ETV Bharat / sitara

‘ರಿವೈಂಡ್’ ಮೂಲಕ ಚಂದನವನಕ್ಕೆ ಕಂಪ್ಯೂಟರ್​ ವಿಜ್ಞಾನಿಯ ಎಂಟ್ರಿ.. - Rewind

ಕಂಪ್ಯೂಟರ್ ವಿಜ್ಞಾನಿಯೊಬ್ಬರು ಚಿತ್ರರಂಗದಲ್ಲಿ ಮಿಂಚಬೇಕೆಂಬ ದೊಡ್ಡ ಕನಸು ಹೊತ್ತು ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ರಿವೈಂಡ್’ ಚಿತ್ರದ ಮೂಲಕ ನಟ, ನಿರ್ದೇಶಕರಾಗಿ ಮಿಂಚುವ ಕನಸು ಕಟ್ಟಿದ್ದಾರೆ.

‘ರಿವೈಂಡ್’ ಮೂಲಕ ಚಂದನವನಕ್ಕೆ ಕಂಪ್ಯೂಟರ್​ ವಿಜ್ಞಾನಿಯ ಎಂಟ್ರಿ
author img

By

Published : Sep 8, 2019, 10:17 AM IST

ಕಂಪ್ಯೂಟರ್ ವಿಜ್ಞಾನಿಯೊಬ್ಬರು ಚಿತ್ರರಂಗದಲ್ಲಿ ಮಿಂಚಬೇಕೆಂಬ ದೊಡ್ಡ ಕನಸು ಹೊತ್ತು ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ರಿವೈಂಡ್’ ಚಿತ್ರದ ಮೂಲಕ ನಟ, ನಿರ್ದೇಶಕರಾಗಿ ಮಿಂಚುವ ಕನಸು ಕಟ್ಟಿದ್ದಾರೆ.

ವಿಜ್ಞಾನಿಯಾಗಿರುವ ನಟ, ನಿರ್ದೇಶಕ ತೇಜಸ್ ಅವರಿಗೆ ಚಿತ್ರರಂಗ ಹೊಸದಲ್ಲ. ತೇಜಸ್ ಈಗಾಗಲೇ ತಮಿಳಿನಲ್ಲಿ ಕೊಂಜಂ ವೆಯಿಲ್ ಕೊಂಜಂ, ಮಝಾಯಿ, ಕದಲು ಕು ಮರಣಾನಂ ಇಲ್ಲೈ, ಗಾಂಥಮ್ ಮತ್ತು ಮೋಜಿವತ್ ಯಾಥ್ಲೇಲ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ನಟ ತೇಜಸ್ ಕನ್ನಡ ಚಿತ್ರರಂಗದ ಹಿರಿಯ ನಟರಾದ ಸುಂದರ್ ರಾಜ್ ಅವರ ತಮ್ಮನ ಮಗ ಎನ್ನುವುದು ಮತ್ತೊಂದು ವಿಶೇಷವಾಗಿದೆ. ತಮಿಳು ಚಿತ್ರರಂಗದಲ್ಲಿ ಈಗಾಗಲೇ ಸಿನಿ ಜರ್ನಿ ಆರಂಭಿಸಿರುವ ತೇಜಸ್ ಅವರಿಗೆ ‘ರಿವೈಂಡ್’ ಕನ್ನಡದ ಮೊದಲ ಚಿತ್ರವಾಗಿದೆ. ಈಗಾಗಲೇ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ.

‘ರಿವೈಂಡ್’ ಮೂಲಕ ಚಂದನವನಕ್ಕೆ ಕಂಪ್ಯೂಟರ್​ ವಿಜ್ಞಾನಿಯ ಎಂಟ್ರಿ

ರಿವೈಂಡ್ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ತೆರೆ ಕಾಣಲಿದೆ. ಚಿತ್ರದ ಕೆಲ ಭಾಗವನ್ನು ಬೆಂಗಳೂರು ಹಾಗೂ ಸಿಂಗಪುರದಲ್ಲಿ ಶೂಟಿಂಗ್ ಮಾಡಿದ್ದು, ಇನ್ನುಳಿದ ಭಾಗವನ್ನು ಯುರೋಪ್​ನಲ್ಲಿ ಚಿತ್ರದ ಶೂಟಿಂಗ್ ಮಾಡಲು ಪ್ಲಾನ್ ಮಾಡಿರುವುದಾಗಿ ನಿರ್ದೇಶಕ ತೇಜಸ್ ತಿಳಿಸಿದರು. ಈ ಚಿತ್ರದಲ್ಲಿ ನಾಯಕಿಯಾಗಿ ಕಿರುತೆರೆ ನಟಿ ಚಂದನ ನಟಿಸಿದ್ದಾರೆ. ರಿವೈಂಡ್ ಚಿತ್ರದಲ್ಲಿ 4 ಹಾಡುಗಳಿದ್ದು, ಎ.ಆರ್.ರೆಹಮಾನ್ ಅವರ ಶಿಷ್ಯ ಸಬೇಶ್ ಸೋಲೋಮೊನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸಂಪತ್ ಕುಮಾರ್, ಸುಂದರ ರಾಜ್ ಸೇರಿದಂತೆ ಬಹುತಾರಾಗಣವಿದೆ. ಈ ವರ್ಷದ ಅಂತ್ಯದಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

Intro:ಸ್ಯಾಂಡಲ್ವುಡ್ಗೆ ಇತ್ತೀಚಿನ ದಿನಗಳಲ್ಲಿ ಟೆಕ್ಕಿಗಳು ಎನ್ ಆರ್ ಎಂಟ್ರಿಕೊಟ್ಟು ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದರು. ಆದರೆ ಈಗ ಕಂಪ್ಯೂಟರ್ ವಿಜ್ಞಾನಿಯೊಬ್ಬ ಚಿತ್ರರಂಗದಲ್ಲಿ ಮಿಂಚಬೇಕೆಂಬ ದೊಡ್ಡ ಕನಸು ಹೊತ್ತು ಚಂದನವನಕ್ಕೆ ಎಂಟ್ರಿಕೊಟ್ಟಿದ್ದಾನೆ. ಎಸ್ ವೃತ್ತಿಯಲ್ಲಿ ಕಂಪ್ಯೂಟರ್ ವಿಜ್ಞಾನಿಯಾಗಿರುವ ರಿವೈಂಡ್ ಚಿತ್ರದ ಮೂಲಕ ನಟ ನಿರ್ದೇಶಕನಾಗಿ ಎಂಟ್ರಿ ಕೊಟ್ಟಿದ್ದಾನೆ.

Body:ವಿಜ್ಞಾನಿಯಾಗಿರುವ ನಟ ನಿರ್ದೇಶಕ ತೇಜಸ್ ಚಿತ್ರರಂಗವೇನೂ ಹೊಸದೇನಲ್ಲ. ತೇಜಸ್ ಈಗಾಗಲೇ ತಮಿಳಿನ ಕೊಂಜಂ ವೆಯಿಲ್ ಕೊಂಜಂ, ಮಝಾಯಿ, ಕದಲು ಕು ಮರಣಾನಂ ಇಲ್ಲೈ,ಗಾಂಥಮ್ ಮತ್ತು ಮೋಜಿವತ್ ಯಾಥ್ಲೇಲ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ನಟ ತೇಜಸ್ ಕನ್ನಡ ಚಿತ್ರರಂಗದ ಹಿರಿಯ ನಟರಾದ ಸುಂದರ್ ರಾಜ್ ಅವರ ತಮ್ಮನ ಮಗ ಎನ್ನುವುದು ಮತ್ತೊಂದು ವಿಶೇಷವಾಗಿದೆ. ತಮಿಳು ಚಿತ್ರರಂಗದಲ್ಲಿ ಈಗಾಗಲೇ ಸಿನಿ ಜರ್ನಿ ಆರಂಭಿಸಿರುವ ತೇಜಸ್ ಗೆ ರಿವೈಂಡ್ ಕನ್ನಡದ ಮೊದಲ ಚಿತ್ರವಾಗಿದೆ. ಈಗಾಗಲೇ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ತೇಜಸ್ ಚಿತ್ರತಂಡದ ಜೊತೆ ಮಾಧ್ಯಮಗಳ ಮುಂದೆ ಹಾಜರಾಗಿದ್ದರು. ಅಲ್ಲದೆ ಈ ಪತ್ರಿಕಾಗೋಷ್ಠಿಯಲ್ಲಿ ಸುಂದರ ದಂಪತಿ ಕೂಡ ತಮ್ಮ ಕುಟುಂಬದ ಕುಡಿಯನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಲುವಾಗಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು.

Conclusion:ಇನ್ನು ರಿವೈಂಡ್ ಚಿತ್ರ ಸೈಕಲ್ ಚಿತ್ರವಾಗಿದ್ದು ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಮೂಡಿಬರಲಿದೆ, ಇನ್ನು ಚಿತ್ರವನ್ನು ಬೆಂಗಳೂರು ಹಾಗೂ ಸಿಂಗಪುರದಲ್ಲಿ ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ಯುರೋಪ್ನಲ್ಲಿ ಚಿತ್ರದ ಶೂಟಿಂಗ್ ಮಾಡಲು ಪ್ಲಾನ್ ಮಾಡಿರುವುದಾಗಿ ನಿರ್ದೇಶಕ ತೇಜಸ್ ತಿಳಿಸಿದರು. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಕಿರುತೆರೆ ನಟಿ ಚಂದನ ರಿವೈಂಡ್ ಚಿತ್ರದ ಮೂಲಕ ಚಂದನವನಕ್ಕೆ ಜಿಗಿದಿದ್ದಾರೆ. ಇನ್ನು ರಿವೈಂಡ್ ಚಿತ್ರದಲ್ಲಿ 4 ಹಾಡುಗಳಿದ್ದು ಎಆರ್ ರೆಹಮಾನ್ ಅವರ ಶಿಷ್ಯ ಸಬೇಶ್ ಸೋಲೋಮೊನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸಂಪತ್ ಕುಮಾರ್ ಸುಂದರ ರಾಜ್ ಮಂಡ್ಯದ ವಿ ಸೇರಿದಂತೆ ಬಹುತಾರಾಗಣದ ಚಿತ್ರವನ್ನು ಈ ವರ್ಷದ ಅಂತ್ಯದಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಸತೀಶ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.