿಸಿದ್ದಾರೆ. ಒಂದು ಯುವಕನಾಗಿ, ಮತ್ತೊಂದು ವಯಸ್ಸಾದ ಪಾತ್ರ. ಈ ಎರಡು ಪಾತ್ರಗಳಲ್ಲಿ ಅವರು ಸಲೀಸಾಗಿ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ಚೈತ್ರ ಆಚಾರ್, ನಿಸರ್ಗ, ವಿ.ರವಿಚಂದ್ರ ಸಹಾಯಕನ ಪಾತ್ರ, ಯಶ್ ಶೆಟ್ಟಿ, ಅಜಿತ್ ಜಯರಾಜ್ ಪಾತ್ರಗಳಿಗೆ ಸರಿಯಾಗಿ ಹೊಂದಾಣಿಕೆ ಆಗಿದ್ದಾರೆ.
ಚಿತ್ರದಲ್ಲಿ ಹಿನ್ನೆಲೆ ಸಂಗೀತವನ್ನು ಗೌತಮ್ ಶ್ರೀವಾತ್ಸವ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ಛಾಯಾಗ್ರಹಣದ ಬೆಂಬಲ ಸಹ ಈ ಚಿತ್ರಕ್ಕೆ ಸೊಗಸಾಗಿದೆ. ಕಡಿಮೆ ಅವಧಿಯಲ್ಲಿ ಒಂದು ಕುತೂಹಲ ತುಂಬಿದ ಸಿನಿಮಾವನ್ನು ಶಿವ ಗಣೇಶ್ ನಿರ್ದೇಶನ ಮಾಡಿದ್ದು, ನೋಡುಗರಿಗೆ ಕುತೂಹಲ ಹುಟ್ಟಿಸುತ್ತದೆ.
ಚಿತ್ರ: ಆ ದೃಶ್ಯ, ನಿರ್ಮಾಪಕ : ಕೆ.ಮಂಜು,
ನಿರ್ದೇಶನ : ಶಿವ ಗಣೇಶ್
, ಸಂಗೀತ : ಗೌತಮ್ ಶ್ರೀವತ್ಸವ್